ಕನ್ನಡ ತಮಿಳು ಭಾಷೆಯ ಲೇಖಕಿಯಾಗಿ, ತಮಿಳು ಸೆಲ್ವಿ ಅನೇಕ ಅದ್ಭುತ ಕನ್ನಡ ಕೃತಿಗಳನ್ನು ರಚಿಸಿದ ವಿದ್ವಾಂಸರು. ತಮಿಳು ಸೆಲ್ವಿ ಎಂದರೆ, ಕನ್ನಡಿಗರಿಗೆ ಅಭಿಮಾನ ಬರುವುದು ಸಹಜ. ಅಸಾಮಾನ್ಯ ಕನ್ನಡ ನಿಷ್ಠೆ ಹೊಂದಿ, ಪ್ರಸ್ತುತ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿ, ಕನ್ನಡ ಭಾಷೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ ಡಾ. ಸೆಲ್ವಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಜನಿಸಿದ್ದು ತಮಿಳುನಾಡು ರಾಜ್ಯದಲ್ಲಿ ಆದರೂ, ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ಕನ್ನಡ ಎಂ.ಎ. ಪದವಿಯನ್ನು ಮೂರು ಸುವರ್ಣ ಪದಕಗಳೊಂದಿಗೆ ತನ್ನಾದಾಗಿಸಿಕೊಂಡ ಮಹಿಳೆ. ಕನ್ನಡ ಶಾಸನಗಳ ಬಗ್ಗೆ ಅಪಾರ ಆಸಕ್ತಿ ಹೊಂದಿ, ಡಾ. ಹಂ.ಪ.ನಾ ಅವರ ಮಾರ್ಗದರ್ಶನದಲ್ಲಿ “ಗಂಗರ ಶಾಸನಗಳ ಸಾಂಸ್ಕೃತಿಕ ಅಧ್ಯಯನ" ಎಂಬ ಸಂಶೋಧನಾ ಪ್ರಬಂಧ ಸಿದ್ಧಪಡಿಸಿ, ಗೌರವ ಡಾಕ್ಟರೇಟ್ ಪಡೆದ ಸೆಲ್ವಿ ಅವರು ಕನ್ನಡ ಮತ್ತು ತಮಿಳು ಭಾಷೆಯ ಕೊಂಡಿಯಾಗಿ ಕೆಲಸ ಮಾಡಿ ಜನಪ್ರಿಯ ಲೇಖಕಿ ಎಂಬುದು ಇವರ ಹೆಗ್ಗಳಿಕೆ.
ಹೊರನಾಡು ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ಸ್ಥಾನದಲ್ಲಿ ಹಲವಾರು ವಷ೯ಗಳಿಂದ ನಿರಂತರವಾಗಿ ತಮಿಳುನಾಡನ್ನು ಪ್ರತಿನಿಧಿಸುವ ಕೆಲಸ ಮಾಡಿ ಹೆಸರು ಗಳಿಸಿದ ಮಹನೀಯರು.ದೇಶಾದ್ಯಂತ ಸಂಚಾರ ಮಾಡಿದ ಈ ಲೇಖಕಿ. ಅದರಲ್ಲೂ ಸಿಂಗಪೂರ್, ಮಲೇಶಿಯಾ, ಬ್ಯಾಂಕಾಕ್, ಮತ್ತು ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿ, ಹಲವಾರು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಅಧ್ಭುತ ಪರಿಜ್ಞಾನ ಬಂದು ಕನ್ನಡ ಕಾವ್ಯ ಭಾಗಗಳನ್ನು ಕಂಠಪಾಠ ಮಾಡಿ ತಮ್ಮ ಪ್ರತಿಭೆ ಅಭಿವ್ಯಕ್ತಿ ಮಾಡಿದ ವಿದ್ವಾಂಸರು.
ಸೆಲ್ವಿ ಅವರು ಕನ್ನಡ ಭಾಷೆಯಿಂದ ತಮಿಳು ಭಾಷೆಗೆ ಮತ್ತು ತಮಿಳು ಭಾಷೆಯಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ದ್ರಾವಿಡ ಮೂಲದ “ಕನ್ನಡ -ತಮಿಳು" ಎಂಬ ಸಂಶೋಧನಾ ಗ್ರಂಥ ಬಿಡುಗಡೆ ಮಾಡಿದ್ದಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳು ಸಂಶೋಧನೆ) ಚೋಳ, ಪಲ್ಲವ ಶಿಲ್ಪಕಲೆ, ಅಶೋಕ್ ಮಿತ್ರನ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6,7,8 ಮತ್ತು 10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ ಅನುವಾದ ಮಾಡಿದ ಕೃತಿ ನಾನು ಅವನಲ್ಲ ಅವಳು, ಮುಂತಾದವು ಇವರ ಕೃತಿಗಳ ರಚನೆಗಳಾಗಿವೆ.
ಡಾ. ವೀರಪ್ಪ ಮೊಯಿಲಿ ಅವರ ಮಹಾನ್ವೇಷಣಂ ಮಹಾಕಾವ್ಯವನ್ನು ಸಹ ತಮಿಳು ಭಾಷೆಗೆ ಅನುವಾದಿಸಿದ್ದಾರೆ. ಇವರ ಅನುವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಸಂದಿವೆ. ಎಚ್ ವಿ ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕಾಂತಾವರ ಕನ್ನಡ ಸಂಘದ ಗೌರವಕ್ಕೆ ಪಾತ್ರರಾಗಿದ್ದಾರೆ.ತಮಿಳು ಸರ್ಕಾರ ಇವರಿಗೆ ಶ್ರೇಷ್ಠ ಅನುವಾದಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರ ಕನ್ನಡ ನಿಷ್ಠೆ, ಸಂಶೋಧನಾ ಪ್ರವೃತ್ತಿ, ಹೊರನಾಡಿನ ಕನ್ನಡ ಪ್ರಾತಿನಿಧಿತ್ವ, ಪ್ರತಿಭೆ ಅಸಾಮಾನ್ಯ. ಇವರು ತಮ್ಮ ಹುಟ್ಟುಹಬ್ಬವನ್ನು ಪ್ರತಿ ವರ್ಷ ಏಪ್ರಿಲ್ 13 ಆಚರಿಸುವರು.
- ಶ್ರೀಧರ ರಾಯಸಂ
ಗಿರಿನಗರ ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


