ಮಂಗಳೂರು: ದೇರೇಬೈಲ್ ಕೊಂಚಾಡಿಯ ತೋಟದಮನೆ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವ ಸಂದರ್ಭದಲ್ಲಿ, ಯಕ್ಷಸ್ನೇಹ ಬಳಗ ದೇರೆಬೈಲ್ ಕೊಂಚಾಡಿ ಯಕ್ಷಗಾನ ತಾಳಮದ್ದಳೆ ಬಳಗದವರು ನಡೆಸಿಕೊಟ್ಟ ಶ್ರೀಕೃಷ್ಣಲೀಲೆ-ಕಂಸವಧೆ ತಾಳಮದ್ದಳೆ ಕಾರ್ಯಕ್ರಮಕ್ಕೆ ಮಂಗಳೂರಿನ ಜನಪ್ರಿಯ ಶಾಸಕ ವೇದವ್ಯಾಸ ಕಾಮತರು ಆಗಮಿಸಿ ತಂಡಕ್ಕೆ ಶುಭಾಶಯ ಸಲ್ಲಿಸಿದರು.
ತಂಡದ ನಿರ್ದೇಶಕ ಮಧುಸೂದನ ಅಲೆವೂರಾಯರನ್ನು ಮತ್ತು ತಂಡವನ್ನು ಅಭಿನಂದಿಸಿ ಮಹಿಳೆಯರು ಮತ್ತು ಮಕ್ಕಳು ಭಾಗವಸಿದ್ದನ್ನು ಶ್ಲಾಘಿಸಿದರು. ಮತ್ತು ತಂಡವು ಇನ್ನೂ ಹೆಚ್ಚಿನ ಯಶಸ್ಸನ್ನು ಗಳಿಸಲಿ ಎಂದು ಹಾರೈಸಿದರು.
ಅವರ ಜೊತೆಗೆ ದೇವಳದ ಆಡಳಿತ ಮಂಡಳಿಯ ಪ್ರಮುಖರಾದ ರಮಾನಂದ ಭಂಡಾರಿ, ಜಗದೀಶಶೆಟ್ಟಿ ಬಿಜೈ, ರಂಜನ್ ಬಿಜೈ, ಆನಂದ ದೇವಾಡಿಗ, ಶ್ರೀಮತಿ ರಂಜನಿ, ಮುರಾರಿ ಕಡಂಬಳಿತ್ತಾಯ ಮುಂತಾದ ಗಣ್ಯರು ಉಪಸ್ತಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


