ಪುಸ್ತಕಗಳು ಹಲವು ರೀತಿಯ ಜ್ಞಾನದ ಬೆಳಕನ್ನು ತೋರಿಸುವಂತಹ ಶಕ್ತಿಯನ್ನು ಹೊಂದಿದೆ. ನಮ್ಮ ನೋವು, ಚಿಂತೆಗಳನ್ನು ಪುಸ್ತಕ ಓದುವುದರಿಂದ ಮರೆಯಬಹುದು, ಮನಸ್ಸಿಗೆ ಶಾಂತಿ ನೀಡುತ್ತದೆ. ಪ್ರತಿದಿನ ಓದುವುದರಿಂದ ಜ್ಞಾನವು ವೃದ್ಧಿಯಾಗುತ್ತದೆ.
ಸಣ್ಣ ವಯಸ್ಸಿನಲ್ಲಿಯೇ ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ ಆ ಓದು ನಮಗೆ ಎಷ್ಟು ಸಂಸ್ಕಾರ ಕಲಿಸಿವೆ ಎನ್ನುವುದು ತುಂಬಾ ಮುಖ್ಯ. ಓದುವ ಸಮಯದಲ್ಲಿ ನಾವು ನಿಯತ್ತಿನಿಂದ ಪುಸ್ತಕದ ಜೊತೆ ಗೆಳೆತನ ಮಾಡಿದರೆ ಮುಂದೊಂದು ದಿನ ಇಡೀ ಜಗತ್ತೇ ನಮ್ಮ ಸ್ನೇಹಕ್ಕಾಗಿ ಕಾಯುವ ಹಾಗೆ ಇದು ಮಾಡುತ್ತದೆ. ನಾವು ಓದಿದ ಪುಸ್ತಕ ನಮ್ಮ ಜೀವನವು ಇಷ್ಟು ಬದಲಾವಣೆಯಾಗಲು ಕಾರಣ. ಪುಸ್ತಕ ಸ್ನೇಹಿತನಿದ್ದಂತೆ.
ಪುಸ್ತಕಗಳು ಮಾನವೀಯತೆಗೆ ಭರಿಸಲಾಗದ ಆಸ್ತಿ. ಒಂದು ಉತ್ತಮ ಪುಸ್ತಕ ನೂರು ಜನ, ಒಳ್ಳೆಯ ಸ್ನೇಹಿತರಿಗೆ ಸಮ. ಒಂದು ಪುಸ್ತಕ ಮಾಡುವಷ್ಟು ಉಪಕಾರ ನಮಗೆ ಬೇರೆ ಯಾವ ಮನುಷ್ಯರೂ ಮಾಡಲಾರರು.
ಪುಸ್ತಕವು, ನಾವು ಕುಳಿತಿರುವ ಸ್ಥಳದಲ್ಲೇ ಪ್ರಪಂಚವನ್ನು ತೋರಿಸುವಂತಹ ಶಕ್ತಿಯನ್ನು ಹೊಂದಿದೆ. ಪುಸ್ತಕವನ್ನು ತಲೆಬಗ್ಗಿ ಓದಿದರೆ, ನಮ್ಮನ್ನು ಪ್ರಪಂಚದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ನಮ್ಮ ಜೀವನದಲ್ಲಿ ದಾರಿಯನ್ನು ತೋರಿಸುವ ಸ್ನೇಹಿತನಿದ್ದಂತೆ. ಒಳ್ಳೆಯ ಆಲೋಚನೆಗಳನ್ನು ಕೊಡುತ್ತವೆ, ನಮ್ಮಜೀವನವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಜ್ಞಾನ, ಸಂತೋಷದ ಜೀವನ, ಜೀವನದ ಪಾಠ, ಪ್ರೀತಿ ಭಯ, ಪ್ರಾರ್ಥನೆ ಮತ್ತು ಸಹಾಯಕ ಅಂಶಗಳನ್ನು ಒಳಗೊಂಡಿರುತ್ತದೆ. ನಾವು ಓದಿದಾಗ ಕೆಲವೊಂದನ್ನು ಮರೆತು ಬಿಡುತ್ತೇವೆ ಆದರೆ ಪುಸ್ತಕ ಮರೆತದ್ದನ್ನು ಮರುಕಳಿಸಲು ಸಹಾಯ ಮಾಡುತ್ತದೆ.
ನಾವು ಬರೆಯುವ ಕೌಶಲ್ಯವನ್ನು ಪ್ರಾರಂಭಿಸುವುದು ಒಂದು ಒಳ್ಳೆಯ ಪುಸ್ತಕದಿಂದ ಮಾತ್ರ ಸಾಧ್ಯ, ಅಕ್ಷರ ಬೆಳವಣಿಗೆಯಾಗಲು ಪುಸ್ತಕ ಸಹಾಯ ಮಾಡುತ್ತದೆ. ಪುಸ್ತಕವೇ ಪ್ರತಿಯೊಬ್ಬರ ಜ್ಞಾನ ಭಂಡಾರವಾಗಿದೆ. ನಮ್ಮ ಸಂಪತ್ತನ್ನು ಕಿತ್ತುಕೊಳ್ಳಬಹುದು ಆದರೆ ನಾವು ಬರೆದು ಕಲಿತಿರುವ ಜ್ಞಾನದ ಪುಸ್ತಕವನ್ನು ಮರೆಯಲು, ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಿದ್ಯೆಗೆ ಪುಸ್ತಕವೇ ಸಾಟಿ ಬೇರೇನೂ ಇಲ್ಲ.
- ಶಿವಾನಿ ಕೊಡಂಗಾಯಿ
ಪತ್ರಿಕೋಧ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



