ಮಂಗಳೂರು: ಆಂತರಿಕ ಮತ್ತು ಬಾಹ್ಯ ಕಾರಣಗಳಿಂದಾಗಿ ಷೇರು ಮಾರುಕಟ್ಟೆ ಅಸ್ಥಿರವಾಗಿರುವ ಹಿನ್ನೆಲೆಯಲ್ಲಿ ಫ್ಲೆಕ್ಸಿ ಕ್ಯಾಪ್ ಫಂಡ್‍ಗಳು ಮತ್ತು ಮಲ್ಟಿ ಅಸೆಟ್ ಅಲೋಕೇಷನ್ ಫಂಡ್‍ಗಳನ್ನು ಜನ ಒಲವು ತೋರುತ್ತಿದ್ದಾರೆ. ತಮ್ಮ ವೈವಿಧ್ಯಮಯ ಹೂಡಿಕೆ ಮತ್ತು ಸುಲಭ ಅಳವಡಿಕೆಯ ಕಾರಣಕ್ಕೆ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತಿವೆ.
ಟಾಟಾ ಫ್ಲೆಕ್ಸಿ ಕ್ಯಾಪ್ ಫಂಡ್ 2025ರಲ್ಲಿ ಇಲ್ಲಿಯವರೆಗೆ ರೂ. 484 ಕೋಟಿ ಮೊತ್ತದ ಒಳಹರಿವನ್ನು ಪಡೆದಿದೆ. ಇದು ಕಳೆದ ವರ್ಷದ ಮಟ್ಟಕ್ಕಿಂತ ಸರಿಸುಮಾರು ಶೇಕಡ 92ರಷ್ಟು ಹೆಚ್ಚಾಗಿದೆ. ಇದರಲ್ಲಿ ಮಂಗಳೂರಿನ ಹೂಡಿಕೆ ಕೊಡುಗೆಯು ಶೇಕಡ 74ರಷ್ಟು ಏರಿಕೆಯಾಗಿ 1.36 ಕೋಟಿಗೆ ತಲುಪಿದೆ ಎಂದು ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್ ನಿಧಿ ವ್ಯವಸ್ಥಾಪಕ ಅಭಿನವ್ ಎಚ್ ಶರ್ಮಾ ಹೇಳಿದ್ದಾರೆ.
ಫ್ಲೆಕ್ಸಿ ಕ್ಯಾಪ್ ಫಂಡ್‍ಗಳು ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ದಿಮೆಗಳಲ್ಲಿ ಸಮರ್ಪಕ ಹಂಚಿಕೆಯ ಮೂಲಕ ಇಂತಹ ಬೇಡಿಕೆಯನ್ನು ಒದಗಿಸುತ್ತವೆ. ಆದರೆ, ಮಲ್ಟಿ ಅಸೆಟ್ ಅಸೆಟ್ ಫಂಡ್‍ಗಳು ಈಕ್ವಿಟಿಗಳು, ಸ್ಥಿರ ಆದಾಯ, ಚಿನ್ನ ಮತ್ತು ಸರಕುಗಳಾದ್ಯಂತ ಹೂಡಿಕೆ ಹರಡುವ ಮೂಲಕ ಅನಿಶ್ಚಿತತೆಯನ್ನು ಎದುರಿಸುವ ಸಾಮಥ್ರ್ಯ ಹೆಚ್ಚಿಸಲು ಪ್ರಯತ್ನಿಸುತ್ತವೆ" ಎಂದು ವಿವರಿಸಿದ್ದಾರೆ.
ಭಾರತದ ಮ್ಯೂಚುವಲ್ ಫಂಡ್‍ಗಳ ಸಂಘದ ಅಂಕಿ ಅಂಶಗಳ ಪ್ರಕಾರ, ಫ್ಲೆಕ್ಸಿ ಕ್ಯಾಪ್ ಫಂಡ್‍ಗಳಿಗೆ 2025 ರಲ್ಲಿ (ಸೆಪ್ಟೆಂಬರ್‍ವರೆಗೆ) ನಿವ್ವಳ ಒಳಹರಿವು ದುಪ್ಪಟ್ಟಾಗಿ ರೂ. 53,896 ಕೋಟಿ ಮೊತ್ತಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಈ ಒಳಹರಿವು ರೂ. 25,966 ಕೋಟಿ ಮೊತ್ತಗಳಷ್ಟಿತ್ತು. ಮಲ್ಟಿ ಅಸೆಟ್ ಅಲೋಕೇಷನ್ ಫಂಡ್ಸ್‍ಗಳು ರೂ. 28,972 ಕೋಟಿ ಸೆಳೆದಿವೆ. ಇದು ಹೈಬ್ರಿಡ್ ವಿಭಾಗಗಳಲ್ಲಿಯೇ ಎರಡನೇ ಅತಿ ಹೆಚ್ಚು ಮೊತ್ತವಾಗಿದೆ. ಉದ್ಯಮದ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಟಾಟಾ ಫ್ಲೆಕ್ಸಿ ಕ್ಯಾಪ್ ಫಂಡ್ ಮತ್ತು ಟಾಟಾ ಮಲ್ಟಿ ಅಸೆಟ್ ಅಲೋಕೇಷನ್ ಫಂಡ್ ಕೂಡ ಹೆಚ್ಚಿನ ಹೂಡಿಕೆ ಆಕರ್ಷಿಸಿವೆ ಎಂದು ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


