ನಮಸ್ಕಾರ ನಮ್ರತೆ ತರುತ್ತದೆ

Upayuktha
0


ಹಿಂದೂ ಧರ್ಮದಲ್ಲಿ ಶುಭಾಶಯದ ಪ್ರತೀಕ ನಮಸ್ಕಾರ. ನಮಸ್ಕಾರವನ್ನು ಸಾಮಾನ್ಯವಾಗಿ ಎರಡು ಪ್ರಕಾರಗಳಲ್ಲಿ ಎಂದರೆ ವಂದನೆ ಮತ್ತು ಬೀಳ್ಕೊಡುಗೆ ರೂಪದಲ್ಲಿ ಬಳಸುತ್ತಾರೆ. ನಮಸ್ಕಾರ ಪದಕ್ಕೆ ಅಭಿನಂದನೆ, ನಮನ, ಪ್ರಣಾಮ, ಶರಣು ಎಂಬ ಪರ್ಯಾಯ ಶಬ್ದಗಳು ಉಂಟು. ನಮಸ್ಕಾರವು ದೇಹ ಹಾಗೂ ಮನಸ್ಸು ಬಾಗುವ ಅರ್ಥವನ್ನು ಸೂಚಿಸುತ್ತದೆ. ವಂದನೆಯ ಮೂಲಕ ಪರಮಾತ್ಮನ ದಾಸರಾಗಿ ಮನಸ್ಸಿನ ವೇದನೆ ಹಾಗೂ ನಿವೇದನೆಗಳನ್ನು ದೇವರೊಂದಿಗೆ ಮಾಡುವುದಾಗಿದೆ. 


ನನ್ನಲ್ಲಿರುವ ಆತ್ಮ ನಿಮ್ಮಲ್ಲಿರುವ ಆತ್ಮಕ್ಕೆ ನಮಸ್ಕರಿಸುತ್ತದೆ. ನಮಸ್ಕಾರಮ್ ಸಂಸ್ಕೃತ ರೂಪವಾಗಿದ್ದು ,ಕಾರ, ಕರಣ, ಕಾರ್ಯ ಅಥವಾ ಕ್ರಿಯೆ ಆಗಿದೆ. ಸಂಸ್ಕೃತ ರೂಪದಲ್ಲಿ ನಮಸ್ತೆಗೆ, ನಮಃ ಎಂದರೆ, ಬಾಗಿದ, ಅಸ್ತೆ ಎಂದರೆ ತಲೆ, ಅಹಂಕಾರ ತುಂಬಿದ ತಲೆಯನ್ನು ಎಲ್ಲರೆದುರೂ ಬಾಗಿಸುವುದು ಎಂಬ ಅರ್ಥವನ್ನು ನೀಡುತ್ತದೆ. "ನಮಸ್ಕಾರ ಎಂಬುದು ಸಭ್ಯ ಜನರ ಮಾತುಕತೆಯ ಮುನ್ನುಡಿ ಎಂದು "ಪಂಜೆಮಂಗೇಶರಾಯರು ಹೇಳಿದ ಮಾತು ಸುಳ್ಳಲ್ಲ. ನಮಸ್ಕಾರ ಸಂಸ್ಕೃತಿ ಜನಿಸಿದ್ದು ಭಾರತದಲ್ಲಿ. ಇಂದು ವಿಶ್ವದಾದ್ಯಂತ ನಮಸ್ಕರಿಸುವ ಸಂಸ್ಕೃತಿ ರೂಢಿಯಲ್ಲಿದೆ. 


ಭಾರತೀಯ ಧರ್ಮಗ್ರಂಥಗಳಲ್ಲಿ ಐದು ಪ್ರಕಾರದ ನಮಸ್ಕಾರಗಳು ಇವೆ .1. ಪ್ರತ್ಯುತ್ತಾನ - ಗೌರವಪೂರ್ವಕವಾಗಿ ಬಂದಂತಹವರನ್ನು ಸ್ವಾಗತಿಸಲು ಎದ್ದು ನಿಲ್ಲುವ ನಮಸ್ಕಾರದ ಪ್ರಕಾರ. 2. ನಮಸ್ಕಾರ - ಎರಡೂ ಕೈಗಳನ್ನು ಜೋಡಿಸಿ ಆದರಿಸುವುದು. 3.ಪಾದ ಸ್ಪರ್ಶ - ಹಿರಿಯರ ಪಾದಗಳನ್ನು ಸ್ಪರ್ಶ ಮಾಡಿ ಆಶೀರ್ವಾದ ಪಡೆಯುವುದು 4.ಸಾಷ್ಟಾoಗ - ಪೂರ್ತಿಯಾಗಿ ನೆಲದ ಮೇಲೆ ಮಲಗಿ ನಮಸ್ಕರಿಸುವುದು 5.ಮೆಚ್ಚುಗೆ - ಮತ್ತೊಬ್ಬರಿಗೆ ಮೆಚ್ಚುಗೆ ವ್ಯಕ್ತಪಡಿಸುವುದು, ಅಥವಾ ಪ್ರತಿಕ್ರಿಯೆಯನ್ನು ಸ್ವಾಗತಿಸುವುದು. 


ಕಾಯಿಕ ವಾಗ್ಭವಶ್ಚೈವ

ಮಾನವಸ್ತ್ರೀವಿಧಸ್ಸ್ಮ್ರತಃ

ನಮಸ್ಕಾರಸ್ತು ತತ್ವಜ್ಞೈಃ

ಉತ್ತಮಾಧಮಮಧ್ಯಮಾಃ


ನಮಸ್ಕಾರದಲ್ಲಿ ದೈಹಿಕ (ಕಾಯಿಕ), ವಾಚಿಕ, ಮಾನಸಿಕ ಎಂಬ ಮೂರು ವಿಧ ಇವೆ. ದೇಹದಿಂದ ಮಾಡುವ ನಮಸ್ಕಾರ ದೈಹಿಕ (ಕಾಯಿಕ) ನಮಸ್ಕಾರ, ಮಾತಿನ ನಮಸ್ಕಾರ ವಾಚಿಕ ನಮಸ್ಕಾರ, ಮನಸ್ಸಿನಲ್ಲಿ ಮಾಡುವ ನಮಸ್ಕಾರ ಮಾನಸಿಕ ನಮಸ್ಕಾರ. ಈ ರೀತಿಯ ಮೂರು ಪ್ರಕಾರದ ನಮಸ್ಕಾರಗಳು ಒಟ್ಟಾದಾಗ ತ್ರಿಕರಣ ನಮಸ್ಕಾರ ಎನಿಸಿಕೊಳ್ಳುತ್ತದೆ. ಈ ಮೂರು ಪ್ರಕಾರಗಳಲ್ಲಿ ದೈಹಿಕ ನಮಸ್ಕಾರ ಉತ್ತಮ, ಮಾನಸಿಕ ನಮಸ್ಕಾರ ಮಧ್ಯಮ ಮತ್ತು ವಾಚಿಕ ನಮಸ್ಕಾರ ಅಧಮವಾಗಿದೆ. 


ನಮಸ್ಕಾರ ಮಾಡುವುದರಿಂದ ವೈಜ್ಞಾನಿಕ ಲಾಭಗಳಿದ್ದು, ಹೃದಯ ಚಕ್ರ ಹಾಗೂ ವಿಧೇಯ ಚಕ್ರ ಶರೀರದಲ್ಲಿ ಧನಾತ್ಮಕ ಶಕ್ತಿಯ ವೇಗದ ಪ್ರಸರಣವನ್ನು ಕ್ರಿಯಾಶೀಲಗೊಳಿಸುತ್ತದೆ. ಇದರಿಂದ ಮಾನಸಿಕ ಶಾಂತಿ ವೃದ್ಧಿಗೊಳ್ಳುತ್ತದೆ. ಅಲ್ಲದೇ ಕೋಪವನ್ನು ನಿಯಂತ್ರಿಸಲು ಸಹ ಉಪಕಾರಿಯಾಗಿದೆ ಹಾಗೂ ನಮ್ರತೆಯನ್ನು ತರುತ್ತದೆ. 


- ದೀಪಶ್ರೀ ಎಸ್ ಕೂಡ್ಲಿಗಿ 

ಶಿಕ್ಷಕಿ ಕಥೆಗಾರ್ತಿ ಹವ್ಯಾಸಿ ಬರಹಗಾರ್ತಿ  

ಕೂಡ್ಲಿಗಿ ತಾಲ್ಲೂಕು 

ವಿಜಯನಗರ ಜಿಲ್ಲೆ. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top