ಸಹಸ್ರಚಂದ್ರ- ಅಚ್ಚುಕಟ್ಟಾಗಿ ಮೂಡಿಬಂದ ಬೃಹತ್ ಸಂಸ್ಮರಣಾ ಗ್ರಂಥ

Upayuktha
0



ಕೆಲ ದಿನಗಳ ಹಿಂದೆ ಲೋಕಾರ್ಪಣೆಗೊಂಡ ಸಹಸ್ರಚಂದ್ರ ಪುಸ್ತಕ ನನ್ನ ಕೈ ಸೇರಿತು. 540 ಪುಟಗಳ ಬೃಹತ್ ಗ್ರಂಥವದು. ಪುಸ್ತಕದ ಪ್ರಥಮ ನೋಟವೇ ತುಂಬಾ ಆಕರ್ಷಣೀಯ.


ಶ್ರೀ ಅಖಿಲ ಹವ್ಯಕ ಮಹಾಸಭೆ ಕಳೆದ ವರ್ಷ ನಡೆಸಿದ ಮೂರನೇ ವಿಶ್ವ ಹವ್ಯಕ ಸಮ್ಮೇಳನದ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ. ಆಹಾ!!ಒಂದೊಂದು ಚಿತ್ರಗಳೂ ಅದ್ಭುತ. ಮೂರು ದಿನಗಳ ಯಶಸ್ಸಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಈ ಬೃಹತ್ ಗ್ರಂಥ ಪ್ರತಿಯೊಬ್ಬ ಹವ್ಯಕನ ಮನೆಯಲ್ಲಿ ಇರಲೇಬೇಕು ಅಂತ ನನಗನಿಸಿತು. ಅನೇಕ ಸಂಸ್ಕೃತಿಗಳು ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಹವ್ಯಕರು ಹಂತಹಂತವಾಗಿ ಏರಿದ ಎತ್ತರವನ್ನು ಎಳೆ ಎಳೆಯಾಗಿ ಬಿತ್ತರಿಸಿದ ಅನೇಕ ಸಂಗತಿಗಳು ಇದರಲ್ಲಿದೆ.


ಹವ್ಯಕರ ಮೂಲ, ಹವ್ಯಕರ ಸಾಧನೆ, ಹವ್ಯಕರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಬೇಕಾದ ಎಲ್ಲಾ ವಿಷಯಗಳು ಒಳಗೊಂಡಿದೆ.


ಹವ್ಯಕ ಸಾಧಕರ ಪಟ್ಟಿಗಳು ಬೆರಗುಗೊಳಿಸುವಂತದ್ದು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ದೇಶದ ಅತ್ಯಂತ ಸಣ್ಣ ಸಂಖ್ಯೆಯ ಹವ್ಯಕರು ಏರದ ಕ್ಷೇತ್ರವಿಲ್ಲ ಎಂಬುದು ಇಲ್ಲಿ ವೇದ್ಯವಾಗುತ್ತದೆ.


ಅತ್ಯಂತ ಶಿಸ್ತುಬದ್ಧವಾಗಿ ಮೂರು ದಿನಗಳ ಮಹಾನ್ ಸಮ್ಮೇಳನವನ್ನು ಸಾಧಿಸಿದ ಶ್ರಮದ ಹಿನ್ನೆಲೆಯಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಕೆಲಸ ಮಾಡಿದ ಅದೆಷ್ಟು ಮಂದಿ ಇದ್ದಾರೆ ಎಂಬುದನ್ನು ಪುಸ್ತಕ ತೆರೆದಂತೆ ನಮಗೆ ಗೋಚರವಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ಹವ್ಯಕರು ಏರಿದ ಎತ್ತರಕ್ಕೆ ಇಂತಹ ನಿಸ್ವಾರ್ಥ ಸೇವೆಯೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ.


ಪುಸ್ತಕದ ರಚನೆ, ವರ್ಣ ವಿನ್ಯಾಸ, ಅಮೂಲ್ಯ ಚಿತ್ರಗಳು, ಕಾಗದದ ಗುಣಮಟ್ಟ ಎಲ್ಲಿಯೂ ರಾಜಿ ಇಲ್ಲದೆ ಇರುವುದು ಎದ್ದು ಕಾಣುವ ಅಂಶ. ಅತ್ಯಂತ ಯಶಸ್ವಿ ಸಮ್ಮೇಳನದ ಯಶಸ್ಸಿನ ಅನಾವರಣ ಈ ಪುಸ್ತಕ ರೂಪದಲ್ಲಿ ಹೊರ ಬಂದಿದೆ. ಸಂಗ್ರಹ ಯೋಗ್ಯ ಗ್ರಂಥ.


- ಎ.ಪಿ. ಸದಾಶಿವ ಮರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top