ಸುಳ್ಯ: ಸುಳ್ಯದ ಚಿತೇಶ್ ಸಂಗೀತ ಬಳಗ ಆಯೋಜಿಸಿದ ಕರೋಕೆ ಸಂಗೀತ ಸ್ಪರ್ಧೆಯು ಭಾನುವಾರ (ಅ.26) ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಐವರ್ನಾಡಿನ ರಾಜ್ಯ ಪ್ರಶಸ್ತಿ ವಿಜೇತ, ಮುತ್ತು ಕೃಷಿಕ ನವೀನ್ ಚಾತುಬಾಯಿರವರು ಹಾಗೂ ಚಂದನ ಕೃಷಿ ರತ್ನ ಪ್ರಶಸ್ತಿ ಪುರಸ್ಕೃತ ಸಾವಿತ್ರಿ ದೊಡ್ಡಮನೆಯವರು ನೆರವೇರಿಸಿದರು. ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಐವರ್ನಾಡು ಗ್ರಾಂ.ಪಂ. ಸದಸ್ಯೆ,ಸುಜಾತ ಪವಿತ್ರಮಜಲು ವಹಿಸಿದ್ದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶಶಿರಾಜ್ ಮಂಗಳೂರು, ಪೂರ್ಣಿಮಾ ಪೆರ್ಲಂಪಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ನಂತರ ನಡೆದ ಸಂಗೀತ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 35 ಕ್ಕೂ ಹೆಚ್ಚು ಗಾಯಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಿರಿಯರ ವಿಭಾಗ ಮತ್ತು ಕಿರಿಯರ ವಿಭಾಗ ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಖ್ಯಾತ ಗಾಯಕರಾದ ಪದ್ಮರಾಜ್ ಮತ್ತು ಸಫ್ವಾನ್ ಸಾಲೆತ್ತೂರು ಸಂಗೀತ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ, ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್ ಭೀಮರಾವ್ ವಾಷ್ಠರ್ ಅವರು ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಐವರ್ನಾಡು ಶ್ರೀ ಪಂಚಾಲಿಂಗೇಶ್ವರ ದೇವಾಲಯದ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಶ್ರೀ ಶಿವರಾಮ ನೆಕ್ರಪ್ಪಾಡಿ, ಗಾಯಕ ವಿಜಯಕುಮಾರ್ ಸುಳ್ಯ ಮತ್ತು ಗಾಯಕ ಬಿ ಎಸ್ ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಕಲಾ ಪ್ರಕಾರಗಳಲ್ಲಿ ಪ್ರತಿಭಾವಂತರಾದ ಸುರೇಶ್ ರಾವ್ ಮಂಗಳೂರು, ಹರ್ಷಿತಾ ಐವರ್ನಾಡು, ಧನ್ವಿ ರೈ ಪಾಣಾಜೆ ಮತ್ತು ಸೌರವ್ ವಿಟ್ಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನವೀನ್ ಬಾಂಜಿಕೋಡಿ ಅದ್ಬುತವಾಗಿ ನಿರೂಪಣೆ ಮಾಡಿದರು. ಗಾಯಕ, ಕವಿ, ಸಂಘಟಕರಾದ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಇವರು ನೇತೃತ್ವ ವಹಿಸಿದ್ದ ಈ ಕಾರ್ಯಕ್ರಮ ಮನಮೋಹಕವಾಗಿ, ಮಧುರವಾಗಿ ಮೂಡಿಬಂತು. ರೋಹಿತ್ ಬಾಂಜಿಕೋಡಿ, ಪ್ರಸಾದ್ ಕೆಮ್ಮಿಂಜೆ, ಹಾಗೂ ಗಾಯಕ ರಾಜೇಶ್ ಎಸ್.ಎನ್. ಗಾಯಕಿ ಡಿ ಪುಷ್ಪಾವತಿ, ಯಶುಭ ರೈ ಪುತ್ತೂರು. ಅರುಣ್ ರಾವ್ ಜಾಧವ್ ಸುಳ್ಯ. ಅಮಿತಾ ಐವರ್ನಾಡು ಕಾರ್ಯಕ್ರಮದಲ್ಲಿ ಸಹಕರಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಕಾರ್ಯಕ್ರಮದಲ್ಲಿ ಹಿರಿಯರ ವಿಭಾಗದಲ್ಲಿ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜೊತೆ ಮೂರು ಸಮಾಧಾನಕರ ಬಹುಮಾನಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

