ಜೆನ್ ಝೀ ಗಳಿಂದ ಪರಿಸರ ಜಾಗೃತಿ; ಸಕಾರಾತ್ಮಕ ಬೆಳವಣಿಗೆ

Upayuktha
0


ಜೆನ್ ಝೀ ತಲೆಮಾರಿನ ಯುವಕರು (1997-2010ರಲ್ಲಿ ಜನಿಸಿದವರು), ಆಲ್ಫಾ ತಲೆಮಾರಿನ ಹುಡುಗರು (2010-2024 ನಡುವಿನವರು), ಹಿಂದಿನ ತಲೆಮಾರಿನವರಿಗಿಂತ ಹೆಚ್ಚು ಅಗ್ರೆಸ್ಸಿವ್ ಗುಣದವರು, ಎಲ್ಲ ತಿಳಿದಿದ್ದೇವೆ ಅನ್ನುವ ಮನೋಭಾವದವರು, ವಿಷ್ಣು ಸುದರ್ಶನ ಚಕ್ರ ಹಿಡಿದಂತೆ ಸದಾ ಮೊಬೈಲ್ ಹಿಡಿದವರು ಎಂಬ ಆರೋಪಗಳಿದ್ದರೂ, ಇವರು ವೈಜ್ಞಾನಿಕ ಮನೋಭಾವ, ಪರಿಸರವನ್ನು -ಪರಿಸರ ಸ್ವಚ್ಛತೆಯನ್ನು ಇಷ್ಟ ಪಡುವವರೂ ಆಗಿ ಕಾಣುತ್ತಿದ್ದಾರೆ ಎಂಬ ಅಭಿಪ್ರಾಯವೂ ಇದೆ. 


ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ, ರಾಸಾಯನಿಕ ಬಳಕೆಯ ಅನಾಹುತಗಳ ಬಗ್ಗೆ ಹಿರಿಯರಿಗೆ ಹೇಳುವಷ್ಟು ಜಾಗೃತಿ ಹೊಂದಿದವರಾಗಿಯೂ ಕಾಣುತ್ತಿದ್ದಾರೆ.  


ಶಾಲಾ ಕಾಲೇಜ್‌ಗಳಲ್ಲೂ ಪ್ಲಾಸ್ಟಿಕ್ ಬಳಕೆ ಕಮ್ಮಿ, ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರಯತ್ನ ಮಾಡುವ ವಿಚಾರಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಒಂದು ಸಂಚಲನೆ ಉಂಟಾಗುತ್ತಿರುವುದೂ ಕಂಡುಬರುತ್ತಿದೆ.


ಎಲ್ಲ ಕಡೆ ಜೆನ್ Z, ಜೆನ್ ಆಲ್ಫಾ ತಲೆಮಾರಿನವರಿಂದ ಹೀಗೆ ಆಗುತ್ತಿದೆಯಾ? ಬೇರೆ ಬೇರೆ ಸ್ಥಳಗಳಲ್ಲಿ ಗಮನಿಸಿದಂತೆ, ಸುದ್ದಿ ಮಾಧ್ಯಮಗಳಲ್ಲಿ,  ಜಾಲತಾಣಗಳಗಳಲ್ಲಿ ಈ ತಲೆಮಾರಿನವರ, ಪರಿಸರ, ಪ್ಲಾಸ್ಟಿಕ್ ಸಂಬಂಧಿಸಿದ ರೀಲ್ಸ್, ಶಾರ್ಟ್ಸ್‌, ಸುದ್ದಿಗಳು ಹೆಚ್ಚಾಗಿ ಕಂಡುಬರುತ್ತಿರುವುದು ಧನಾತ್ಮಕ ಬೆಳವಣಿಗೆಗೆ ಪುಷ್ಟಿ ಕೊಡುತ್ತಿವೆ.


ಅವರಿಗೆ ಆಲ್ ದಿ ಬೆಸ್ಟ್ ಹೇಳಿ ನಾವೂ ಕೈ ಜೋಡಿಸೋಣ


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top