ಮಂಗಳೂರು: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ನಿಕಟ ಪೂರ್ವ ಅಧ್ಯಕ್ಷರು,ದಕ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಉಪಾಧ್ಯಕ್ಷರು, ಲಯನ್ ಕೆ ವಸಂತ ರಾವ್ ಅವರಿಗೆ 2025 ದಕ ರಾಜ್ಯೋತ್ಸವದ ಜಿಲ್ಲಾ ಆಚರಣೆಯ ದಿನ ಸನ್ಮಾನ ದೊರೆತ ಪ್ರಯುಕ್ತ ಕೆಬಿಎಂಕೆ ಪರವಾಗಿ ಕಾರ್ಯಕಾರಿ ಸಭೆಯಲ್ಲಿ ಸನ್ಮಾನಿಸಲಾಯಿತು.
ಬಿಇಎಂ ಸ್ಕೂಲ್ ಕಂಪಂವ್ಡ್ ಕಾರ್‌ಸ್ಟ್ರೀಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿದ ಎಸ್ ಎಲ್ ಶೇಟ್ ಡೈಮಂಡ್ಸ್ ಇದರ ಮಾಲಕರು ಕೆಬಿಎಂಕೆ ಆಹ್ವಾನಿತ ಸದಸ್ಯರೂ ಆದ ಪ್ರಶಾಂತ ಶೇಟ್ ಮಾತನಾಡಿ; ಭಾಷೆಗೆ ಸೇವೆ ಮಾಡಿದರೆ ಹಣ, ಸಂಪತ್ತು ಮತ್ತು ಹೆಸರು ಬರುವುದಿಲ್ಲ ಬದಲಾಗಿ ತಾಯಿಯ ಸೇವೆ ಮಾಡಿದ ಆತ್ಮ ತೃಪ್ತಿ ದೊರೆಯುತ್ತದೆ. ಭಿನ್ನ ಭಿನ್ನ ಆಲೋಚನೆಗಳು ಇರುವ ಜನರು ಒಟ್ಟಾಗಿ ಮಾಡುವ ಕೆಲಸವನ್ನು ಏಕ ಉದ್ದೇಶವಾದ ಮಾತೃಭಾಷೆ ಪ್ರೀತಿಗೆ ಸೀಮಿತಗೊಳಿಸುವ ಕೆಲಸ ಆಗಬೇಕು ಎಂದರು.
ಕೆಬಿಎಂಕೆ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ ಹಿರಿಯ ವಸಂತ ರಾವ್ ಪಾದರಸದ ಚಲನೆ ಮತ್ತು ನಿಖರವಾಗಿ ಕೆಲಸಮಾಡುವ ವಿಧಾನ ನಾವೆಲ್ಲಾ ಅನುಸರಿಸಿ ನಡೆಯುವಂತಹ ಅಗತ್ಯ ಇದೆ,ಎಂದರು. ಉಪಾಧ್ಯಕ್ಷ ಮೀನಾಕ್ಷಿ ಪೈ,ಹಿರಿಯರಾದ ಗೀತಾ ಸಿಣಿ, ಸುರೇಶ್ ಶೆಣೈ, ಜೂಲಿಯೆಟ್ ಫೆರ್ನಾಂಡೀಸ್, ಎಡೊಲ್ಫ್ ಡಿಸೋಜ, ಅರವಿಂದ್ ಶಾನ್ ಭಾಗ್ ಮತ್ತು ಶಾಂತಿ ವೆರೊನಿಕಾ ಹಾಜರಿದ್ದರು.
ಸನ್ಮಾನಿತರಾದ ವಸಂತ ರಾವ್ ತನ್ನ ಬಯಸದೆ ಬಂದ ರಾಜ್ಯೋತ್ಸವ ಸನ್ಮಾನದ ಬಗ್ಗೆ ಕೆಬಿಎಂಕೆ ಮಾಡಿದ ಸೇವೆಯ ನೆನಪು ತೃಪ್ತಿ ತಂದಿದೆ ಎಂದರು.
ಕಾರ್ಯದರ್ಶಿ ಲಿಸ್ಟನ್ ಡೆರಿಕ್ ಡಿಸೋಜ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







