ಮನುಕುಲದ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯಗಳು ಪೂರಕ: ಡಾ. ಸತೀಶ್ಚಂದ್ರ ಎಸ್.

Upayuktha
0


ಉಜಿರೆ: ಸಾಹಿತ್ಯಗಳಲ್ಲಿ ಬರುವ ವಿಷಯಗಳು ಜನರ ಮತ್ತು ಸಮಾಜದ ಉನ್ನತಿಗೆ ಕಾರಣವಾಗಿವೆ. ತತ್ವಪದಗಳು ನೈತಿಕ ಮೌಲ್ಯಗಳನ್ನು ಒಳಗೊಂಡಿವೆ. ಮಾನವನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಾಹಿತ್ಯಗಳನ್ನು ತಿಳಿಯಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಹೇಳಿದರು.


ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಕನ್ನಡ ವಿಭಾಗ ಹಾಗೂ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ತತ್ವಪದಗಳು - ಸಾಂಸ್ಕೃತಿಕ ಅನುಸಂಧಾನ, ಸೆ.19 ಮತ್ತು 20 ರಂದು ನಡೆಯಲಿರುವ ಎರಡು ದಿನಗಳ ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾದಿದರು.


ನಮ್ಮ ದೇಶದಲ್ಲಿ ಖನಿಜಗಳ ನಿಕ್ಷೇಪಗಳು ಹೇಗೆ ಅಡಗಿದೆಯೋ ಹಾಗೆ ಸಾಹಿತ್ಯ - ಸಂಸ್ಕೃತಿಗಳಲ್ಲಿ ಹಲವಾರು ನಿಕ್ಷೇಪಗಳು ಅಡಗಿದೆ. ನಮ್ಮ ದೇಶದ ಒಂದು ಆಸ್ತಿಯೆಂದರೆ ಅದು ಸಾಂಸ್ಕೃತಿಕತೆ. ಅದರಲ್ಲಿ ಪ್ರಚಲಿತ ವಿಚಾರಗಳು ಬಹಳಷ್ಟು ಕಾಣಸಿಗುತ್ತದೆ. ಅವುಗಳನ್ನು ಅರಿತು ಮೌಲ್ಯಾಧಾರಿತ ಮಾನವರಾಗಿ ಬೆಳೆಯಬೇಕು ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ' ಹಿಂದಿನ ಚರಿತ್ರೆಯನ್ನು ನಾವು ನೋಡಿದರೆ ಸಮಾಜದಲ್ಲಿ ಹಲವಾರು ಬೇಧಭಾವ ಹಾಗೂ ಸಂಕುಚಿತ ಮನೋಭಾವನೆ ನಮ್ಮಲ್ಲಿತ್ತು. ಆ ಸಮಾಜದಲ್ಲಿ ಸಮಾನತೆಯನ್ನು ತರಲು ತತ್ವಪದಗಳು, ದಾಸಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳು ಕಾರಣವಾದವು. ತತ್ವಪದಗಳ ಸಾರವನ್ನು ವಿದ್ಯಾರ್ಥಿಗಳು ತಿಳಿದು ಸಮಾಜದಲ್ಲಿ ಒಳ್ಳೆಯ ವಾಗ್ಮಿಗಳಾಗಲಿ,'ಎಂದರು.


ಕನ್ನಡ ವಿಭಾಗದ ಭಿತ್ತಿಪತ್ರಿಕೆ  ' ಸಿರಿಗನ್ನಡ ' ದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇದರ ಅಧಿಕಾರಿ ಎಸ್. ಸತ್ಯನಾರಾಯಣ, ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕರಾದ ಪ್ರೊ. ಎಸ್.ಎನ್. ಕಾಕತ್ಕರ್ ಹಾಗೂ ಹಲವು ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್. ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕರಾದ ಡಾ.ನಾಗಣ್ಣ ಡಿ. ಎ. ವಂದಿಸಿದರು.

ಕನ್ನಡ ಪ್ರಾಧ್ಯಾಪಕರಾದ ಭವ್ಯಶ್ರೀ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top