ಬಳ್ಳಾರಿ: ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ (ಬಿಐಟಿಎಂ) ಮತ್ತು ಐಇಇಇ ಸ್ಟೂಡೆಂಟ್ ಬ್ರಾಂಚ್ ವತಿಯಿಂದ “ಪ್ರವರ್ತನ” ಔಟ್‌ರೀಚ್ ಪ್ರೋಗ್ರಾಂ-2025 ಅನ್ನು ಶ್ರೀ ಕಂಪಲಿರಾಯ ಗಿರಿಜನ ಪ್ರೌಢಶಾಲೆ, ಅಲ್ಲಿಪುರದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಜಾಗೃತಿ ಮತ್ತು ಭವಿಷ್ಯಕ್ಕೆ ತಯಾರಾಗುವ ಮನೋಭಾವ ಬೆಳೆಸುವುದಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕವರ್ಗವು ಮಕ್ಕಳಿಗೆ "ತಂತ್ರಜ್ಞಾನ ಬೆಳವಣಿಗೆಯ ಹಾದಿ ಮತ್ತು ಇಂದಿನ ಡಿಜಿಟಲ್ ಯುಗದ ಅಗತ್ಯತೆ, ಇಂಟರ್ನೆಟ್ ಸುರಕ್ಷತೆ ಮತ್ತು ಡಿಜಿಟಲ್ ಹೊಣೆಗಾರಿಕೆ, ಹೊಸ ತಂತ್ರಜ್ಞಾನಗಳ ಪರಿಚಯ, ತಂತ್ರಜ್ಞಾನವನ್ನು ಉಪಯೋಗಿಸಿ ಕಲಿಕೆ, ಸಂಶೋಧನೆ ಹಾಗೂ ವೃತ್ತಿ ನಿರ್ಮಾಣ ಮಾಡುವ ಅವಕಾಶಗಳು, ಸ್ಮಾರ್ಟ್ಫೋನ್ ಬಳಕೆಯ ಸದುಪಯೋಗ ಮತ್ತುಗಮನಿಸಬೇಕಾದ ಅಪಾಯಗಳು, ಆನ್‌ಲೈನ್ ಕ್ಲಾಸಸ್, ಇ-ಲರ್ನಿಂಗ್, ಡಿಜಿಟಲ್ ಲೈಬ್ರರಿ ಬಳಕೆಯ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಸಹಾಯವು ಹೇಗೆ ಉಪಯುಕ್ತವೆಂಬುದರ ಅರಿವು, ಇತ್ಯಾದಿ ವಿಷಯಗಳನ್ನು ಸರಳವಾಗಿ ಹಾಗೂ ಉದಾಹರಣೆಗಳೊಂದಿಗೆ ತಿಳಿಹೇಳಿದರು.
ಸಮುದಾಯಕ್ಕೆ ತಂತ್ರಜ್ಞಾನ ಜ್ಞಾನವನ್ನು ತಲುಪಿಸುವ ಮೂಲಕ (ಬಿಐಟಿಎಂ) ಮತ್ತು ಐಇಇಇ ಐಇಇಇ ಸ್ಟೂಡೆಂಟ್ ಬ್ರಾಂಚ್ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದಿಸೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ ಮತ್ತು ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ್ ತಿಳಿಸಿದರು.
ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಂಪಾಸ್ ಬಾಕ್ಸ್ಗಳನ್ನು ಉಡುಗೊರೆಯಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗೇಶ್, ಬಿಐಟಿಎಂ ಪ್ರಾಧ್ಯಾಪಕರಾದ ಡಾ. ಅಬ್ದುಲ್ ಲತೀಫ್, ಡಾ. ನಾಸೀರ್, ಅಶ್ವಥನಾರಾಯಣ, ಉಲಗನಾಧನ್, ವಿಲಿಯಮ್ ಥಾಮಸ್, ಅಧೀಕ್ಷಕರಾದ ಬಸವರಾಜ್ ಬಿಸಲಹಳ್ಳಿ, ಆರೋಗ್ಯ ವಿಭಾಗದ ಡಾ. ತಾಕಿಫ್, ಅನ್ನಪೂರ್ಣ, ಮತ್ತು ವಿದ್ಯಾರ್ಥಿಗಳಾದ ಆನಂದ, ಸಂಚಿತ್, ಸಬರೀಶ್, ತಹೀಯ, ಗೌತಮಿ, ಜೀವನ್ ಮೊದಲಾದವರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)





