ಕಾಸರಗೋಡು: ಪುತ್ತೂರು ಕಲ್ಲೇಗ ಶ್ರೀ ಕಲ್ಕುಡ ಕಲ್ಲುರುಟಿ ದೈವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಸಹಯೋಗದಲ್ಲಿ ಹಾಗೂ ಮನು ಕುಮಾರ್ ಪುತ್ತೂರು ಅವರ ಶಿವಮಣಿ ಕಲಾಸಂಘ ನೇತೃತ್ವದಲ್ಲಿ 120 ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಕಲಾವಿದರಾದ ಮಧುಲತಾ ಪುತ್ತೂರು, ಜಯಶ್ರೀ ಪುತ್ತೂರು, ಪೃಥ್ವಿಕಾ, ಋತ್ವಿಕಾ, ಲಿಖಿತಾ, ಗ್ರೀಷ್ಮ, ನಿಹಾರಿಕಾ, ಲೇಖನ್, ನಂದನ್, ತೀರ್ಥನ್, ಕೃತ್ವಿಕ್, ಬಿಂದು, ದಿಶಾ, ಪ್ರಣಮ್ಯ, ಸಾನಿದ್ಯ, ವರ್ಷ ಷಷ್ಠಿ, ಅಚ್ಯುತ ಭಟ್ ಮುಂತಾದ ಕಲಾವಿದರು ಭಾಗವಹಿಸಿ ತಮ್ಮ ಕಲಾಪ್ರದರ್ಶನ ಮೆರೆದರು. ಕಾರ್ಯಕ್ರಮದ ಕೊನೆಯಲ್ಲಿ ದೇವರ ಪ್ರಸಾದ ಕೊಟ್ಟು ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ