ಗೋವಿಂದದಾಸ ಕಾಲೇಜಿನಲ್ಲಿ “ಇನೋವೇಷಿಯಾ– 2025”

Upayuktha
0


ಸುರತ್ಕಲ್‍: ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಯಶಸ್ಸಿಗೆ ಹೊಸತನದ ಅನ್ವೇಷಣೆಯು ಅತಿ ಮುಖ್ಯವಾಗಿದ್ದು ವಿದ್ಯಾರ್ಥಿಗಳ ವಿನೂತನ ಚಿಂತನೆಗಳು ತಾಂತ್ರಿಕಅಭಿವೃದ್ಧಿ ಮತ್ತು ನೂತನ ಉತ್ಪನ್ನಗಳ ತಯಾರಿಕೆಯ ಮೂಲಕ ಹೊರ ಹೊಮ್ಮುತ್ತದೆ .ಗೋವಿಂದದಾಸ ಕಾಲೇಜು  ಪ್ರತಿವರ್ಷ ಸೃಜನಶೀಲ ಕಾರ್ಯಕ್ರಮ ಇನೋವೇಷಿಯಾವನ್ನು ಸಂಯೋಜಿಸಿ ಪದವಿಪೂರ್ವ ತರಗತಿಗಳ ವಿದ್ಯಾರ್ಥಿಗಳಿಗೆ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದು ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಅಭಿಪ್ರಾಯಪಟ್ಟರು.


ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‍ನ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು, ಸುರತ್ಕಲ್‍ನ ಆಂತರಿಕ ಗುಣಮಟ್ಟ ಖಾತರಿ ಕೋಶ, ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗ ಮತ್ತು ಉದ್ಯಮಶೀಲತಾ ಘಟಕಗಳು ಆಯೋಜಿಸಿದ್ದ “ಇನೋವೇಷಿಯಾ– 2025”ನ್ನು ಉದ್ಘಾಟಿಸಿ ಮಾತನಾಡಿದರು.


ತರಗತಿ ಕಲಿಕೆಯೊಂದಿಗೆ ಹೊರ ಪ್ರಪಂಚಕ್ಕೆ ವಿದ್ಯಾರ್ಥಿಗಳು ತೊಡಗಿಕೊಳ್ಳುವುದು ಪ್ರಸ್ತುತ ಅನಿವಾರ್ಯಗಳಲ್ಲಿ ಒಂದಾಗಿದೆ. ಪಾಠ ಪ್ರವಚನಗಳಷ್ಟೇ ಹೊಸತನದ ಅನ್ವೇಷಣೆಯು ಮುಖ್ಯವಾಗಿದೆ ಎಂದುಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್‍ಎಸ್.ಜಿ. ನುಡಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶಆಚಾರ್ಯ ಪಿ. ಮಾತನಾಡಿ ಅನೇಕ ಯುವ ಪ್ರತಿಭೆಗಳ ನೂತನ ಅನ್ವೇಷಣೆಗಳು ದೇಶಕ್ಕೆ ಕೊಡುಗೆಯಾಗುತ್ತಿರುವುದು ಸಕರಾತ್ಮಕ ಬೆಳವಣಿಗೆಯಾಗಿದೆ ಎಂದರು.


ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಆಳ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.


ರಚನಾ ಶೆಟ್ಟಿ ಸ್ವಾಗತಿಸಿ ಖುಷಿ ವಂದಿಸಿದರು. ದಿಶಾ ಕಾರ್ಯಕ್ರಮ ನಿರೂಪಿಸಿದರು.


ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ.,ಆಂತರಿಕಗುಣಮಟ್ಟ ಖಾತರಿಕೋಶದ ಸಂಯೋಜಕ ಧನ್ಯಕುಮಾರ್ ವೆಂಕಣ್ಣವರ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಪ್ರವೀಣ್ ಕೆ., ವ್ಯವಹಾರಅಧ್ಯಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶ್ರೀದೇವಿ,ಉದ್ಯಮಶೀಲತಾ ಘಟಕದ ಸಂಯೋಜಕಿ ಪುನೀತಾ ಆರ್., ಉಪನ್ಯಾಸಕರಾದ ಡಾ.ಭಾಗ್ಯಲಕ್ಷ್ಮೀ ಎಂ., ಡಾ.ಪ್ರತೀಕ್ಷಾ ಮತ್ತುಅಪೇಕ್ಷಾ ಭಂಡಾರಿ ಉಪಸ್ಥಿತರಿದ್ದರು.7 ಪದವಿ ಪೂರ್ವ ಕಾಲೇಜುಗಳ 312 ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top