ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯಲ್ಲಿ 6, 7, 8ನೇ ತರಗತಿಗಳಿಗೆ ನೂತನ ಬ್ಯಾಚ್

Upayuktha
0

ಬಹುಜನರ ಬೇಡಿಕೆಗೆ ಸ್ಪಂದಿಸಿ 2026-27ನೇ ಸಾಲಿನಿಂದ ಆರಂಭ



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಪುತ್ತೂರಿನ ಪೋಷಕರ ಒತ್ತಾಯದ ಮೇರೆಗೆ 2026-27ನೇ ಸಾಲಿನಿಂದ 6, 7 ಹಾಗೂ 8ನೇ ತರಗತಿಗಳಿಗೆ ಸಂಬಂಧಿಸಿದಂತೆ ಎರಡನೆಯ ನೂತನ ಬ್ಯಾಚ್ ಅನ್ನು ಆರಂಭಗೊಳಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅನೇಕ ಮಂದಿ ಪೋಷಕರು, ಜನಪ್ರತಿನಿಧಿಗಳು ಹೊಸ ಬ್ಯಾಚ್ ಆರಂಭಿಸುವಂತೆ ನಿರಂತರ ಒತ್ತಡ ಹೇರುತ್ತಾ ಬಂದಿದ್ದರು. 


ಪುತ್ತೂರಿನ ಮೊದಲ ಸಿಬಿಎಸ್‍ಇ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಂಬಿಕಾ ವಿದ್ಯಾಲಯ ತನ್ನ ಆವರಣದಲ್ಲಿ ಸುಸಜ್ಜಿತ ಸುಂದರ ಈಜುಕೊಳವೊಂದನ್ನು ರೂಪಿಸುವ ಮೂಲಕ ಈಜು ಕೊಳ ಹೊಂದಿದ ತಾಲೂಕಿನ ಮೊದಲ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಹತ್ತನೆಯ ತರಗತಿಯಲ್ಲಿ ಶೇಕಡಾ ನೂರರೊಂದಿಗೆ ಅತ್ಯುತ್ತಮ ಫಲಿತಾಂಶವನ್ನೂ ಸತತವಾಗಿ ದಾಖಲಿಸುತ್ತಿರುವ ಸಂಸ್ಥೆಯಾಗಿ ಮೂಡಿಬಂದಿದೆ.


ಸಿಬಿಎಸ್‍ಇ ಪಠ್ಯಕ್ರಮದೊಂದಿಗೆ ಭಾರತೀಯತೆ, ಸಂಸ್ಕøತಿ, ಸಂಸ್ಕಾರಗಳ ಪಾಠವನ್ನು ನಿರಂತರವಾಗಿ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಉಣಬಡಿಸುತ್ತಿದೆ. ಜತೆಗೆ ದೇಶಭಕ್ತಿಯ ಸಿಂಚನವನ್ನು ಅನುದಿನವೂ ವಿದ್ಯಾರ್ಥಿಗಳ ಮೇಲೆ ಹರಿಸುತ್ತಿದೆ. ಹಾಗಾಗಿ ತಮ್ಮ ಮಕ್ಕಳು ಸಂಸ್ಕಾರಯುತರಾಗಿ, ದೇಶಭಕ್ತರಾಗಿ ಬೆಳೆಯಬೇಕು ಎಂಬ ಹಂಬಲವಿರುವ ಹೆತ್ತವರೆಲ್ಲರೂ ಅಂಬಿಕಾ ವಿದ್ಯಾಲಯದಲ್ಲಿ ದಾಖಲಾತಿಗಾಗಿ ಪ್ರಯತ್ನಿಸುತ್ತಿದ್ದಾರೆ.


ಜತೆಗೆ ಅಂಬಿಕಾ ವಿದ್ಯಾಲಯ ತನ್ನ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸುವತ್ತಲೂ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಜೀವನಕಲೆಗಳನ್ನೂ ಕಲಿಸಿಕೊಡಲಾಗುತ್ತಿದೆ. ಕಸಗುಡಿಸುವುದು, ನೆಲ ಒರೆಸುವುದರಿಂದ ತೊಡಗಿ ಫ್ಯಾನ್ ರಿಪೇರಿ, ವಾಹನ ಚಕ್ರ ಬದಲಾಯಿಸುವಿಕೆಯೇ ಮೊದಲಾದ ಹತ್ತು ಹಲವು ಸಂಗತಿಗಳನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ. ಈ ತೆರನಾದ ಲೈಫ್ ಸ್ಕಿಲ್ ಕಲಿಸಿಕೊಡುವ ವಿಶಿಷ್ಟ ಸಂಸ್ಥೆಯಾಗಿಯೂ ಅಂಬಿಕಾ ಮೂಡಿಬಂದಿದೆ. 


ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಅನುಭವಗಳನ್ನು ತುಂಬುವ ಹಾಗೂ ದೇಶಪ್ರೇಮಿ ಉದ್ಯಮಿಗಳನ್ನು ಸೃಷ್ಟಿಸುವ ನೆಲೆಯಲ್ಲಿ ಪ್ರತಿವರ್ಷ ಬಝಾರ್ ಫೆಸ್ಟ್ ಎಂಬ ಉದ್ಯಮಮೇಳವನ್ನೂ ಆಯೋಜಿಸಲಾಗುತ್ತಿದೆ. ಆ ಮೇಳದಲ್ಲಿ ವಿದ್ಯಾರ್ಥಿಗಳೇ ಸ್ಟಾಲ್‍ಗಳನ್ನಿಟ್ಟು ವ್ಯಾಪಾರೋದ್ಯಮ ನಡೆಸಿ ಅನುಭವ ಗಳಿಸಿಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿರುವ ಸಂಯುಕ್ತ ಪ್ರಯೋಗಾಲಯ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನದ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವುದಲ್ಲದೆ ಭವಿಷ್ಯದ ವಿಜ್ಞಾನಿಗಳ ತಯಾರಿಕಾ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.


ಇಷ್ಟಲ್ಲದೆ, ಆಗಿಂದಾಗ್ಗೆ ವಿದ್ಯಾರ್ಥಿಗಳನ್ನು ಕ್ಷೇತ್ರಭೇಟಿಗೂ ಕರೆದೊಯ್ಯಲಾಗುತ್ತಿದೆ. ತೋಟ ಗದ್ದೆಗಳಿಂದ ತೊಡಗಿ, ವಿವಿಧ ಉದ್ಯಮಸಂಸ್ಥೆಗಳಿಗೆ, ನ್ಯಾಯಾಲಯ, ಪೋಲಿಸ್ ಠಾಣೆಯೇ ಮೊದಲಾದ ಕಡೆಗಳಿಗೆ ಮಕ್ಕಳನ್ನು ಕರೆದೊಯ್ದು ಮಾಹಿತಿ, ಜ್ಞಾನ ಒದಗಿಸಿಕೊಡಲಾಗುತ್ತಿದೆ. 


ಹೀಗೆ ಕೇವಲ ಪಠ್ಯವಷ್ಟೇ ಅಲ್ಲದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ತಾಣವಾಗಿ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆ ಮೂಡಿಬಂದಿದೆ. ಇಂತಹ ಕಾರಣಗಳಿಂದಾಗಿಯೇ ದಾಖಲಾತಿ ಆರಂಭಕ್ಕೂ ಸಾಕಷ್ಟು ಪೂರ್ವದಲ್ಲಿಯೇ ಹೆತ್ತವರು ಆಗಮಿಸಿ ತಮ್ಮ ಮಕ್ಕಳಿಗಾಗಿ ದಾಖಲಾತಿಯನ್ನು ಕಾಯ್ದಿರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಾಕಷ್ಟು ಮುಂಚೆಯೇ ದಾಖಲಾತಿಗಳು ಭರ್ತಿಯಾಗುತ್ತಿದ್ದು, ಅನೇಕರಿಗೆ ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸುವುದಕ್ಕೆ ಅಸಾಧ್ಯವಾಗುತ್ತಿದೆ. ಹಾಗಾಗಿಯೇ ಕಳೆದ ಕೆಲವು ವರ್ಷಗಳಿಂದ ನೂತನ ಬ್ಯಾಚ್ ಆರಂಭಿಸುವುದಕ್ಕೆ ಬೇಡಿಕೆ ಬರಲಾರಂಭಿಸಿದ್ದು, ಇದೀಗ ಬಹುಜನರ ಅಪೇಕ್ಷೆಯ ಮೇರೆಗೆ 2026-27ನೇ ಸಾಲಿನಿಂದ ನೂತನ ಬ್ಯಾಚ್‍ಗಳು ಆರಂಭಗೊಳ್ಳುತ್ತಿವೆ. ಆಸಕ್ತ ಹೆತ್ತವರು ತಮ್ಮ ಮಕ್ಕಳ ದಾಖಲಾತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top