ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಆಶ್ರಯದಲ್ಲಿ ಅ. 19 ರಂದು ಭಾನುವಾರ ಸಂಜೆ ಐದು ಗಂಟೆಯಿಂದ ಉಜಿರೆ ಕಾಶಿಬೆಟ್ಟು ಬಳಿ ಇರುವ ಅರಳಿ ರೋಟರಿ ಸಮುದಾಯ ಭವನದಲ್ಲಿ ಅಡುಗೆ ಮಾಡುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪ್ರಕಾಶ್ ಪ್ರಭು ಪಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
18 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಗಂಡಸರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಮೂರು ಸಿಮೆಂಟ್ ಬ್ಲಾಕ್‌ಗಳನ್ನು ಇಟ್ಟಿಗೆ ಒಲೆ, ಕಟ್ಟಿಗೆ, ನೀರು ಮತ್ತು ಮೇಜು ಒದಗಿಸಲಾಗುವುದು.
ನಗದು ಬಹುಮಾನ: ಪ್ರಥಮ ಬಹುಮಾನ: ರೂ. 2000/-, ದ್ವಿತೀಯ ಬಹುಮಾನ: ರೂ. 1000/-, ತೃತೀಯ ಬಹುಮಾನ: ರೂ. 500/-. ಬಹುಮಾನ ವಿತರಣೆ ಬಳಿಕ ಭೋಜನ ವ್ಯವಸ್ಥೆ ಇದೆ.
ಆಸಕ್ತರು ಹೆಸರು ಮತ್ತು ವಿಳಾಸದೊಂದಿಗೆ ವಾಟ್ಸಾಪ್ ಮೂಲಕ ಅ. 17 (ಶುಕ್ರವಾರ) ಮೊದಲು ಸ್ಪರ್ಧೆಗೆ ನೋಂದಾಯಿಸಲು ಕೋರಲಾಗಿದೆ.
ಮೊಬೈಲ್ ನಂಬರ್: 9448060206 / 9481844287.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ