ಹೋಲಿಕೆ ಸರಿಯಲ್ಲ..

Upayuktha
0


ದುಕಿನಲ್ಲಿ ಯಾಕೆ ಎಲ್ಲ ಸಮಸ್ಯೆಗಳು ನನಗೆ ಮಾತ್ರ ಇದೆ..?? ಅವರಂತೆ ನಾನು ಯಾಕಿಲ್ಲ?? ಬದುಕಿನಲ್ಲಿ ಎಲ್ಲಾ ಕಷ್ಟ ನೋವು, ಸಮಸ್ಯೆಗಳು ನನಗೆ ಮಾತ್ರ ಇದೆ, ಅಯ್ಯೋ ಬದುಕಿನಲ್ಲಿ ನನ್ನ ಸಮಯವೇ ಸರಿ ಇಲ್ಲ, ಅವರಷ್ಟು ನಾನು ಸುಂದರವಿಲ್ಲ, ಅವರಂತೆ ನಾನು ಪರೀಕ್ಷೆಯಲ್ಲಿ ಅಂಕಗಳನ್ನ ಗಳಿಸುವುದು ಸಾಧ್ಯವಿಲ್ಲ. ಹೀಗೆ ಸಾವಿರ ಹೋಲಿಕೆಯ ಪ್ರಶ್ನೆಗಳು ದಿನಕೊಮ್ಮೆ ಆದರೂ ಎಲ್ಲರ ಮನದೊಳಗೆ ಹುಟ್ಟಿ ಅಲ್ಲಿಗೆ ಉತ್ತರ ಸಿಗದೆ ಸಮಾಧಿ ಸೇರುತ್ತದೆ ಅಲ್ಲವೇ..??


ಒಮ್ಮೆ ಯೋಚಿಸಿ ಈ ರೀತಿಯಲ್ಲಿ ನಮ್ಮನ್ನು ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಂಡು ನೋವು ಅನುಭವಿಸುತ್ತಿರುವುದರಿಂದ ಏನು ಪ್ರಯೋಜನ..?? ಬಹುಶ: ಏನಿಲ್ಲ. ಮುಖ್ಯವಾಗಿ ಈ ಹದಿಹರಿಯದ ವಯಸ್ಸಿನಲ್ಲಿ ನಾವು ಮಾಡಿಕೊಳ್ಳುವ ಹೋಲಿಕೆಗಳು ಪರೋಕ್ಷವಾಗಿ ನಮ್ಮನ್ನು ನಾವೇ ಕುಗ್ಗಿಸಿಕೊಳ್ಳುವಂತೆ ಮಾಡುತ್ತದೆ.


ಆಕಾಶದಲ್ಲಿ ಹಾರುವ ಹಕ್ಕಿಗೆ ಮತ್ತು ನೀರಿನಲ್ಲಿ ಈಜುವ ಮೀನಿಗೆ ಹೋಲಿಕೆ ಮಾಡಿದರೆ ಸರಿಯೇ..?? ಹೇಗೆ ಹಕ್ಕಿಗೆ ಹಾರುವ ಸಾಮರ್ಥ್ಯವಿದೆಯೋ ಅಂತೆ ಮೀನಿಗೆ ನೀರಿನಲ್ಲಿ ಈಜುವ ಸಾಮರ್ಥ್ಯ ಇದೆ. ಅಂತೆಯೇ ಬದುಕಿನಲ್ಲಿ ನಮ್ಮ ನಮ್ಮ ಸಾಮರ್ಥ್ಯ ಏನು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.


 ಪ್ರತಿಭೆ ಎಂಬುದು ಯಾರ ಸ್ವತ್ತು ಅಲ್ಲ. ಇಲ್ಲಿ ಎಲ್ಲರೂ ಪ್ರತಿಭಾವಂತರೆ. ಕೆಲವರು ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ಅನಾವರಣಗೊಳಿಸಿದರೆ ಇನ್ನೂ ಕೆಲವರು ತೆರೆಮರೆಯ ಕಾಯಿಯಾಗಿ ಉಳಿದುಬಿಡುತ್ತಾರೆ. ಬದುಕಿನಲ್ಲಿ ನಮಗೆ ಸಿಕ್ಕ ಅವಕಾಶಗಳನ್ನ ನಾವು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುದು ಯೋಚಿಸಬೇಕಾದ ಸಂಗತಿ ಅವಕಾಶಗಳು ನಮ್ಮನ್ನೇ ಅರಸಿ ಬರಲಿ ಎಂದು ಕಾಯುತ್ತಾ ಕೂರುವುದು ತಪ್ಪು. ಹಾಗೆಯೇ ಕಳೆದು ಹೋದ ಅವಕಾಶಗಳು ಮತ್ತು ಸಮಯವನ್ನು ನೆನೆದು ದುಃಖಿಸುವುದು ಮೂರ್ಖತನ.


ಪ್ರತಿಯೊಬ್ಬರಿಗೂ ದೇವರು ಒಂದೊಂದು ಗುಣವನ್ನು ವರವಾಗಿ ನೀಡಿರುತ್ತಾನೆ. ಅದನ್ನ ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಬದುಕಿನಲ್ಲಿ ಸೋತಾಗ ಕುಗ್ಗದೆ ಗೆದ್ದಾಗ ಅತಿಯಾಗಿ ಬೀಗದೆ ಎಲ್ಲವನ್ನ ಸ್ವೀಕರಿಸುತ್ತಾ ಬದುಕು ಸಾಗಿಸಬೇಕೆ ಹೊರತು ದೇವರು ವರವಾಗಿ ನೀಡಿರುವ ಈ ಬದುಕನ್ನ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿ ನೋಡುವುದರ ಬದಲಿಕೆ ಸದಾ ಪ್ರಯತ್ನಿಸುತ್ತಾ ಮುನ್ನಡೆದರೆ ಬದುಕಿನಲ್ಲಿ ಸೋಲುವುದು ಕುಗ್ಗುವುದು ಅಸಾಧ್ಯದ ಮಾತು..



ಕವನ ಚಾರ್ಮಾಡಿ 

ದ್ವಿತೀಯ ಪತ್ರಿಕೋದ್ಯಮ 

ಎಸ್ ಡಿ ಎಂ ಉಜಿರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top