ಆಳ್ವಾಸ್ ಶಾಲೆಗೆ 83 ಪದಕದೊಂದಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

Upayuktha
0

ಜಿಲ್ಲಾ ಮಟ್ಟದ 14 ವರ್ಷ ಹಾಗೂ 17ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2025-2026



ಮೂಡುಬಿದಿರೆ: ದಿನಾಂಕ 12-11-2025 ರಿಂದ 13-11-2025 ರವರೆಗೆ ನಡೆದ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಸುಳ್ಯ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಪಂಜ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ವರ್ಷ ಹಾಗೂ 17ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 37 ಚಿನ್ನ, 30 ಬೆಳ್ಳಿ ಮತ್ತು 16 ಕಂಚಿನ ಪದಕಗಳೊಂದಿಗೆ 83 ಪದಕದೊಂದಿಗೆ 02 ಕ್ರೀಡಾಕೂಟದ ನೂತನ ಕೂಟ ದಾಖಲೆಯನ್ನು ಮಾಡುವ ಮೂಲಕ 14 ವರ್ಷ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿ, ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಇದರ ಜೊತೆಗೆ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.


14ವರ್ಷ ವಯೋಮಿತಿಯ ಬಾಲಕರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:

ಬಾಲಕರ ವಿಭಾಗ: ಸುಭಾಷ್ ಎ ಆರ್ – 11 ಅಂಕ

17 ವರ್ಷ ವಯೋಮಿತಿಯ ಬಾಲಕರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ:

ಬಾಲಕರ ವಿಭಾಗ: ಸಂತೋಷ್ ಜಿ ಶಹಪುರ್ – 11 ಅಂಕ


ಫಲಿತಾಂಶ:

14ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ: ಸುಭಾಷ್ – 80ಮೀ ಹರ್ಡಲ್ಸ್ (ಪ್ರಥಮ), 400ಮೀ (ಪ್ರಥಮ), ಉದ್ದ ಜಿಗಿತ (ತೃತೀಯ), 4*100ಮೀ ರಿಲೇ (ಪ್ರಥಮ), ಎ ಜಿ ಮಂಥನ್ - ಗುಂಡು ಎಸೆತ (ಪ್ರಥಮ), ಆದರ್ಶ್ – 200ಮೀ (ಪ್ರಥಮ), 100ಮೀ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಪ್ರಣವ್ – ಉದ್ದ ಜಿಗಿತ (ಪ್ರಥಮ), 80ಮೀ ಹರ್ಡಲ್ಸ್ (ದ್ವಿತೀಯ), ಹರ್ಷಾ – 600ಮೀ (ದ್ವಿತೀಯ), ಮಾಳಪ್ಪ – 600ಮೀ (ತೃತೀಯ), ವೈಭವ್ – 200ಮೀ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಶ್ರೀಹರಿ – ಚಕ್ರ ಎಸೆತ (ಪ್ರಥಮ), ಪೌಡೇಶ್ - ಚಕ್ರ ಎಸೆತ (ದ್ವಿತೀಯ), ಕುಬೇರ - 4*100ಮೀ ರಿಲೇ (ಪ್ರಥಮ), ದೀಪಾ – ಉದ್ದ ಜಿಗಿತ (ದ್ವಿತೀಯ), ಕೃತಿಕಾ – ಎತ್ತರ ಜಿಗಿತ (ಪ್ರಥಮ), 80ಮೀ ಹರ್ಡಲ್ಸ್ (ದ್ವಿತೀಯ), ಮಾಲಾ – 100ಮೀ (ದ್ವಿತೀಯ), 200ಮೀ (ದ್ವಿತೀಯ), ಹೇಮಲತಾ – 600ಮೀ (ತೃತೀಯ), ವೈಷ್ಣವಿ - 200ಮೀ (ತೃತೀಯ), 4*100ಮೀ ರಿಲೇ (ಪ್ರಥಮ), ಗೀತಾಂಜಲಿ - 4*100ಮೀ ರಿಲೇ (ಪ್ರಥಮ), ಎಂ ಆರ್ ಭವಿಷ್ಯ - 4*100ಮೀ ರಿಲೇ (ಪ್ರಥಮ), ವರ್ಷಿಣಿ ಜವಲಿ - 4*100ಮೀ ರಿಲೇ (ಪ್ರಥಮ)


17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ : ಸಂತೋಷ್ – 1500ಮೀ (ಪ್ರಥಮ), 800ಮೀ (ಪ್ರಥಮ), 400ಮೀ (ತೃತೀಯ), ಮೈಲಾರಿ – ಚಕ್ರ ಎಸೆತ (ಪ್ರಥಮ), ಏಟಿ ಎಸೆತ (ದ್ವಿತೀಯ), ರಾಜು – 100ಮೀ (ಪ್ರಥಮ), 4*100ಮೀ ರಿಲೇ (ಪ್ರಥಮ), ಅಜಯ್ – 100ಮೀ (ದ್ವಿತೀಯ), 200ಮೀ (ತೃತೀಯ), 4*100ಮೀ ರಿಲೇ (ಪ್ರಥಮ), ಚಕ್ರವರ್ತಿ – 110ಮೀ ಹರ್ಡಲ್ಸ್ (ಪ್ರಥಮ), 400ಮೀ ಹರ್ಡಲ್ಸ್ (ತೃತೀಯ), 4*400ಮೀ ರಿಲೇ (ದ್ವಿತೀಯ), ಕೌಶಿಕ್ – 110ಮೀ ಹರ್ಡಲ್ಸ್ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಕೃಷ್ಣ – ಏಟಿ ಎಸೆತ (ಪ್ರಥಮ), ಗುಂಡು ಎಸೆತ (ದ್ವಿತೀಯ), ನವೀನ್ – ತ್ರಿವಿಧ ಜಿಗಿತ(ಪ್ರಥಮ), ಉದ್ದ ಜಿಗಿತ (ಪ್ರಥಮ), ಪೃಥ್ವಿಕ್ – ತ್ರಿವಿಧ ಜಿಗಿತ (ತೃತೀಯ), ತುಷಾರ್ – 800ಮೀ (ದ್ವಿತೀಯ), 4*400ಮೀ ರಿಲೇ (ದ್ವಿತೀಯ), ಕುಶಾಂತ್ – ಗುಂಡು ಎಸೆತ (ತೃತೀಯ), ಅಜರೇಸಾಬ್ - ಹ್ಯಾಮರ್ ಎಸೆತ (ಪ್ರಥಮ), ನಿಖಿಲ್ - ಹ್ಯಾಮರ್ ಎಸೆತ (ತೃತೀಯ), ಲೋಹಿತ್ – ಉದ್ದ ಜಿಗಿತ (ತೃತೀಯ), 4*100ಮೀ ರಿಲೇ (ಪ್ರಥಮ), ಅಮನ್ - 4*400ಮೀ ರಿಲೇ (ದ್ವಿತೀಯ), ಆದಿತ್ಯ - 4*400ಮೀ ರಿಲೇ (ದ್ವಿತೀಯ), ಕಿರಣ – 1500ಮೀ (ದ್ವಿತೀಯ), 800ಮೀ (ದ್ವಿತೀಯ), 4*400ಮೀ ರಿಲೇ (ಪ್ರಥಮ), ಚಸ್ಮಿತಾ – ಚಕ್ರ ಎಸೆತ (ದ್ವಿತೀಯ), ವೀಕ್ಷಾ – 100ಮೀ (ದ್ವಿತೀಯ) 4*400ಮೀ ರಿಲೇ (ಪ್ರಥಮ), ಅಮುಲ್ಯಾ – 100ಮೀ ಹರ್ಡಲ್ಸ್ (ತೃತೀಯ), 4*400ಮೀ ರಿಲೇ (ಪ್ರಥಮ), ಪ್ರೇಕ್ಷಿತಾ – ಏಟಿ ಎಸೆತ (ಪ್ರಥಮ), ಪೂಜಾ – ತ್ರಿವಿಧ ಜಿಗಿತ (ದ್ವಿತೀಯ), 4*100ಮೀ ರಿಲೇ (ದ್ವಿತೀಯ), ನಿಸರ್ಗ - ತ್ರಿವಿಧ ಜಿಗಿತ (ತೃತೀಯ), 4*100ಮೀ ರಿಲೇ (ದ್ವಿತೀಯ), ಪ್ರಾರ್ಥನಾ – 400ಮೀ (ಪ್ರಥಮ), 4*400ಮೀ ರಿಲೇ (ಪ್ರಥಮ), ಪ್ರಿಯಾಂಕ – 800ಮೀ (ಪ್ರಥಮ), 3000ಮೀ (ಪ್ರಥಮ), ರಕ್ಷಿತಾ – ಎತ್ತರ ಜಿಗಿತ (ದ್ವಿತೀಯ), ಪ್ರತಿಭಾ – ಗುಂಡು ಎಸೆತ (ದ್ವಿತೀಯ), ಸವಿತಾ – ಗುಂಡು ಎಸೆತ (ತೃತೀಯ), ಜ್ಞಾನೇಶ್ವರಿ – ಉದ್ದ ಜಿಗಿತ (ತೃತೀಯ), ಸುಜಾತ – 200ಮೀ (ದ್ವಿತೀಯ), 4*100ಮೀ ರಿಲೇ (ದ್ವಿತೀಯ), ಚಂದನಾ – 400ಮೀ ಹರ್ಡಲ್ಸ್ (ತೃತೀಯ), ಪೂರ್ವಿ - ಹ್ಯಾಮರ್ ಎಸೆತ (ಪ್ರಥಮ), ಸ್ಪೂರ್ತಿ - ಹ್ಯಾಮರ್ ಎಸೆತ (ದ್ವಿತೀಯ), ಅಪೇಕ್ಷಾ - 4*100ಮೀ ರಿಲೇ (ದ್ವಿತೀಯ), ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top