ಒಬ್ಬಳು ಹೆಣ್ಣು ಹುಟ್ಟಿದ ಮನೆಯನ್ನು, ಹಾಗೆಯೇ ಹೋದ ಮನೆಯನ್ನು ಬೆಳಗುವವಳು. ಈಗ ಎಲ್ಲಾ ವಿಚಾರಗಳಲ್ಲಿಯು ಅವಳೇ ಮುಂದು. ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿಯೂ, ಮಕ್ಕಳಿಗೆ ತಾಯಿಯಾಗಿಯೂ, ಸಂಸಾರದಲ್ಲಿ ಒಬ್ಬ ಗೃಹಿಣಿಯಾಗಿಯೂ ಕಾರ್ಯ ನಿರ್ವಹಿಸುತ್ತಾಳೆ. ಕ್ಷಮೆಗೆ ಇನ್ನೊಂದು ಹೆಸರೇ ಆಕೆ. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬ ಗಾದೆ ಮಾತೇ ಇದೆ. ಶಕ್ತಿಯ ಇನ್ನೊಂದು ರೂಪವೇ ಅವಳು ಹೆಣ್ಣನ್ನು ಭೂಮಿ ತೂಕದ ಸಹನೆಗೆ ಹೋಲಿಸುತ್ತಾರೆ ಹಾಗೆಯೇ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬಳು ಒಬ್ಬಳು ಸ್ತ್ರೀ ಖಂಡಿತ ಇರುತ್ತಾಳೆ.
ಮಕ್ಕಳಿಗೆ "ತಾಯಿ"ಯಾಗಿ, ನಾವು ಶಾಲೆಗೆ ಹೋಗಲು ಆರಂಭಿಸಿದಾಗ ಮೊದಲು ಪಾಠ ಹೇಳಿಕೊಡುವುದು ಒಂದು ಮಹಿಳೆಯೆ. ಅವಳ ಹೆಸರೇ "ಶಿಕ್ಷಕಿ". ಸದಾ ಸಹಾಯ ಮಾಡುತ್ತಾ, ಗಂಡನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಪ್ರೀತಿ ಮಾಡುತ್ತಾ ಬರುವವಳು "ಹೆಂಡತಿ". ಅಪ್ಪನಿಗೆ ಕಷ್ಟ ಬಂದಾಗ ಮಗನ ಸ್ಥಾನದಲ್ಲಿ ನಿಲ್ಲುವವಳು "ಮಗಳು", ಸತ್ತಾಗ ಒಬ್ಬಳು ಜಾಗ ಕೊಡುವವಳು "ಭೂಮಿ" ತಾಯಿ.
ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹೆಣ್ಣೆಂದರೆ ಕೀಳಾಗಿ ನೋಡುವ ಪ್ರವೃತ್ತಿ ಇಂದಿಗೂ ಕಡಿಮೆಯಾಗುತ್ತಿಲ್ಲ. ಮಹಿಳೆಯರಿಗೆ ರಾಜಕೀಯ ಶಿಕ್ಷಣ, ಉದ್ಯೋಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರಿಗೂ ಗೌರವದ ಬದುಕು ನಡೆಸುವ ಅವಕಾಶ ಪಡೆದುಕೊಂಡರೂ ಶೋಷಣೆಗಳು ಮಾತ್ರ ಇನ್ನೂ ನಿಂತಿಲ್ಲ. ಎಲ್ಲರೂ ಹೆಣ್ಣನ್ನು ಗೌರವಿಸಬೇಕು. ಹಾಗೆ ಅವಳಿಗೆ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಸಹ ನೀಡಬೇಕು.
-ಗ್ರೀಷ್ಮ ಪಾಣಾಜೆ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



