ಅಂತರ್ವಲಯ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ : ಎಸ್.ಡಿ.ಎಂ ಕಾಲೇಜಿಗೆ ಚಾಂಪಿಯನ್ ಪ್ರಶಸ್ತಿ

Upayuktha
0

ಎರಡು ವಿದ್ಯಾರ್ಥಿಗಳು ದಕ್ಷಿಣ ಭಾರತ ಮಟ್ಟದ ಪಂದ್ಯಾಟಕ್ಕೆ ಆಯ್ಕೆ



ಉಜಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಜೆ ಜೆ ಮೆಡಿಕಲ್ ಕಾಲೇಜ್ ದಾವಣಗೆರೆ ಇವರ ಸಂಯುಕ್ತ ಆಶಯದಲ್ಲಿ ಅಂತರ್ವಲಯ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯದ ಮಹಿಳೆಯರ ತಂಡವು ಪ್ರಥಮ ಸ್ಥಾನ ಪಡೆದಿದ್ದಾರೆ.  


ಚಾಂಪಿಯನ್ ಗಳಾಗಿರುವ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತಂಡವು ಸೆಮಿ ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜ್ ತಂಡವನ್ನು 3-0 ಅಂಕಗಳ ಅಂತರದಿಂದ ಪರಾಜಯಗೊಳಿಸಿತು. ಬಳಿಕ ಫೈನಲ್ ಪಂದ್ಯಾಟದಲ್ಲಿ ಕಲ್ಬುರ್ಗಿಯ ಆರ್ ಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜ್ ತಂಡವನ್ನು   3-1 ಸೆಟ್ ಗಳಿಂದ ಮಣಿಸಿ ರೋಚಕ ಗೆಲುವನ್ನು ಸಾಧಿಸುವ ಮೂಲಕ ಚಾಂಪಿಯನ್ ಗಳಾಗಿ ಮೂಡಿಬಂದರು.


ಈ ಮೂಲಕ ಉತ್ತಮ ಪ್ರದರ್ಶನ ತೋರಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯದ ಎರಡು ವಿದ್ಯಾರ್ಥಿನಿಯರಾದ ಕುಮಾರಿ ಇಶಾನಿ ಮತ್ತು ಕುಮಾರಿ ಮೇದಿನಿ ರಾಷ್ಟ್ರೀಯ ದಕ್ಷಿಣ ಭಾರತ ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿರಿರುತ್ತಾರೆ. ಇವರಿಗೆ ಶ್ರಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಕಾಲೇಜು ಅಭಿನಂದನೆಯನ್ನು ತಿಳಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top