ಬಳ್ಳಾರಿ: ಪ್ರಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ನಾಡಿನ ಮತ್ತು ದೇಶದ ಪ್ರಖ್ಯಾತ ಕಾದಂಬರಿ ಕಾರರಲ್ಲಿ ಒಬ್ಬರಾಗಿದ್ದಾರೆ, ದೇಶದ ಅತ್ಯುನ್ನತ ಪ್ರಶಸ್ತಿಯಾದ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನಾಡಿಗೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ತಿಳಿಸಿದರು.
ಅವರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭೈರಪ್ಪನವರು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಸಂತೆಮರಹಳ್ಳಿ ಗ್ರಾಮದಲ್ಲಿ ಜನಿಸಿ ತಮ್ಮ ಸಾಹಿತ್ಯ ಕೃಷಿಯಿಂದ ಅತ್ಯಮೂಲ್ಯವಾದ 26 ಕಾದಂಬರಿಗಳನ್ನು ರಚಿಸಿ ಲೋಕ ವಿಕ್ಯಾತರಾಗಿದ್ದಾರೆ.
ಅವರ ಸಾಹಿತ್ಯ ಕೃಷಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಆದರೆ ಅದಕ್ಕಿಂತ ಮಿಗಿಲಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಒಲಿದಿದೆ ಎಂದು ಟಿ ಹೆಚ್ ಎಂ ಬಸವರಾಜ್ ಎಸ್ ಎಲ್ ಭೈರಪ್ಪನವರ ಸಾಹಿತ್ಯ ಸೇವೆಯನ್ನು ಕೊಂಡಾಡಿದರು.
ಬೈರಪ್ಪನವರ 26 ಕಾದಂಬರಿಗಳು ದೇಶದ ಎಲ್ಲಾ ಭಾಷೆಗಳಿಗೆ ಅನುವಾದ ಗೊಂಡಿವೆ ಜೊತೆಗೆ ಇಂಗ್ಲೀಷ್ ಭಾಷೆಗೂ ಸಹ ಅನುವಾದ ಗೊಂಡಿವೆ ಇದನ್ನು ಗಮನಿಸಿದರೆ ಸಾಕು ಅವರು ಎಂಥ ಮೇರು ಸಾಹಿತಿಯೆಂದು ತಿಳಿದುಕೊಳ್ಳಬಹುದು ಎಂದರು.
ಈ ನುಡಿ ನಮನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನಿಷ್ಠರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳ್, ಪ್ರಾಚಾರ್ಯರಾದ ತಿಪ್ಪೇರುದ್ರ ಸೇರಿದಂತೆ ಇತರರು ನುಡಿ ನಮನವನ್ನು ಸಲ್ಲಿಸಿದರು.
ಎ. ಎಂ. ಪಿ ವೀರೇಶ್ ಸ್ವಾಮಿ ಭೈರಪ್ಪನವರ ಕಾದಂಬರಿಗಳ ಹೆಸರಿನಿಂದ ಕವನವನ್ನು ರಚಿಸಿ ವಾಚಿಸಿ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಮ್ಮಿಗನೂರು ಜಡೆಶ್ ಭಾವಗೀತೆ ನಾಡ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಈ ನುಡಿ ನಮನ ಕಾರ್ಯಕ್ರಮದಲ್ಲಿ ಕ.ಸಾ.ಪ ಗ್ರಾಮೀಣ ಘಟಕದ, ಅಧ್ಯಕ್ಷರಾದ ಎರಿಸ್ವಾಮಿ, ತಾಲೂಕ ಅಧ್ಯಕ್ಷರಾದ ನಾಗಿ ರೆಡ್ಡಿ ಸಂಘಟನಾ ಕಾರ್ಯದರ್ಶಿಯಾದ, ಪ್ರಭು, ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಸಾಹಿತಿ ವೀರೇಂದ್ರ ರವಿಹಾಳ್ ಸೇರಿದಂತೆ ಹಲವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ