ಉಜಿರೆ: ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಪೀಳಿಗೆ ಹಾಗೂ ಮುಂದಿನ ನಾಯಕರು, ವಿಜ್ಞಾನಿಗಳು, ಮತ್ತು ಸಮಾಜ ಪರಿವರ್ತಕರು. ಆದರಿಂದ ಶಾಂತಿ ನಮ್ಮಿಂದಲೇ ಆರಂಭವಾಗಬೇಕು. ನಾವು ಪರಸ್ಪರ ಮಾತನಾಡುವ ರೀತಿ, ನಾವು ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ವಿಧಾನ ಇವೆಲ್ಲವೂ ಶಾಂತಿಗೆ ವೇದಿಕೆ ನೀಡುತ್ತದೆ. ಎಂದು ಉಜಿರೆಯ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ. ಧ. ಮಂ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗವು ಆಯೋಜಿಸಿದ ಅಂತರಾಷ್ಟ್ರೀಯ ಶಾಂತಿ ದಿನ ಕಾರ್ಯಕ್ರಮ ಸೆಪ್ಟೆಂಬರ್ 23 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಶಾಂತಿಯನ್ನು ಉತ್ತೇಜಿಸಲು ಏನು ಮಾಡಬಹುದೆಂದರೆ: ನಾವು ಮಾಡುವ ಚಿಕ್ಕ ಕೆಲಸಗಳು ಕೂಡ ಮುಂದೆ ದೊಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಕರಾತ್ಮಕತೆ ಹರಡುವುದನ್ನು ತಪ್ಪಿಸುವುದು ಮುಖ್ಯವಾಗಿದೆ. ಹಾಗೂ ಶಾಂತಿ ಪೂರ್ಣ ಮಾತುಗಳು ಮತ್ತು ಕ್ರಿಯೆಗಳನ್ನು ನಮ್ಮ ವಯಕ್ತಿಕ ಜೀವನ ಹಾಗೂ ಕಾಲೇಜು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಹಾಗೆಯೇ "ನಮ್ಮ ಯಶಸ್ಸು ಜೀವನದ ಶಾಂತಿ" ಎಂದು ತಿಳಿಸಿದರು.
ವಿಭಾಗದ ಮುಖ್ಯಸ್ಥ ನಟರಾಜ್ ಎಚ್. ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇವತ್ತು ಯುವಕರು ಯಾಕೆ ತೊಂದರೆಗೊಳಾಗುತ್ತಾರೆ ಎಂದರೆ ಇಡೀ ಪ್ರಪಂಚದಲ್ಲಿ ನೋಡುವುದಾದರೆ ಯುವಕರು ತೊಂದರೆಗೆ ಸಿಲುಕಿದಾಗಲೇ ಅಲ್ಲಿ ಶಾಂತಿ ಕದಡುತ್ತಾ ಬರುತ್ತದೆ. ಕಾರಣ ಯುದ್ಧಗಳು ಹಾಗೂ ಯುದ್ಧಗಳಿಂದ ಬಲಿಯಾದಂತಹ ವ್ಯಕ್ತಿಗಳು.
ಹಾಗೆಯೇ ಬದುಕನ್ನು ಕಟ್ಟಿಕೊಂಡವನಿಗೆ ಶಾಂತಿಯನ್ನು ಹಾಳು ಮಾಡಿಕೊಳ್ಳುವಂತಹ ದಾರಿಗಳು ಸಿಗುವುದಿಲ್ಲ. ಇಂದು ಸಾಮಾಜಿಕ ಮಾಧ್ಯಮಗಳು ಯುವಕರನ್ನು ದಾರಿ ತಪ್ಪಿಸುವಂತೆ ಮಾಡುತ್ತಿದೆ. ಹಾಗೂ ಪ್ರತಿ ಹಂತದಲ್ಲಿಯೂ ಕೂಡ ಶಾಂತಿಯನ್ನು ಪ್ರಚೋದಿಸುತ್ತಾ ಪ್ರತಿಪಾದಿಸುತ್ತಾ ಬಂದಿರುವ ದೇಶ ನಮ್ಮದು. ಇವತ್ತು ನಾವು ಭಾರತವನ್ನು ತಿರುಗಿ ನೋಡುವ ಪರಿಸ್ಥಿತಿಗೆ ಬೆಳಿತಾ ಇದ್ದೇವೆ . ಹಾಗೂ ವಿಶ್ವಗುರುವಾಗಿ ಬದಲಾಗುತ್ತಿದೆ ನಮ್ಮ ದೇಶ. ನಮ್ಮೆಲ್ಲಾರ ಉದ್ದೇಶ ಶಾಂತಿ ಸ್ಥಾಪನೆಗೋಸ್ಕರವಾಗಿದೆ . ಹಾಗೂ ಈ ದೇಶಕ್ಕೆ, ಮಣ್ಣಿಗೆ ಹಾಗೂ ಮಕ್ಕಳಿಗೆ ಶಾಂತಿ ಸ್ಥಾಪನೆಯ ಭಾಷಣ ಅವಶ್ಯಕತೆ ಇಲ್ಲ ಯಾಕೆಂದರೆ ಅದು ನಮ್ಮ ರಕ್ತದಲ್ಲೇ ಇದೆ ಎಂದು ತಿಳಿಸಿದರು. ಹಾಗೆ ರಾಜಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಕಲಿಸಿಕೊಡುತ್ತದೆ, ಶಾಂತಿ ದಿನ, ಹಾಗೂ ಕಾರ್ಗಿಲ್ ದಿನವನ್ನು ಕೂಡ ಆಚರಿಸುತ್ತಾ ಬಂದಿದೆ.. ಇದರ ಉದ್ದೇಶ ವಿದ್ಯಾರ್ಥಿಗಳಿಗೆ ದೇಶದ ತ್ಯಾಗ ಹಾಗೂ ಬಲಿದಾನದ ಬಗ್ಗೆ ತೋರಿಸುವ ಉದ್ದೇಶವಾಗಿದೆ. ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಂತಿ ದಿನದ ಪ್ರಮಾಣವಚನವನ್ನು ವಿದ್ಯಾರ್ಥಿಗಳು ಹಾಗೂ ವಿಭಾಗದ ಪ್ರಾಧ್ಯಾಪಕರು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಭಾಗ್ಯಶ್ರೀ ಉಪಸ್ಥಿತರಿದ್ದರು.
ವಿಭಾಗದ ವಿದ್ಯಾರ್ಥಿಗಳಾದ ಮಾನವ ನಿರೂಪಿಸಿದರು, ಶ್ರೇಯಂಕ್ ಸ್ವಾಗತಿಸಿದರು, ಪದ್ಮಶ್ರೀ ಅತಿಥಿಯನ್ನು ಪರಿಚಯಿಸಿದರು, ಹಾಗೂ ವಿಭಾಗದ ಪ್ರಾಧ್ಯಾಪಕ ಡಾ. ಶಿವಕುಮಾರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ