ಜ್ಞಾನದ ಜೊತೆ ಕೃತಕ ಬುದ್ಧಿಮತ್ತೆ ಹೊಂದಾಣಿಕೆಯಾದರೆ ಎಲ್ಲವನ್ನೂ ಸಾಧಿಸಲು ಸಾಧ್ಯ : ಡಾ.ಕೀರ್ತಿರಾಜ್

Upayuktha
0

 


ಉಜಿರೆ: ಕೃತಕ ಬುದ್ದಿಮತ್ತೆ, ಸಾರ್ವಭೌಮತ್ವ ಮತ್ತು ಜ್ಞಾನದ ರಾಜಕೀಯ ಹೇಗೆ ಇಂದಿನ ಪೀಳಿಗೆಗೆ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ರಾಜಕೀಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಕೀರ್ತಿರಾಜ್ ಇದರ ಬಗ್ಗೆ ಮಾಹಿತಿ ನೀಡಿದರು.


ಉಜಿರೆಯ ಶ್ರೀ. ಧ. ಮಂ. ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದಿಂದ ಆಯೋಜಿಸಲಾದ ಕಾರ್ಯಕ್ರಮವು ಸೆಪ್ಟೆಂಬರ್ 10 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.


ಇಂದಿನ ಪೀಳಿಗೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಆಧುನಿಕ ಯುಗದಲ್ಲಿ ರಾಜಕೀಯದ ಜ್ಞಾನವು ಬಹಳ ಸುಲಭವಾಗಿ ದೊರಕುತಿದೆ. ಹಾಗೆಯೇ ತಾಂತ್ರಿಕವಾಗಿ ಎಷ್ಟೇ ಮುಂದುವರಿದರು ಜನರ ಜ್ಞಾನದ ಜೊತೆಗೆ ಕೃತಕ ಬುದ್ಧಿಮತ್ತೆಯ ಹೊಂದಾಣಿಕೆಯಾದರೆ ಎಲ್ಲವನ್ನು ಸಾಧಿಸಲು ಸಾಧ್ಯ. ಮತ್ತು ಗೂಗಲ್, ವಾಟ್ಸ್ಆಪ್ , ಚಾಟ್ ಚೀಪಿಟಿ, ಇವುಗಳ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಸಿದರು. 


ರಾಜಕೀಯದಲ್ಲಿ ಸಾರ್ವಭೌಮತೆಯನ್ನು ಕೃತಕ ಬುದ್ಧಿಮತೆಯಿಂದ ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದರ ಬಗ್ಗೆ ಬಹಳ ಸ್ವ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. 


ಈ ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕಿ ಭಾಗ್ಯಶ್ರೀ ಹಾಗೂ ಡಾ. ಶಿವಕುಮಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ತೃತೀಯ ವಿಭಾಗದ ವಿದ್ಯಾರ್ಥಿಗಳಾದ ಮಾನವ ಸ್ವಾಗತಿಸಿದರು, ಹಾಗೂ ಸೂರ್ಯ ವಂದಿಸಿದರು, ಮಾನ್ಯ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top