ಬೀದರ್: ಬೀದರ್ ನ ಸರಕಾರೀ ನೌಕರರ ಸಮುದಾಯ ಸಭಾ ಭವನದಲ್ಲಿ ದ್ವಿತೀಯ ರಾಜ್ಯ ಗಜಲ್ ಸಮ್ಮೇಳನವು ಸೆ.7ರಂದು ನಡೆಯಲಿದೆ.
ಖ್ಯಾತ ಗಜಲ್ ಕವಿ ಡಾ. ಕಾಶೀನಾಥ ಅಂಬಲಗೆಯವರ ಅಧ್ಯಕ್ಷತೆಯಲ್ಲಿ, ಸಭಾಪತಿ ಯ ಟಿ ಖಾದರ್ ಉಪಸ್ಥಿತಿಯಲ್ಲಿ ಹಾಗೂ ರಾಜ್ಯದ ಮೂಲೆ ಮೂಲೆಯ ಗಜಲ್ ಕವಿಗಳ ಈ ಸಮಾವೇಶದಲ್ಲಿ ಮಂಗಳೂರಿನ ಗಜಲ್ ಕವಿ ಹಾಗೂ ಕಣಚೂರು ಆಸ್ಪತ್ರೆಯ ವೈದ್ಯ ಡಾ ಸುರೇಶ ನೆಗಳಗುಳಿಯವರು ಪ್ರತಿನಿಧಿಸಲಿದ್ದು ಅದೇ ವೇಳೆ ಗಜಲ್ ಪ್ರಸ್ತುತ ಪಡಿಸಲಿರುವರು.
ಅವರ ಐದನೇ ಗಜಲ್ ಕೃತಿ ಕುವಲಯವು ಇದೇ ವೇಳೆ ಲೋಕಾರ್ಪಣೆಯಾಗಲಿದೆ. ಮಹಮ್ಮದ್ ಬಡ್ಡೂರ್ ಮುನ್ನುಡಿ ಸಿದ್ಧರಾಮ ಹೊನಕಲ್ ಬೆನ್ನುಡಿ, ಹಾ.ಮ ಸತೀಶ ಹಾಗೂ ರತ್ನ ಕೆ ಭಟ್ ಆಶಯ ನುಡಿ ಬರೆದಿದ್ದಾರೆ.
ಈ ಸಂಕಲನವು ಗಜಲ್ ಸ್ವರೂಪ ಪರಿಚಯ, ಹಾಗೂ ಕನ್ನಡ, ತುಳು, ಹಿಂದಿ, ಹವ್ಯಕ, ಇಂಗ್ಲಿಷ್ ಮತ್ತು ಮಲೆಯಾಳದ ಗಜಲ್‌ಗಳನ್ನು ಒಳಗೊಂಡಿದೆ. ಅಲ್ಲದೆ ಗಜಲ್ ನ ಪ್ರಬೇಧಗಳಾದ ಗೈರ್ ಮುರದ್ದಫ್, ಚೋಟಿ ಬೆಹರ್, ಜುಲ್ ಕಾಫಿಯಾ ಮುಂತಾದ ಪ್ರಕಾರಗಳ ಗಜಲ್ ಸಹ ಒಳಗೊಂಡಿದೆ. ಮಹೀಪಾಲ ರೆಡ್ಡಿ ಮುಂತಾದವರು ಸಾರಥ್ಯ ವಹಿಸಲಿರುವರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ