ಹಾಸನದಲ್ಲಿ ಸಾಹಿತ್ಯ ಸಡಗರ
ಹಾಸನ: ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ (ಆ.31) ಸಾಹಿತ್ಯ–ಸಾಂಸ್ಕೃತಿಕ ಸಡಗರ ನೆರವೇರಿತು. ಕಾರ್ಯಕ್ರಮದಲ್ಲಿ ಧೀಮಂತ ನಾಯಕ ಎಚ್. ಜ್ವಾಲನಯ್ಯ ಅವರ ಸ್ಮರಣಾರ್ಥ ಕೃತಿ ಬಿಡುಗಡೆ, ಕಾವ್ಯಗಾನ, ಕಲಾ ಕುಂಚ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿದ್ದು, ಸಾಧಕರಿಗೆ ರಾಜ್ಯಮಟ್ಟದ ಸನ್ಮಾನ ಕಾರ್ಯಕ್ರಮವೂ ನಡೆದವು.
ಇದೇ ಸಂದರ್ಭದಲ್ಲಿ ಸಕಲೇಶಪುರದ ಖ್ಯಾತ ಬರಹಗಾರ ವಿಶ್ವಾಸ್.ಡಿ.ಗೌಡರ ಆರನೇ ಕೃತಿ ಭಾವನೆಗಳ ಪ್ರತಿರೂಪವನ್ನು ಬಿಡುಗಡೆ ಮಾಡಲಾಯಿತು. ಕತ್ತರಿ ಘಟ್ಟ, ಹರಿಸೇವಾ, ನೆನಪುಗಳ ಖಾತೆ, ಬಾಳೊಂದು ಚೈತ್ರಾಮಯ, ಚೈತ್ರದ ಚೈತನ್ಯ, ಚಿಂತನ ಚೈತ್ರ ಕೃತಿಗಳ ಮೂಲಕ ಹೆಸರು ಗಳಿಸಿರುವ ಇವರು, ಪತ್ರಿಕಾ ಅಂಕಣ ಬರಹಗಳ ಮೂಲಕವೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅನೇಕ ವಿಮರ್ಶಾ ಕೃತಿಗಳು ಮುದ್ರಣ ಹಂತದಲ್ಲಿವೆ.
ಡಿಆರ್‌ಓ ಬೆಂಗಳೂರು ಸಂಸ್ಥೆಯ ಹಿರಿಯ ವಿಜ್ಞಾನಿ ಸ್ವಾಮಿ ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕಾರ್ಯಕ್ರಮ ನಿರ್ವಾಹಕ (ಆಕಾಶವಾಣಿ) ಡಾ. ವಿಜಯ್ ಅಂಗಡಿ ಅವರ ಗೌರವ ಉಪಸ್ಥಿತರಿದ್ದರು. ಉದಯವರದಿ ಪತ್ರಿಕೆಯ ಸಂಪಾದಕ ವೆಂಕಟೇಶ ರವರು ಕವನ ಸಂಕಲನವನ್ನು ಬಿಡುಗಡೆ ಮಾಡಿದರು ಎಂದು ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್.ಡಿ. ಉಡುವಾರೆ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ