ಬಳ್ಳಾರಿ: ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿರುವ ವಿಸ್ಡಮ್ ಲ್ಯಾಂಡ್ ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತನ್ನ ಮೌಲ್ಯ, ಶಕ್ತಿ ಮತ್ತು ಶಿಸ್ತುಗೊಂಡ ಸಾಧನೆಯನ್ನು ರಾಜ್ಯಮಟ್ಟಕ್ಕೂ ತಲುಪುವಂತೆ ಪ್ರದರ್ಶಿಸಿದೆ. ಶಾಲೆಯ 25 ಮಂది ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ವಿಭಾಗಗಳಲ್ಲಿ 27 ಸ್ಥಾನಗಳನ್ನು ಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು, ಶಾಲೆಯ ಕ್ರೀಡಾ ನೈಪುಣ್ಯಕ್ಕೆ ದಕ್ಕಿದ ಮಹತ್ತರ ಗೌರವವೆಂದು ಪರಿಗಣಿಸಲಾಗಿದೆ.
ಕಳೆದ ವರ್ಷ 11 ವಿದ್ಯಾರ್ಥಿಗಳು ರಾಜ್ಯಮಟ್ಟ ತಲುಪಿದ್ದರೆ, ಈ ವರ್ಷ ಸಾಧನೆಯ ಸಂಖ್ಯೆಯು ದ್ವಿಗುಣವಾದುದು ಶಾಲೆಯ ಕ್ರೀಡಾ ತರಬೇತಿಯ ಗಟ್ಟಿತನ, ಶಿಕ್ಷಕರ ನಿಷ್ಠೆ ಮತ್ತು ವಿದ್ಯಾರ್ಥಿಗಳ ಸಮರ್ಪಿತ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಈ ಸಾಧನೆಯಲ್ಲಿ U–14 ಬಾಲಬಾಲಕರ ಬಾಲ್ ಬ್ಯಾಡ್ಮಿಂಟನ್ ತಂಡದ ಗಿರೀಶ್, ವಿದ್ಯಾಸಾಗರ, ಶ್ರೀಕಾಂತ್, ಮನೋಜ್ ಮೇಟಿ ಮತ್ತು ಮನೋಜ್ ಕುಮಾರ್; U–14 ಬಾಲಿಕೆಗಳ ತಂಡದ ಲತಿಕಾ ಶ್ರೀ, ಕುದಸಿಯಾ, ಮೇಘನಾ, ವೈಷ್ಣವಿ ಮತ್ತು ಪ್ರಿಯಾಂಕಾ; ಟೇಬಲ್ ಟೆನಿಸ್ ವಿಭಾಗದಲ್ಲಿ ಆಯ್ಕೆಯಾದ ದೀಕ್ಷಾ ಜಿ, ಶ್ರೇಯಾ, ಧರಣಿ, ಪ್ರಾರ್ಥನಾ ಹಾಗೂ ವಂದನಾ; ಚೆಸ್ ವಿಭಾಗದ ಚಿಂತನ ಮತ್ತು ಲೋಕೇಶ್ ತಮ್ಮ ಕೌಶಲ್ಯದಿಂದ ಮೆರಗು ತಂದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ 4×100 ಮೀ. ರಿಲೇ ಸ್ಪರ್ಧೆಯಲ್ಲಿ ಲಿಖಿಲ್ ರೆಡ್ಡಿ, ನೌನೀತ್, ರವಿ ಕುಮಾರ್ ಮತ್ತು ದೀಕ್ಷಿತ್ ತಂಡ ಒಳ್ಳೆಯ ಹೊಂದಾಣಿಕೆಯಿಂದ 1ನೇ ಸ್ಥಾನ ಪಡೆದಿದ್ದು, 400 ಮೀ. ಓಟದಲ್ಲಿ ನಿಖಿಲ್ ರೆಡ್ಡಿ ಪ್ರಥಮ ಸ್ಥಾನ ಗಳಿಸಿದ್ದಾರೆ. U–17 ಪೊಲ್ ವಾಲ್ಟ್ ವಿಭಾಗದಲ್ಲಿ ಶರತ್ ಚಂದ್ರ, ಸುಚಿತ್ರಾ ಮತ್ತು ತನೂಶ್ರೀ ಜಿ.ಪಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಮುಖ್ಯಗುರು ಎಸ್.ವೈ. ಕಟ್ಟೆಗೌಡ, ಉಪಮುಖ್ಯಗುರು ಶ್ರೀಮತಿ ಪ್ರಾರ್ಥನಾ, ಶಾಲಾ ಸಲಹೆಗಾರರು ಕ್ರಿಸ್ಟಿನಾ, ಶೈಕ್ಷಣಿಕ ನಿರ್ದೇಶಕರು ಮೌನೇಶ್ವರ ಆಚಾರ, ಯೋಗಕ್ಷೇಮಾಧಿಕಾರಿ ರಿಯಾಜ್ ಬಿ, ಕ್ರೀಡಾಧಿಕಾರಿಗಳು ರಾಮಕೃಷ್ಣ ಕೆ ಮತ್ತು ಶಿಲ್ಪ ಎಂ, ದೈಹಿಕ ಶಿಕ್ಷಣ ಶಿಕ್ಷಕರು ಪೂಜಾರಿ ರವಿ ಮತ್ತು ಚಂದ್ರು ತಮ್ಮ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನವೆಂಬರ್ 14 ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಸೂತಿ–ಸ್ತ್ರೀರೋಗ ತಜ್ಞೆ ಡಾ. ರಾಧಿಕಾ ಆಚಾರ್ಯ ಇವರು ಕೂಡ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ವಿದ್ಯಾರ್ಥಿಗಳ ಆರೋಗ್ಯ, ಶಿಸ್ತು ಮತ್ತು ಪರಿಶ್ರಮವೇ ಇವರ ಮುಂದಿನ ಯಶಸ್ಸಿನ ಬಂಡವಾಳ ಎಂದು ಶ್ಲಾಘಿಸಿದರು.
ರಾಜ್ಯಮಟ್ಟದ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಶ್ರೇಷ್ಠ ಫಲಿತಾಂಶಗಳನ್ನು ದಾಖಲಿಸಿ, ವಿಸ್ಡಮ್ ಲ್ಯಾಂಡ್ ಶಾಲೆಯ ಹೆಸರನ್ನು ರಾಜ್ಯ–ರಾಷ್ಟ್ರ ಮಟ್ಟದ ವೇದಿಕೆಗಳಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಹೊರಹೊಮ್ಮಿಸುವರು ಎಂಬ ವಿಶ್ವಾಸವನ್ನು ಶಾಲಾ ಕುಟುಂಬ ವ್ಯಕ್ತಪಡಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







