ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Upayuktha
0


ಉಡುಪಿ: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಏರ್ಪಡಿಸಲಾಗಿರುವ ವಾರ್ಷಿಕ ಕ್ರೀಡಾಕೂಟ ಬೆಳಿಗ್ಗೆ 9.15 ಕ್ಕೆಎ.ಎಲ್.ಎನ್.ರಾವ್ ಮೈದಾನ, ಎಂಜಿಎಂ ಗ್ರೌಂಡ್‌ನಲ್ಲಿ ಭವ್ಯವಾಗಿ ಆರಂಭವಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಕರಾಟೆ ಕೋಚ್ ಮತ್ತು ಕರಾಟೆ ತರಬೇತಿ ಪರಿಣತಿ ಕುಮಾರಿ ಪ್ರವೀಣಾ ಸುವರ್ಣ ಅವರು ಆಗಮಿಸಿದ್ದರು.ವಿದ್ಯಾರ್ಥಿಗಳಲ್ಲಿಕ್ರೀಡಾಸ್ಪೂರ್ತಿ ಮತ್ತು ಶಿಸ್ತು ಬೆಳೆಸುವ ಮಹತ್ವದ ಕುರಿತು ಅವರು ಪ್ರೇರಣಾದಾಯಕ ಸಂದೇಶ ನೀಡಿದರು.ಇದೆ ಸಂದರ್ಭದಲ್ಲಿ ಪ್ರವೀಣಾ ಸುವರ್ಣರನ್ನು ಸನ್ಮಾನಿಸಲಾಯಿತು.


ಕಾಲೇಜಿನ ಪ್ರಾಚಾರ್ಯರು ಡಾ. ದೇವಿದಾಸ್ ಎಸ್. ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ–ಮಾನಸಿಕ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತವೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿ ದೇವಿ, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲರು ಡಾ.ಎಂ.ವಿಶ್ವನಾಥ್ ಪೈ, ಬಿಕಾಂ ಹಾಗು ಬಿಬಿಎ ವಿಭಾಗದ ಸಂಯೋಜಕಿ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಎಂಜಿಎಂ ಸಂಧ್ಯಾ ಕಾಲೇಜಿನ ಪಿ.ಇ.ಡಿ ಶ್ರೀ ವಿಘ್ನೇಶ್ಭಟ್ ಬಿ ಅವರು ಕ್ರೀಡಾಕೂಟದ ಕಾರ್ಯಕ್ರಮ ವಿವರ ಹಂಚಿಕೊಂಡರು.ಕಾಲೇಜಿನ ಕ್ರೀಡಾ ಕಾರ್ಯದರ್ಶಿಗಳಾದ ಛಾಯಾ ದ್ವಿತೀಯ ಬಿಸಿಎ ಕ್ರೀಡಾ ಜ್ಯೋತಿ ಬೆಳಗಿಸಿ ಮತ್ತು ರೊಶೆಲ್ ಡಿಸೋಜಾ ತೃತೀಯ ಬಿಕಾಂ ಪ್ರತಿಜ್ಞಾ ವಿಧಿ ಬೋಧಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top