ಮಂಗಳೂರು ದಸರಾದಲ್ಲಿ ಮುದ್ದು ಶಾರದೆ ಕಲರವ

Upayuktha
0


ಮಂಗಳೂರು: ಶೃಂಗೇರಿ ಶಾರದಾ ಪೀಠದ ವೈಭವ, ವೀಣೆಯ ನುಡಿಸುತ್ತಾ ಮುಗುಳ್ನಗುವ ಕಂದಮ್ಮಗಳು, ಕೈಯೊಳು ತಾವರೆ, ಪುಸ್ತಿಕೆಗಳಿಂದ ಶೋಭಿಸುವ ವಿದ್ಯಾಧಿದೇವತೆ. ಈ ಮಧ್ಯೆ ನವರೂಪಗಳಲ್ಲಿ ಶೋಭಿಸುವ ನವದುರ್ಗೆಯರು. 


ಇದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದಲ್ಲಿ ಬುಧವಾರ ನಡೆದ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆಯ ಝಲಕ್.


ಪಿ.ಕೆ. ಲೋಹಿತ್ ಸ್ಮರಣಾರ್ಥ ಪಿ.ಕೆ ದೂಜ ಪೂಜಾರಿ ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಆಭರಣ ಜುವೆಲರ್ಸ್ ಮತ್ತು ಅದಿರಾ ಪ್ರಾಪರ್ಟಿಸ್ ಸಹಕಾರದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಮಂದಿ ಪುಟಾಣಿಗಳು ಮುದ್ದು ಶಾರದೆ, ನವದುರ್ಗೆಯರಾಗಿ ಶೋಭಿಸಿದರು.


ಉದ್ಘಾಟನೆ: ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಟ್ರಸ್ಟಿ ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯ ವಾಸುದೇವ ಕೋಟ್ಯಾನ್ , ಪಿ.ಕೆ. ಪೂಜಾರಿ ಗ್ರೂಪ್‌ನ ಪಿ.ಕೆ ಸತೀಶ್ ಪೂಜಾರಿ, ಗೌರವಿ ರಾಜಶೇಖರ್, ಪಿ.ಕೆ.ಸ್ಮರಣ್ ಪೂಜಾರಿ, ಪ್ರಣವಿ ಪೂಜಾರಿ, ಆಭರಣ ಜ್ಯುವೆಲ್ಲರ್ಸ್‌ನ ಮಂಗಳೂರು ವಿಭಾಗದ ಮ್ಯಾನೇಜರ್  ಲಕ್ಷ್ಮೀನಾರಾಯಣ ಶೆಣೈ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಲೋಕೇಶ್ ಕೋಟ್ಯಾನ್ ಕೂಳೂರು ಮೊದಲಾದವರಿದ್ದರು.


ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಆಭರಣ ಜ್ಯುವೆಲ್ಲರ್ಸ್‌ನ ಮಂಗಳೂರು ವಿಭಾಗದ ಮ್ಯಾನೇಜರ್  ಲಕ್ಷ್ಮೀನಾರಾಯಣ ಶೆಣೈ, ಅದಿರಾ ಪ್ರಾಪರ್ಟಿಸ್ ಮುಖ್ಯಸ್ಥರಾದ ಜಗದೀಶ್ ಅರೆಬನ್ನಿ ಮಂಗಳ, ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಗೌರವಿ ರಾಜಶೇಖರ್, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ಉಪಸ್ಥಿತರಿದ್ದರು.


ಚಂದ್ರಹಾಸ ಬಳಂಜ, ವಿಜಯ್ ಕೋಟ್ಯಾನ್ ಪಡು, ಕೀರ್ತನಾ ಸನಿಲ್, ಕೀರ್ತಿರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು.


ಮುದ್ದು ಶಾರದೆ-ನವದುರ್ಗೆ ವಿಜೇತರು

6 ರಿಂದ 10 ವರ್ಷದೊಳಗಿನ ಮುದ್ದು ಶಾರದೆ ವಿಭಾಗ: ಶಿವಿಕಾ ಡಿಂಪಲ್ (ಪ್ರಥಮ), ಆದ್ಯಾ ವಿ. ಕೋಟ್ಯಾನ್ (ದ್ವಿತೀಯ), ಅನೈರಾ ಎ. ಶೆಟ್ಟಿ, ಶಾನ್ಯ ಗಂಗೊಳ್ಳಿ, ಅದ್ವಿತಿ ಎ. ಪೂಜಾರಿ, ಆನ್ವಿ ಎ., ರೋಷಿನಿ ಡಿ.ಕೆ (ಆಕರ್ಷಕ ಬಹುಮಾನ)


ನವದುರ್ಗೆಯರು: ಶಾನ್ಯ ಬಿ. ಸುವರ್ಣ (ಪ್ರಥಮ), ಋಥ್ವಾ ಎಚ್.ಪಿ (ದ್ವಿತೀಯ), ಕಾಶ್ವಿ, ಚಾರ್ವಿ ಕುಕ್ಯಾನ್, ದಿಯಾ ಡಿ, ಪ್ರಾಂಜಲಿ, ಶಿಪ್ರಾ ಪಿ. ಶೆಟ್ಟಿ (ಆಕರ್ಷಕ ಬಹುಮಾನ) ಮುದ್ದು ಶಾರದೆ 3-6 ವರ್ಷ ವಿಭಾಗ: ಶ್ರೀಯಾ ಕೆ. ಕಾಂಚನ್ (ಪ್ರಥಮ), ನಕ್ಷತ್ರ ಎಸ್. ಆಚಾರ್ಯ (ದ್ವಿತೀಯ), ವೈ ಆರಾಧ್ಯಾ ಭಟ್, ಶೈವಿ ಸಾಲ್ಯಾನ್, ಓಜಸ್ವಿ, ಜಾನ್ವಿ ಆರ್., ಮನಸ್ವಿ ಡಿ ಪೂಜಾರಿ (ಆಕರ್ಷಕ ಬಹುಮಾನ) ಪಡೆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top