ನಡ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗೆ ವಯೋನಿವೃತ್ತಿ, ಸಾರ್ವಜನಿಕ ಅಭಿನಂದನೆ

Upayuktha
0


ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಚಂದ್ರಶೇಖರ್ ಇವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


"ಚಂದ್ರಶೇಖರ್ ಇವರು ಸಾತ್ವಿಕ ಸ್ವಭಾವದವರಾಗಿದ್ದು ಎಲ್ಲರಿಗೂ ಚಂದ್ರನಂತೆ ತಂಪನ್ನು ನೀಡುವವರು. ಯಾರನ್ನು ದ್ವೇಷಿಸದ ಅಜಾತಶತ್ರು" ಎಂದು ನಿವೃತ್ತ ಪ್ರಾಂಶುಪಾಲರಾದ ಯದುಪತಿ ಗೌಡ ಇವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 


ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಲಿಲ್ಲಿ ಪಿವಿ ಪ್ರಸ್ತಾವನೆ ಯೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಸುರಕ್ಷಿತ, ಹಿರಿಯ  ವಿದ್ಯಾರ್ಥಿ ನಿತೇಶ್, ಉಪನ್ಯಾಸಕಿ ವಸಂತಿ ಪಿ ಶ್ರೀಯುತರ ನಿಸ್ವಾರ್ಥ ಸೇವೆಯ ಬಗ್ಗೆ, ಕಾಲೇಜಿಗೆ ನೀಡಿದ ಸಾಕಷ್ಟು ಕೊಡುಗೆಗಳ ಬಗ್ಗೆ ಮಾತನಾಡಿದರು.


ಉಪನ್ಯಾಸಕಿ ಶ್ರೀಮತಿ ಶಿಲ್ಪಾ ಡಿ ಸನ್ಮಾನ ಪತ್ರವನ್ನು ವಾಚಿಸಿದ ಬಳಿಕ ಕಾಲೇಜಿನ ಉಪನ್ಯಾಸಕರು, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ನಡ ಪ್ರೌಢಶಾಲಾ ವಿಭಾಗದ ಅಧ್ಯಾಪಕರು, ಊರಿನವರು ಪ್ರತ್ಯೇಕ ಪ್ರತ್ಯೇಕವಾಗಿ ಸನ್ಮಾನಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಚಂದ್ರಶೇಖರ್ ಇವರು ತಮ್ಮ ಆರಂಭದ ಬದುಕಿನ ಕಷ್ಟದ ದಿನಗಳ ಬಗ್ಗೆ, ತನ್ನ 32 ವರ್ಷಗಳ ವಿಸ್ತಾರವಾದ ಸೇವಾ ಅನುಭವಗಳ ಬಗ್ಗೆ, ಸೇವಾ ಸಂತೃಪ್ತಿಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.


ಮುಖ್ಯ ಅಭ್ಯಾಗತರಾಗಿ ಅಜಿತ್ ಆರಿಗ, ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ಮೋಹನ್ ಬಾಬು, ಜನಾರ್ದನ ಗೌಡ, ನಾರ್ಬರ್ಟ್ ಮಾರ್ಟಿಸ್, ಕಾಲೇಜು ನಾಯಕ ಭವಿತ್, ಕಾರ್ಯದರ್ಶಿ ಹೀನಾ ಕೌಸರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಇವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪವಿತ್ರ ಧನ್ಯವಾದವಿತ್ತರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top