ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಕೆ.ಹೆಚ್.ಮಂಜುನಾಥ್

Chandrashekhara Kulamarva
0


ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಸಾರಿ ಕನ್ನಡ ರಾಜ್ಯೋತ್ಸವ 70ನೇ ವರ್ಷದ ಕನ್ನಡ ಧ್ವಜಾರೋಹಣ ನೆರವೇರಿಸಿದ ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ಮಾತನಾಡಿ, 1956 ರಿಂದ ಮೈಸೂರು ರಾಜ್ಯ ಇದ್ದು ಕರ್ನಾಟಕ ರಾಜ್ಯ ಆಗಿ 70 ವರ್ಷವಾಗಿದ್ದು ಕನ್ನಡ ರಾಜ್ಯೋತ್ಸವ ಕೇವಲ ನವಂಬರ್‍ಗೆ ಸೀಮಿತವಾಗದೇ ಹಿರಿಯ ಕವಿ ನಿಸ್ಸಾರ್ ಅಹ್ಮದ್ ಬರೆದ ಕವಿತೆಯಂತೆ ಕನ್ನಡ ನಿತ್ಯೋತ್ಸವವಾಗಲಿ ಕನ್ನಡ ಭಾಷೆ ನಮ್ಮ ನಿಮ್ಮೆಲ್ಲರ ಹೃದಯ ಭಾಷೆಯಾಗಲಿ ಅದಕ್ಕಾಗಿ ಹೋರಾಟ ಮಾಡುವುದು ಬೇಡ ಎಂದು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.


ನಗರದ ಕಲಾಕುಂಚ ಕಛೇರಿ ಹೊರಾಂಗಣದಲ್ಲಿ ನಡೆದ ಈ ವಿಜೃಂಭಣೆಯ ಸಮಾರಂಭಕ್ಕೆ ಕಲಾಕುಂಚ ಮಹಿಳಾ ವಿಭಾಗದ ತಂಡದಿಂದ ಕನ್ನಡ ನಾಡು, ನುಡಿಯ ಪ್ರಾರ್ಥನೆ ಮಾಡಿದರು. ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ನಿರೂಪಿಸಿದರು. ಕೊನೆಯಲ್ಲಿ ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು.


ಈ ಸಮಾರಂಭದಲ್ಲಿ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ, ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಕೆ.ಬಿ. ಬಡಾವಣೆ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ, ಕಲಾಕುಂಚ ಡಿ.ಸಿ.ಎಂ. ಶಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಹೆಚ್.ಚನ್ನಬಸಪ್ಪ, ಗೌರವ ಅಧ್ಯಕ್ಷರಾದ ಎಸ್.ಶಿವನಪ್ಪ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಅಡಿಗ, ಅತ್ತಿಗೆರೆ ಗ್ರಾಮೀಣ ಪ್ರದೇಶದ ಶಾಖೆಯ ಅಧ್ಯಕ್ಷರಾದ ಶೈಲಜಾ ಪ್ರಶಾಂತ್, ಸಮಿತಿ ಸದಸ್ಯರಾದ ಎಂ.ಎಸ್.ಚನ್ನಬಸವ ಶೀಲವಂತ್, ಅಬ್ದುಲ್ ಸತ್ತಾರ್‍ಸಾಬ್ ಮುಂತಾದವರು ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top