ಸುಧೀಂದ್ರನಗರ ರಾಯರ ಮಠದಲ್ಲಿ ಟಿಟಿಡಿ ಕಾರ್ಯಕ್ರಮ

Upayuktha
0


ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 18 ರಿಂದ 21ರ ವರೆಗೆ ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಭಜನಾ ಕಾರ್ಯಕ್ರಮ- (ಪ್ರತಿದಿನ ಸಂಜೆ 6 ರಿಂದ 7) : ನವೆಂಬರ್ 18- ವಿಜಯನಗರದ ಪವಿತ್ರ ಗಾನ ವೃಂದ, ನವೆಂಬರ್  19-ಸುಧೀಂದ್ರನಗರದ ಶ್ರೀ ವಿಜಯ ವಿಠಲ ಭಜನಾ ಮಂಡಳಿ, ನವೆಂಬರ್ 20-ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿ‌.


ಪ್ರವಚನ ಕಾರ್ಯಕ್ರಮ- ನವೆಂಬರ್ 18 ರಿಂದ 20 ಪ್ರತಿದಿನ ಸಂಜೆ 7 ರಿಂದ 8 : ಶ್ರೀ ಪ್ರಸನ್ನಾಚಾರ್‌ ತಂತ್ರಸಾರ ಇವರಿಂದ "ಕಾರ್ತೀಕ ಮಾಸ ಮಹಾತ್ಮೆ" ವಿಷಯವಾಗಿ ಧಾರ್ಮಿಕ ಪ್ರವಚನ.


ಹರಿನಾಮ ಸಂಕೀರ್ತನೆ : ನವೆಂಬರ್ 21, ಶುಕ್ರವಾರ ಸಂಜೆ 6-30ಕ್ಕೆ ಶ್ರೀ ಪ್ರಾಣೇಶ ಪಿ. ಭಾರಧ್ವಾಜ್ (ಗಾಯನ), ಶ್ರೀ ರಾಜೇಂದ್ರ ಬೆಂಡೆ (ಕೀ-ಬೋರ್ಡ್), ಶ್ರೀ ಮಧುಸೂದನ್ ಕೊಪ್ಪ (ತಬಲಾ). 


ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top