ಬಳ್ಳಾರಿ: ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನದ ಅಂಗವಾಗಿ ದಿನಾಂಕ 17-09-2025 ರಿಂದ 02-10-2025 ವರೆಗೆ ವಿವಿಧ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಬಳ್ಳಾರಿ ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ತಿಳಿಸಿದರು.
ಬಳ್ಳಾರಿ ನಗರ ಮಂಡಲದ ಸೇವಾಪಾಕ್ಷಿಕ ಕಾರ್ಯಾಗಾರವನ್ನು ಶನಿವಾರ (ಸೆ.13) ಬೆಳಿಗ್ಗೆ 10 ಗಂಟೆಗೆ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಾಗಾರದಲ್ಲಿ ಗಾಲಿ ಸೋಮಶೇಖರ್ ರೆಡ್ಡಿ. ಬಳ್ಳಾರಿ ನಗರ ಮಾಜಿ ಶಾಸಕರು , ಅನಿಲ್ ಕುಮಾರ್ ಮೊಕ ಜಿಲ್ಲಾ ಅಧ್ಯಕ್ಷರು, ಜಿ ವೆಂಕಟರಮಣ ಮಂಡಲ ಅಧ್ಯಕ್ಷರು, ಡಾಕ್ಟರ್ ಅರುಣ ಕಾಮಿನೇನಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಸೇವಾ ಪಾಕ್ಷಿಕ ಸಂಚಾಲಕರು, ಅಶೋಕ್ ಕುಮಾರ್ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸೇವಾ ಪಕ್ಷಿಕದ ಸಹ ಸಂಚಾರಕರು, ಪಕ್ಷದ ಹಿರಿಯ ಮುಖಂಡರಾದ ಸಾಧನ ಹಿರೇಮಠ, ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀನಿವಾಸ್ ಮುತ್ಕರ್, ಹನುಮಂತಪ್ಪ, ಮಲ್ಲನಗೌಡ, ಗುಡಿಗಂಟಿ ಹನುಮಂತ, ವೇಮಣ್ಣ, ವೆಂಕಟರಮಣ, ಮಂಡಲ ಪ್ರಧಾನ ಕಾರ್ಯದರ್ಶಿ ಅಮರನಾಥ್ ಮತ್ತು ಓಂ ಪ್ರಕಾಶ್ ಮುಖಂಡರುಗಳಾದ ಕೇಶವ, ರಘು, ಸುಧಾಕರ್, ನಾಗರಾಜ್, ಶಿವು, ನಗರ ಮಂಡಲ ಪದಾಧಿಕಾರಿಗಳು, ಎಲ್ಲಾ ಮೋರ್ಚಾ ಪದಾಧಿಕಾರಿಗಳು, ಮಹಾ ಶಕ್ತಿ ಕೇಂದ್ರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


