ಕಾಸರಗೋಡು: ನವರಾತ್ರಿ ಮಹೋತ್ಸವದ ಪ್ರಯುಕ್ತ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ವತಿಯಿಂದ 9 ಸುಪ್ರಸಿದ್ದ ಶ್ರೀ ದೇವೀ ದೇವಸ್ಥಾನಗಳಲ್ಲಿ ವೈವಿಧ್ಯಮಯ ನಿತ್ಯ ನೂತನ ಅತ್ಯಾಕರ್ಷಕ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಜರಗಲಿರುವುದು.
26 ಸೆಪ್ಟೆಂಬರ್ ಪಿಲಿಕುಂಜೆ ಶ್ರೀ ಜಗದಂಬಾ ದೇವೀ ಕ್ಷೇತ್ರದಲ್ಲಿ ರಾತ್ರಿ 9.30 ಘಂಟೆಗೆ, ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ 27 ಸೆಪ್ಟೆಂಬರ್ 2025 ರಂದು ಮಧ್ಯಾಹ್ನ 12 ಘಂಟೆಗೆ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ರಾತ್ರಿ 8 ಘಂಟೆಗೆ, ತಾಯತೊಟ್ಟಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 28 ಸೆಪ್ಟೆಂಬರ್ 2025 ರಂದು ಮಧ್ಯಾಹ್ನ 12.30 ಘಂಟೆಗೆ, ಚಟ್ಟಂಚಾಲ್ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ O1 ಅಕ್ಟೋಬರ್ ಮಧ್ಯಾಹ್ನ 1 ಘಂಟೆಗೆ, ಗೋಸಾಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ 01 ಅಕ್ಟೋಬರ್ 2025 ರಂದು ರಾತ್ರಿ 8 ಘಂಟೆಗೆ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.)ಕಾಸರಗೋಡು ಸಹಯೋಗದಲ್ಲಿ, ಶಿವಮಣಿ ಕಲಾಸಂಘ ಪುತ್ತೂರು ನೇತೃತ್ವದಲ್ಲಿ ಪುತ್ತೂರು ಕಲ್ಲೇಗ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ 24 ಸೆಪ್ಟೆಂಬರ್ 2025 ರಂದು ಸಂಜೆ 7 ಘಂಟೆಗೆ, ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ 25 ಸೆಪ್ಟೆಂಬರ್ 2025 ರಂದು ಸಂಜೆ 7 ಘಂಟೆಗೆ, ಕಬಕ ಅರ್ಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ 28 ಸೆಪ್ಟೆಂಬರ್ 2025 ರಂದು ಸಂಜೆ 7 ಘಂಟೆಗೆ ವೈವಿಧ್ಯಮಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







