ಮಂಗಳೂರು: ಮುಂಬೈ ಕುಲಾಲ ಸಂಘದ ಮಂಗಳೂರಿನ ಮಂಗಳಾ ದೇವಿ ಬಳಿ ನಿರ್ಮಿಸಿದ ಕುಲಾಲ ಭವನದ ಉದ್ಘಾಟನೆಗೆ ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಆಹ್ವಾನಿಸಿ ಕರ್ನಾಟಕದ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕುಲಾಲ ಸಂಘ ಮುಂಬೈಯ ಗೌರವ ಅಧ್ಯಕ್ಷರು ದೇವದಾಸ್ ಎಲ್ ಕುಲಾಲ್, ಕಟ್ಟಡ ನಿರ್ಮಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಸುನಿಲ್ ಆರ್ ಸಾಲಿಯಾನ್, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ಮುಂಬೈ ಸಂಘದ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ವಿಶ್ವನಾಥ ಬಂಗೇರ, ಮುಂಬೈ ಸಂಘದ ಉಪಾಧ್ಯಕ್ಷ ಡಿ.ಐ ಮೂಲ್ಯ, ದೇವಕಿ ಸುನಿಲ್ ಸಾಲಿಯಾನ್, ಭಾಸ್ಕರ ಕುತ್ತಾರ್, ಸುರೇಶ್ ಕುಲಾಲ್, ದೇವಪ್ಪ ಪಂಜಿಕಲ್ಲು, ಸದಾಶಿವ ಅತ್ತಾವರ, ನಾರಾಯಣ ಪೆರ್ನೆ, ಹರಿಯಪ್ಪ ಮೂಲ್ಯ ಮುಂಬಯಿ, ಭಾಸ್ಕರ ಕೊಲ್ನಾಡ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಲಾಲ್, ಬುಡಾ ಸದಸ್ಯ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ