ಸರಳ, ಸುಂದರ ಹಿಂದಿ ಭಾಷೆ: ರಾಜೇಶ್ ಡಿ ಶರ್ಮ

Upayuktha
0

ಕೆನರಾ ಕಾಲೇಜಿನಲ್ಲಿ ಹಿಂದಿ ದಿವಸಾಚರಣೆ





ಮಂಗಳೂರು: ಹಿಂದಿ ಭಾಷೆಯು ಬಹಳ ಸರಳ ಹಾಗೂ ಸುಂದರ ಭಾಷೆಯಾಗಿದ್ದು ದೇಶೀಯರನ್ನು ಒಗ್ಗೂಡಿಸುವ ಭಾಷೆಯಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಉಪ ಮಹಾ ಪ್ರಬಂಧಕ ರಾಜೇಶ್ ಡಿ ಶರ್ಮ ಹೇಳಿದರು. ಅವರು ಇಂದು ಕೆನರಾ ಕಾಲೇಜಿನಲ್ಲಿ ಹಿಂದಿ ದಿವಸಾಚರಣೆಯ ಪ್ರಯುಕ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.


ಈ ಭಾಷೆಯ ಪ್ರಯೋಗವು ಕ್ರೀಡಾ ಚಾನೆಲ್ ಸಮಾಚಾರ ಮಾಧ್ಯಮಗಳಲ್ಲಿ ಮಹತ್ತರವಾದ ಸ್ಥಾನ ಪಡೆದಿದೆ. ಅದನ್ನು ಸರಿಯಾದ ರೀತಿಯಲ್ಲಿ ಕಲಿತು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ. ಅವರು ಹಿಂದಿ ಭಾಷೆಯು ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಒಂದು ಸಂಪದ್ಭರಿತವಾದ ಭಾಷೆಯಾಗಿದೆ. ಅದನ್ನು ನಮ್ಮ ವ್ಯವಹಾರದಲ್ಲಿ ಅಳವಡಿಸುವ ಮೂಲಕ  ಉಳಿಸಿ, ಬೆಳೆಸಿ, ಗೌರವಿಸುವ ಅಗತ್ಯವಿದೆ ಎಂದರು.


ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಜಾತ ಜಿ. ನಾಯಕ್ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ವಾಚಿಸಿದರು. ಬ್ಯಾಂಕ್ ಆಫ್ ಬರೋಡಾದ ವತಿಯಿಂದ ಪ್ರಮಾಣ ಪತ್ರದ ಜೊತೆಗೆ ಬಹುಮಾನವನ್ನು ವಿತರಿಸಲಾಯಿತು. 


ಶ್ರೇಯಾ, ಶ್ವೇತಾ ಹಾಗೂ ಹರ್ಷಿತರವರು ಸಂತ ಕಬೀರ ದಾಸರ ದ್ವಿಪದಿಗಳನ್ನು ಹಾಡಿ ಕಾರ್ಯಕ್ರಮವನ್ನು ಚಂದಗಾಣಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಐಸಿರಿ ಅವರು ಹಿಂದಿ ವಿಭಾಗದ ಮುಖ್ಯಸ್ಥರಿಂದ ರಚಿಸಲಾದ ಕವಿತೆಯನ್ನು ವಾಚಿಸಿದರು.


ವಿದ್ಯಾರ್ಥಿಗಳಾದ ನಿಧಿ ಶೆಣೈ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ವೇತಾ ನಾಯಕ್ ಮತ್ತು ಬಳಗ ಪ್ರಾರ್ಥಿಸಿದರು. ಕುಮಾರಿ ರಿತು ರಾಜ್ ಪುರೋಹಿತ ಅವರು ವಂದಿಸಿ, ಕುಮಾರಿ ನಂದಿನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


ಆಂಗ್ಲ ಭಾಷೆಯ ಉಪನ್ಯಾಸಕಿ ಶ್ರೀಮತಿ ಕೀರ್ತನ ಭಟ್, ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಚೇತನ ಅವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top