ಕೊಲ್ಹಾಪುರ: ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾನನೀಯ ಯೋಗಿ ಆದಿತ್ಯನಾಥ್ ಜೀ ಅವರು ಹಲಾಲ್ ಉತ್ಪನ್ನಗಳ ಮೇಲೆ ನಿಷೇಧ ವಿಧಿಸುವ ಕುರಿತು ಹೇಳಿಕೆ ನೀಡಿದ್ದರು. ಅದಾದ ಬಳಿಕ ಇಂದು ಕೊಲ್ಹಾಪುರದ ‘ಯೆವಲೆಜ್ ಮಿಲ್ಕ್ ಕಾರ್ನರ್’ ಅಂಗಡಿಯಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ ಇಂಡೋನೇಶಿಯಾದಿಂದ ಆಮದು ಮಾಡಲ್ಪಟ್ಟ ಮತ್ತು ‘ಹಲಾಲ್ ಪ್ರಮಾಣಪತ್ರ’ ಹೊಂದಿರುವ ‘ಮೆಂಟೋಸ್’ ಚಾಕೊಲೇಟ್ ಗಳು ಮಾರಾಟ ಮಾಡಲಾಗುತ್ತಿತ್ತು.
ಈ ಮಾಹಿತಿ ದೊರಕುತ್ತಿದ್ದಂತೆಯೇ ಹಿಂದೂತ್ವನಿಷ್ಠ ಕಾರ್ಯಕರ್ತರು ತಕ್ಷಣವೇ ಅಂಗಡಿ ಮಾಲೀಕರನ್ನು ಭೇಟಿಯಾಗಿ, ‘ಹಲಾಲ್ ಪ್ರಮಾಣಪತ್ರ’ ಅರ್ಥವ್ಯವಸ್ಥೆ ಭಾರತೀಯ ಸಮಾಜಕ್ಕೆ ಹೇಗೆ ಹಾನಿಕಾರಕವಾಗುತ್ತದೆ ಹಾಗೂ ಅದರ ಮೂಲಕ ಸಂಗ್ರಹವಾಗುವ ಹಣ ಹೇಗೆ ಅಪ್ರತ್ಯಕ್ಷವಾಗಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಸಲ್ಪಡುತ್ತದೆ ಎಂಬುದನ್ನು ವಿವರಿಸಿದರು.
ಇದನ್ನು ಕೇಳಿದ ಬಳಿಕ ಅಂಗಡಿ ಮಾಲೀಕರು ತಕ್ಷಣವೇ ‘ಹಲಾಲ್ ಪ್ರಮಾಣಿತ ಮೆಂಟೋಸ್’ ಚಾಕೊಲೇಟ್ ಗಳನ್ನು ಅಂಗಡಿಯಿಂದ ತೆಗೆದುಹಾಕಿ, ಮುಂದಿನ ದಿನಗಳಲ್ಲಿ ಯಾವುದೇ ‘ಹಲಾಲ್ ಪ್ರಮಾಣಪತ್ರ’ ಹೊಂದಿರುವ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂಬ ಭರವಸೆ ನೀಡಿದರು.
ಈ ಜಾಗೃತಿ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶಿವಾನಂದ ಸ್ವಾಮಿ, ಮಹೇಂದ್ರ ಅಹಿರೆ, ಪ್ರೀತಂ ಪವಾರ್, ವಿಶ್ವಾಸ್ ಪಾಟಿಲ್ ಹಾಗೂ ಮಹಾರಾಷ್ಟ್ರ ಮಂದಿರ ಮಹಾಸಂಘದ ಸಚಿನ್ ಭೋಸಲೆ ಮತ್ತು ಅಶೋಕ್ ಗುರುವ್ ಇನ್ನಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

