ಬಳ್ಳಾರಿ: ಭಾರತೀಯ ಅಂಚೆ ಇಲಾಖೆ ಬಳ್ಳಾರಿ ವಿಭಾಗ ಇವರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಮತ್ತು ಭಾರತೀಯ ವೈದ್ಯಕೀಯ ಸಂಘ ಬಳ್ಳಾರಿ ಜೊತೆಗೂಡಿ ಅಂಚೆ ಅಧೀಕ್ಷಕರ ಕಛೇರಿ ಬಳ್ಳಾರಿ ವಿಭಾಗದ ಸಭಾಂಗಣದಲ್ಲಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಉದ್ಘಾಟಿಸಿದ ವಿಠ್ಠಲ್, ಒಬ್ಬ ಪುರುಷ ಕಲಿತರೆ ಒಬ್ಬ ಪುರುಷ ಕಲಿತಂತೆ, ಅದೇ ಒಬ್ಬ ಮಹಿಳೆ ಕಲಿತರೆ ಇಡಿ ಕುಟುಂಬ ಕಲಿತಂತೆ ಅದಕ್ಕಾಗಿ ಈ ಕಾರ್ಯಕ್ರಮದಲ್ಲಿ ನೆರೆದಿರುವ ಎಲ್ಲ ವೀರ ನಾರಿಯರಿಗೆ ಕೇಳಿಕೊಳ್ಳುವುದು ಇಷ್ಟೇ ಪ್ರತಿಯೊಂದು ರಂಗದಲ್ಲೂ ಪುರುಷರಿಗೆ ಸಮನಾಗಿ ಮಹಿಳೆ ಕಾರ್ಯ ನಿರ್ವಹಿಸುತ್ತಳೆ ಒಂದು ಕುಟುಂಬ ಆರೋಗ್ಯವಾಗಿ ಇರಬೇಕಾದರೆ ಆ ಕುಟುಂಬದ ಮಹಿಳೆ ಆರೋಗ್ಯವಾಗಿ ಇರಬೇಕು ಕಾರ್ಯಕ್ರಮಕ್ಕೆ ಬಂದಿರುವಂತಹ ಸಂಪನ್ಮೂಲ ವ್ಯಕ್ತಿಗಳು ಕೊಡುವ ಮಾಹಿತಿಯನ್ನು ತಿಳಿದುಕೊಂಡು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ತದನಂತರದಲ್ಲಿ ಮಾತನಾಡಿದ ಮತ್ತೋರ್ವ ಅತಿಥಿ, ಅಂಚೆ ಇಲಾಖೆ ಉಪ ಅಧೀಕ್ಷಕ ಅರುಣ್ ಕಾಮತ್ ಇವರು ಇಂತಹ ಕಾರ್ಯಕ್ರಮದ ನಮ್ಮ ಇಲಾಖೆ ಜೊತೆಗೆ ಹಮ್ಮಿಕೊಂಡಿರುವುದಕ್ಕೆ ಎಫ್ ಪಿ ಎ ಐ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು. ಎಲ್ಲಾ ನನ್ನ ಸಹೋದ್ಯೋಗಿಗಳು ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ನಂತರದಲ್ಲಿ ಡಾ.ಸಂಗೀತ ಕಟ್ಟಿಮನಿ ಕಾರ್ಯದರ್ಶಿಗಳು ಭಾರತೀಯ ವೈದ್ಯಕೀಯ ಸಂಘ ಇವರು ಗರ್ಭ ಕಂಠ ಮತ್ತು ಸ್ತನ ಕ್ಯಾನ್ಸರ್ ಎಂದರೆ ಏನು ಹೇಗೆ ಹರಡುತ್ತದೆ ಅದನ್ನು ತಡೆಗಟ್ಟುವ ವಿಧಾನಗಳೇನು ಯಾವ ರೀತಿ ತಪಾಸಣೆ ಮಾಡಿಸಬೇಕು ಹಾಗೂ ಹೆಚ್ ಪಿ.ವಿ. ಲಸಿಕೆ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಚಿದಾನಂದ ಆಧೀಕ್ಷಕರು ಭಾರತೀಯ ಅಂಚೆ ಇಲಾಖೆ ಬಳ್ಳಾರಿ ವಿಭಾಗ ಇವರು ಮಾತನಾಡಿದ ಇಂತಹ ಮಾಹಿತಿ ಹಾಗೂ ತಪಾಸಣೆ ಶಿಬಿರಗಳು ಸತತವಾಗಿ ಆಗಬೇಕು. ಇದರಿಂದ ಮಾತ್ರ ನಾವು ನಮ್ಮ ಆರೋಗ್ಯ ಮತ್ತು ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುದಕ್ಕೆ ಸಾಧ್ಯ ಆದ್ದರಿಂದ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಅರ್ಥ ಮಾಡಿಕೊಳ್ಳಿ ತಪಾಸಣೆ ಮಾಡಿಸಿ ಲಸಿಕೆ ತೆಗೆದುಕೊಳ್ಳಿ ,ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸತತ ತಪಾಸಣೆ ಮತ್ತು ಲಸಿಕೆ ಹಾಕಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ"ಎಂದು ನೆರದಂಥ ಎಲ್ಲ ಸಹೋದ್ಯೋಗಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಶಾಖಾ ವ್ಯವಸ್ಥಾಪಕರು ಎಫ್. ಪಿ .ಎ. ಬಳ್ಳಾರಿ ಪ್ರಾಸ್ತಾವಿಕ ನುಡಿಗಳ ಜೊತೆ ನಮ್ಮ ಎಫ್. ಪಿ .ಎ. ಸಂಸ್ಥೆಯ ಸೇವೆಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಸವರಾಜ ನಿರೂಪಣೆ ಮಾಡಿ ವಂದಿಸಿದರು. ಹಾಗೆಯೇ ಎಫ್ ಪಿ ಎ. ಮತ್ತು ಐ ಎಂ ಎ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿಕೊಟ್ಟಂತಹ ಶ್ರೀಮತಿ ಪಾವನಿ ಉದ್ಯೋಗಿಗಳು ಭಾರತೀಯ ಅಂಚೆ ಇಲಾಖೆ ಹಾಗೂ ವೀರೇಶ್ ಉದ್ಯೋಗಿಗಳು ಭಾರತೀಯ ಅಂಚೆ ಇಲಾಖೆ ಇವರಿಗೆ ಧನ್ಯವಾದಗಳನ್ನು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


