ಸಂಸ್ಕಾರ ಭಾರತೀಯಿಂದ ದೀಪಾವಳಿ ಸ್ನೇಹ ಮಿಲನ, ಸಾಧಕ ರತ್ನ ಪುರಸ್ಕಾರ, ಸಂಸ್ಕಾರ ನೃತ್ಯ ವೈಭವ

Chandrashekhara Kulamarva
0

ಪ್ರಕೃತಿಯನ್ನು ಪೂಜಿಸುವ ಭಾರತೀಯರು ಭಾವನೆಗಳೊಂದಿಗೆ ಬದುಕನ್ನು ಕಟ್ಟಿಕೊಂಡವರು: ದಾಮೋದರ ಶರ್ಮ





ಮಂಗಳೂರು: ಭಾರತ ಬೆಳಕಿನ ದೇಶ ಜ್ಞಾನ ಪರಂಪರೆಯಿಂದ ಈ ಬೆಳಕು ಲಭ್ಯವಾಗಿದೆ. ಪ್ರಕೃತಿ ಯನ್ನು ಪೂಜಿಸುವ ಭಾರತೀಯರು ಭಾವನೆಗಳೊಂದಿಗೆ ಬದುಕನ್ನು ಕಟ್ಟಿಕೊಂಡವರು. ಭಾರತದ ವೈಭವಪೂರ್ಣ ಕಥಾನಕಗಳು, ನಮ್ಮಲ್ಲಿನ ಉನ್ನತವಾದ ಹಾಗೂ ಮೌಲ್ಯಯುತ ಸಂಸ್ಕಾರಗಳು ಈಗಿನ ಮಕ್ಕಳಿಗೆ ಸ್ಫೂರ್ತಿ- ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಭಾರತೀ ಸಂಘಟನೆಯ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ಸರ್ವರಿಗೂ ಮಾದರಿ ಎಂದು ವಿದ್ವಾಂಸ ಪ್ರಖರ ವಾಗ್ಮಿ ದಾಮೋದರ ಶರ್ಮ ಹೇಳಿದರು.  



ಅವರು ಶುಕ್ರವಾರ (ಅ.31) ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಅಡ್ಯಾರ್ ಇಲ್ಲಿ ನಡೆದ ಸಂಸ್ಕಾರ ಭಾರತೀ ದೀಪಾವಳಿ ಕುಟುಂಬ ಮಿಲನದಲ್ಲಿ ಮಾತನಾಡಿದರು.


ಸಂಸ್ಕಾರ ಭಾರತೀ ಮಂಗಳೂರು ನಗರ ಅಧ್ಯಕ್ಷರಾದ ಪುರುಷೋತ್ತಮ ಕೆ ಭಂಡಾರಿ ಸಮಾರಂಭದ ಸಮಾರಂಭದ ಅಧ್ಯಕ್ಷತೆ ವಹಿಸಿ, ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ದಶಕಗಳ ಕಾಲದಿಂದ ದೀಪಾವಳಿ ಹಬ್ಬವನ್ನು ಎಲ್ಲರನ್ನು ಸೇರಿಸಿಕೊಂಡು ಬಹಳ ಅರ್ಥ ಪೂರ್ಣ ಕಾರ್ಯಕ್ರಮ ಸಂಸ್ಕಾರ ಭಾರತೀ ಮಾಡಿಕೊಂಡು ಬರುತ್ತಿದೆ. ಕಲಾವಿದರಿಗೆ ಪುರಸ್ಕಾರ, ಹಬ್ಬದೂಟ ಹೀಗೆ ಎಲ್ಲವನ್ನು ಶಿಸ್ತುಬದ್ಧವಾಗಿ ಎಲ್ಲರ ಸಹಕಾರದಿಂದ ಆಚರಿಸಿಕೊಂಡು ಬಂದಿದೆ ಎಂದು ಹೇಳಿದರು.


ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಅಡ್ಯಾರ್ ಇದರ ಗೌರವಾಧ್ಯಕ್ಷ ದಿವಾಕರ ನಾಯ್ಕ್ ಅಡ್ಯಾರ್ ಮತ್ತು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಅಡ್ಯಾರ್ ಇದರ ಅಧ್ಯಕ್ಷ ರಮೇಶ್ ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ಬಾಲಕೃಷ್ಣ ಕತ್ತಲ್ ಸಾರ್ ಮತ್ತು ಬಳಗ ದವರಿಂದ "ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು" ನಡೆಯಿತು.


"ಸಂಘ ಶತಾಬ್ದಿ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಕಾರ ಭಾರತೀ ಸೇವಾ ಪುರಸ್ಕಾರವನ್ನು ಪ್ರದೀಪ್ ಕುಮಾರ್ ಶೆಟ್ಟಿ (ಸ್ವಯಂ ಸೇವಕ)  ನಾರಾಯಣ ನಾಯ್ಕ್ (ಶಿಕ್ಷಕರು ಸಾಮರಸ್ಯ) ಗಜೇಂದ್ರ ಪೂಜಾರಿ (ಅಧ್ಯಕ್ಷರು, ಮಡಿಲು ಸಂಸ್ಥೆ (ಕುಟುಂಬ ಪ್ರಭೋಧನ್) ಮಾಧವ ಉಳ್ಳಾಲ್ (ಪರಿಸರ ಪ್ರೇಮಿ (ಪರಿಸರ) ರಮೇಶ್ ಕಾವೂರು (ರಿಕ್ಷಾ ಚಾಲಕರು (ನಾಗರಿಕರ ಶಿಷ್ಚಾಚಾರ) ಧನಂಜಯ ಕೊಟ್ಟಾರಿ, ಯೋಗ ಗುರು (ಸ್ವದೇಶಿ) ಇವರುಗಳಿಗೆ ನೀಡಲಾಯಿತು. ಈ  ಅಭಿನಂದನಾ ಕಾರ್ಯಕ್ರಮ ಡಾ. ಅರುಣ್ ಉಳ್ಳಾಲ್ ನೆರವೇರಿಸಿದರು.


ನಾಟ್ಯ ನಿಕೇತನ, ಕೊಲ್ಯ ಸನಾತನ ನಾಟ್ಯಾಲಯ, ಮಂಗಳೂರು, ಭರತಾoಜಲಿ, ಕೊಟ್ಟಾರ ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.  ಶ್ರೀಧರ ಹೊಳ್ಳ ವಂದಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top