ಹೊಸಪೇಟೆ: ಅ.26ರಂದು ರಾಜ್ಯಮಟ್ಟದ ಕರೋಕೆ ಚಿತ್ರಗೀತೆ ಸ್ಪರ್ಧೆ

Upayuktha
0


ಹೊಸಪೇಟೆ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಆಯೋಜಿಸಿರುವ ಕರ್ನಾಟಕ ಧ್ವನಿ ಸಂಚಿಕೆ ಒಂದು ಈ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆಯನ್ನು ವಿಜಯನಗರ ಜಿಲ್ಲೆ, ಹೊಸಪೇಟೆಯ ಬುದ್ಧ ಬಸವ ಭವನದಲ್ಲಿ ಅ.26ರ ಭಾನುವಾರದಂದು ಆಯೋಜಿಸಲಾಗಿದೆ. ಈ ಗಾಯನ ಸ್ಪರ್ಧೆಯಲ್ಲಿ 38 ಜನ ಗಾಯಕರಿದ್ದು ಯುಗಳ ಗೀತೆಗಳನ್ನು ಹಾಡಲಿದ್ದಾರೆ. ಅಂತಿಮವಾಗಿ ಆಯ್ಕೆಯಾಗುವ ಗಾಯಕರಿಗೆ ಬೆಳಗಾವಿಯಲ್ಲಿ ನಡೆಯಲಿರುವ ಕನ್ನಡ ನುಡಿ ವೈಭವ 2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.


ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾರಾಣಿ ನಡೋಣಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ರಾಷ್ಟ್ರಮಟ್ಟದ ಚಿತ್ರ ಕಲಾವಿದರು ಬೆಳಗಾವಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಕೆ ಎಸ್ ನಾಯ್ಕರವರು ವಹಿಸಲಿದ್ದಾರೆ. ಗೊರೂರು ಅನಂತರಾಜು ಅವರ ಕೃತಿ ನಿಂತು ಹೋದ ರಂಗ ವೈಭವ ಪುಸ್ತಕದ ಲೋಕಾರ್ಪಣೆಯನ್ನು ಐಎಎಸ್ ಬಸವ ವೇದಿಕೆ ಬೆಂಗಳೂರು ಅಧ್ಯಕ್ಷ ಡಾ.ಸಿ ಸೋಮಶೇಖರ್ ನೆರವೇರಸುತ್ತಾರೆ. ಸಿಂಗಾರ ಎಂಬ ಹಾಡನ್ನು ಶ್ರೀಮತಿ ಕಮಲ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ. ಹೂವಿನ ಹಡಗಲಿಯ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷ ಮಧುನಾಯ್ಕ ಲಂಬಾಣಿ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಗೊರೂರು ಅನಂತರಾಜು, ವಿರುಪಾಕ್ಷಪ್ಪ ಯು, ಉದೇದಪ್ಪ ಕ್ಯಾದಿಗೆಹಾಳ್, ಪಿ ವಿ ವೆಂಕಟೇಶ ವಕೀಲರು ಹಾಜರಿರುತ್ತಾರೆ. ಈ ಸ್ಪರ್ದೆಯ ತೀರ್ಪುಗಾರರಾಗಿ ಕುಬೇರನಾಯ್ಕ ದಾವಣಗೆರೆ ಹಾಗೂ ಸ್ವರೂಪ ಭಾರದ್ವಾಜ್ ರವರು ನಿರ್ವಹಿಸುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top