45ನೇ ಮಂಗಳೂರು ವಿ ವಿ ಅಂತರ್ ಕಾಲೇಜು ಅಥ್ಲೆಟಿಕ್ಸ್ : 23ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

Upayuktha
0

 


ಮೂಡಬಿದಿರೆ: ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನವೆಂಬರ್ 24 ರಿಂದ 26 ರವರೆಗೆ ನಡೆದ ಮಂಗಳೂರು ಅಂತರ್ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ತಂಡವು 23 ನೇ ಬಾರಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.


ಆಳ್ವಾಸ್ ತಂಡವು ಪುರುಷರ ವಿಭಾಗದಲ್ಲಿ 265, ಮಹಿಳೆಯರ ವಿಭಾಗದಲ್ಲಿ 207 ಅಂಕ ಒಟ್ಟು 472 ಅಂಕ ಗಳಿಸಿತು. 42 ಚಿನ್ನ 25 ಬೆಳ್ಳಿ 04 ಕಂಚು ಒಟ್ಟು 71 ಪದಕ ಗಳಿಸಿ ಸಮಗ್ರ ತಂಡ ಪ್ರಶಸ್ತಿ ಪಡೆಯಿತು. ಆಳ್ವಾಸ್‌ನ ಕ್ರೀಡಾಪಟುಗಳು 06 ನೂತನ ಕೂಟ ದಾಖಲೆಗಳನ್ನು ನಿರ್ಮಿಸಿದರು.  ಅನಿಕೇತ್ ಗುಂಡು ಎಸೆತ, ನಾಗೇಂದ್ರ ಅಣ್ಣಪ್ಪ ನಾಯ್ಕ್ ಚಕ್ರ ಎಸೆತ, ಕೃಷಿಕ್ ಎಂ. 110  ಹರ್ಡಲ್ಸ್, ನಿಧಿ ಯಾದವ್ ಹ್ಯಾಮರ್ ತ್ರೋ, 4*400 ರಿಲೆ ಪುರುಷರ ತಂಡವು ನೂತನ ದಾಖಲೆಗಳನ್ನು ಮಾಡಿರುತ್ತಾರೆ.


ಆಳ್ವಾಸ್‌ನ ದೀಕ್ಷಿತ ರಾಮಕೃಷ್ಣ ಗೌಡ ಮಹಿಳಾ ವಿಭಾಗದ ಬೆಸ್ಟ್ ಅಥ್ಲೀಟ್ ಆಗಿ ಹೊರಹೊಮ್ಮಿದರು.  ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ  ಅಥ್ಲೆಟಿಕ್ಸ್ ಕ್ರೀಡಾಕೂಟದ 47 ಸ್ಪರ್ಧೆಗಳಲ್ಲಿ, 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ಹೆಸರಿನಲ್ಲಿರುವುದು ಇಲ್ಲಿ ಉಲ್ಲೇಖನೀಯ.


ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.  



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top