ದಸರಾ ಹಬ್ಬವನ್ನು ನಮ್ಮ ನಾಡ ಹಬ್ಬ ಎಂದು ಕರೆಯುತ್ತೇವೆ. ದಸರಾ ಹಬ್ಬವನ್ನು ವಿಜಯನಗರ ಸಂಸ್ಥಾನ 14-15 ನೇ ಶತಮಾನದಲ್ಲಿ ಆಚರಿಸುತ್ತಿತ್ತು. ವಿಜಯನಗರ ಪತನದ ನಂತರ ಮೈಸೂರ್ ಒಡೆಯರ್ ಆಚರಿಸಲು ಪ್ರಾರಂಭಿಸಿದರು. ಹೀಗೆ ಇಲ್ಲಿಯ ವರೆಗೆ ಒಡೆಯರ್ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ. ಮೈಸೂರು ದಸರಾ ಅದ್ಭುತವಾಗಿದ್ದು ನೋಡುಗರ ಕಣ್ಣಿಗೆ ಆಕರ್ಷಣೀಯವಾಗಿದೆ.
ದಸರಾ ಹಬ್ಬಕ್ಕೆ ಕೆಟ್ಟದರ ಮೇಲೆ ಒಳ್ಳೆಯ ವಿಜಯದ ದಿನ ಎಂದು ಆಚರಿಸುತ್ತಾರೆ. ದೇವಿಯು ಮಹಿಷನನ್ನು ಸಂಹರಿಸಿದ ದಿನವಾಗಿ ಮತ್ತು ರಾಮ ರಾವಣನ ಸಂಹರಿಸಿದ ದಿನ ವಿಜಯದಶಮಿ ಎಂದು ಆಚರಿಸುತ್ತಾರೆ. ದಸರಾ ಎಂದರೆ ಎಲ್ಲರಿಗೂ ಸಂಭ್ರಮದ ದಿನ. ನವರಾತ್ರಿ ದಿನದಂದು ನಾವು 9 ದಿನಗಳ ಕಾಲ ಒಂದೊಂದು ದಿನ ಒಂದೊಂದು ದೇವಿಯನ್ನು ಪೂಜಿಸಲಾಗುವುದು.
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಮತ್ತು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುವುದು. ಶ್ರದ್ಧ ಭಕ್ತಿಯಿಂದ ವಿಜೃಂಭಣೆಯಿಂದ ಆರಾದಿಸಲಾಗುತ್ತದೆ.
ಮೈಸೂರಿನ ದಸರಾ ಬಹಳ ವಿಜೃಂಭಣೆಯಾಗಿದೆ. ಕೊನೆಯ ದಿನ ಆನೆಯ ಮೇಲೆ ಅಂಬಾರಿಯನ್ನು ಕೂರಿಸಿ ಚಾಮುಂಡೇಶ್ವರಿಯ ದರುಶನವನ್ನು ಮಾಡಿಸಿ ಮೆರವಣಿಗೆ ಮಾಡುತ್ತಾರೆ. ಈ ಸಂಭ್ರಮವನ್ನು ಸವಿಯಲು ಅನೇಕ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಮೈಸೂರಿನ ದಸರಾದಲ್ಲಿ ನಡೆಯುವಂತಹ ಜಂಬುಸವಾರಿ ಉತ್ಸವವು ಎಲ್ಲರ ಮನಸೆಳೆಯುವಂತದು. ಹಾಗೆ ಅರಮನೆಯನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕಾರಿಸುತ್ತಾರೆ. ನೋಡಲು ಬಲು ಸುಂದರವಾಗಿ ಇರುತ್ತದೆ. ಜಂಬೂಸವಾರಿ ಮೆರವಣಿಗೆಯೊಂದಿಗೆ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತವೆ.
ದಸರಾ ಸಮಯದಲ್ಲಿ ಮನೆಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಎಲ್ಲರೂ ಸಹ ಕೂಡಿ ಸಂಭ್ರಮದಿಂದ ಆಚರಿಸುತ್ತಾರೆ. ಆ ದಿನಗಳಲ್ಲಿ ಎಲ್ಲರೂ ಸಂಭ್ರಮದಿಂದ ಸಡಗರದಿಂದ ಇರುತ್ತಾರೆ.
ಹೀಗೆ ನಾವು ದಕ್ಷಿಣ ಕನ್ನಡಕ್ಕೆ ಬಂದರೆ ಮಂಗಳೂರಿನ ಕುದ್ರೋಳಿಯ ಶಾರದೆಯನ್ನು 10 ದಿನಗಳ ಕಾಲ ಭಕ್ತಿಭಾವದಿಂದ ಪೂಜಿಸುತ್ತಾರೆ. ಶಾರದೆಯನ್ನು ನೋಡಲು ಬಹಳ ಸುಂದರ ಮತ್ತು ಆಕರ್ಷಣೀಯವಾಗಿರುತ್ತದೆ. ಮೈಸೂರಿನ ನಂತರ ಮಂಗಳೂರಿನ ದಸರವು ವಿಜೃಂಭಣೆಯಿಂದ ನಡೆಯುತ್ತದೆ. ನಗರವನ್ನು 10 ದಿನಗಳ ಕಾಲ ದೀಪಗಳಿಂದ ಅಲಂಕರಿಸಿರುತ್ತಾರೆ. ಇಲ್ಲಿಯ ಶಾರದೆ ನೋಡಲು ಬಹಳ ಭಕ್ತಾದಿಗಳು ಬರುತ್ತಾರೆ. ಇಲ್ಲಿ ವಿಶೇಷ ಏನೆಂದರೆ ಹುಲಿ ಕುಣಿತ ಮತ್ತು ಕರಡಿ ಕುಣಿತ. 9 ದಿವಸದ ಸಾಂಸ್ಕೃತಿಯ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.
ಕೊನೆಯ ದಿನ ಶಾರದೆಯ ಮೆರವಣಿಗೆಯೊಂದಿಗೆ ಭಜನೆ, ಕುಣಿತ ಭಜನೆ, ಹುಲಿ ಕುಣಿತ, ಕರಡಿ ಕುಣಿತ, ಸ್ತಬ್ದ ಚಿತ್ರಗಳು, ಚಂಡೆ, ವಾದ್ಯ, ಬ್ಯಾಂಡ್, ಮನೋರಂಜನ ಕಾರ್ಯಕ್ರಮಗಳು ಒಳಗೊಂಡಿರುತ್ತದೆ. ಅನಂತರ ಶಾರದೆಯನ್ನು ಪೂಜಿಸಿ ವಿಸರ್ಜನೆ ಮಾಡುತ್ತಾರೆ.
ಹೀಗೆ ದಕ್ಷಿಣ ಕನ್ನಡದಲ್ಲಿ ಹಲವಾರು ಕಡೆ ಶಾರದೆಯನ್ನು ಪೂಜಿಸುತ್ತಾರೆ. ಒಂದೊಂದು ಕಡೆ ಶಾರದೆಯನ್ನು ಕೂರಿಸಿ ಪೂಜಿಸುತ್ತಾರೆ. ಒಂದೊಂದು ಕಡೆ ಒಂದು ದಿವಸ ಶಾರದೆಯನ್ನು ಕೂರಿಸಿ ಪೂಜಿಸುತ್ತಾರೆ. ಆದರೂ ಬಹಳ ಸಂಭ್ರಮದಿಂದ ವಿಜೃಂಭಣೆಯಿಂದ ಶಾರದೆಯನ್ನು ಪೂಜಿಸುತ್ತಾರೆ.
ಅಚ್ಚರಿಯ ಸಂಗತಿ ಏನೆಂದರೆ, ಈ ಸಲದ ದಸರಾ ಹಬ್ಬ ಹತ್ತು ದಿವಸಗಳ ಕಾಲ ನಡೆಯುತ್ತದೆ. ದಸರಾ ಹಬ್ಬವನ್ನು ನೋಡುವುದೆಂದರೆ ಬಹಳ ಸಂತೋಷ. ಆದರೆ ಈಗಿನ ಕಾಲದಲ್ಲಿ ಎಲ್ಲವು ಬದಲಾಗಿದೆ. ಹಿಂದಿನ ಕಾಲದಲ್ಲಿ ಕಾಣುತ್ತಿದ್ದ ಮಣ್ಣಿನ ಗೊಂಬೆಗಳು ಈಗ ಕಾಣ ಸಿಗುವುದಿಲ್ಲ. ರಾಸಾಯನಿಕ ವಸ್ತುಗಳನ್ನು ಬಳಸಿ ಕೃತಕ ಮತ್ತು ಪ್ಲಾಸ್ಟಿಕ್ ನಿಂದ ಕೂಡಿದ ವಿಗ್ರಹಗಳೇ ಕಾಣುತ್ತಿವೆ. ಹಿಂದೆ ಮೆರವಣಿಗೆ ಸಂದರ್ಭದಲ್ಲಿ ಜನರು ಹೆಚ್ಚು ಹೊತ್ತು ತಮ್ಮ ಸಮಯವನ್ನು ಭಕ್ತಿಯಿಂದ ಕಳೆಯುತ್ತಿದ್ದರು. ಈಗಿನ ಕಾನೂನಿನ ವ್ಯವಸ್ಥೆಯಲ್ಲಿ ನಿಗದಿತ ಅವಧಿಯೊಳಗೆ ಶಾರದಾ ಮೆರವಣಿಗೆ ಮುಗಿಸಬೇಕು ಎನ್ನುವ ಕಾನೂನು ಸಹ ಬಂದಿದೆ. ದೇವರ ಭಕ್ತಿಗೆ ಕಡಿವಾಣ ಹಾಕುತ್ತಿರುವುದರಿಂದ ಜನರ ಭಕ್ತಿಗೆ ಭಂಗವಾಗುತ್ತಿದೆ.
- ಸುಮಂತ್ ವಿನೋಬನಗರ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ