ವಡೋದರ: "ಶನಿ ಅಮವಾಸೆಯಂದು ಶನಿ ಮಹಾತ್ಮೆ ನಾಟಕ ವೀಕ್ಷಣೆ ಮಾಡಿದ ಪ್ರೇಕ್ಷಕರು ಪುಣ್ಯ ಶಾಲಿಗಳು. ಶನಿ ದೇವರ ಮಹಿಮೆಯ ಕಥಾ ಶ್ರವಣ ದೋಷ ಪರಿಹಾರಕ್ಕೆ ಮಾಧ್ಯಮ. ಸದಭಿರುಚಿಯ ಪೌರಾಣಿಕ ನಾಟಕ ರಚನೆ ಮಾಡಿ ಪುರಾಣ ಕಥೆ ಗಳನ್ನು ಪರಿಚಯಿಸುವ ನಾಟಕಗಾರ ಕದ್ರಿ ನವನೀತ ಶೆಟ್ಟಿ, ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುವ ಶ್ರೀ ಲಲಿತೆ ತಂಡದ ಸ್ಥಾಪಕ ಕಿಶೋರ್ ಡಿ ಶೆಟ್ಟಿ ಮತ್ತು ತಂಡದ ಸದಸ್ಯರು, ರಂಗ ಸಾರಥಿ ಕರ್ನೂರು ಮೋಹನ್ ರೈ ಅಭಿನಂದನಾರ್ಹರು" ಎಂದು ಉದ್ಯಮಿ, ಕಲಾಪೋಷಕ ಶಶಿಧರ ಶೆಟ್ಟಿ ಬರೋಡ ನುಡಿದರು.
ಗುಜರಾತ್ ನ ವಡೋದರ ಜೈನ್ ಭವನದಲ್ಲಿ ಶಶಿ ಅಭಿಮಾನಿ ಬಳಗ ಆಯೋಜಿಸಿದ್ದ "ಶನಿ ಮಹಾತ್ಮೆ" ತುಳು ಪೌರಾಣಿಕ ನಾಟಕ ಪ್ರದರ್ಶನದ ಕೊನೆಯಲ್ಲಿ ಶ್ರೀ ಲಲಿತೆ ಕಲಾವಿದರು(ರಿ) ಮಂಗಳೂರು ತಂಡದ ಪರವಾಗಿ ಕದ್ರಿ ನವನೀತ ಶೆಟ್ಟಿ ಅವರನ್ನು ಬರೋಡ ತುಳು ಸಂಘದ ಸ್ಥಾಪಕ, ಉದ್ಯಮಿ ದಯಾನಂದ ಬೋಂಟ್ರ ಅಭಿನಂದಿಸಿದರು.
ಪ್ರಮೀಳಾ ಶಶಿಧರ್, ಶೌರ್ಯ ಶೆಟ್ಟಿ, ಮದನ್ ಕುಮಾರ್ ಉಪಸ್ಥಿತರಿದ್ದರು.
ನಾಟಕ ಅವಲೋಕನ:
ನಾಟಕದ ಅಂಕದ ಪರದೆ ಬೀಳುತ್ತಿದ್ದoತೆ ಪ್ರೇಕ್ಷಕರು ಎದ್ದು ಹೊರಡುವುಸಾಮಾನ್ಯ.ಆದರೆ ಬರೋಡದ ಪ್ರಬುದ್ಧ ಕಲಾಭಿಮಾನಿ ಪ್ರೇಕ್ಷಕರೆಲ್ಲರೂ ನಾಟಕ ಮುಗಿದ ನಂತರ ನಡೆದ ಕಲಾವಿದರ ಪರಿಚಯ- ನಾಟಕ ವಿಮರ್ಶೆಯಲ್ಲಿ ಪಾಲ್ಗೊಂಡು ಶಿಸ್ತು ಮೆರೆದರು.
ಬಾಲ ಸೂರ್ಯ, ಋತುಪರ್ಣ, ವಿಶ್ವಾಮಿತ್ರ ಹಾಗೂ ಪುರ ಜನ ರಂಗ ನಾಲ್ಕು ವಿಭಿನ್ನ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ ಯುವ ಕಲಾವಿದ ರೋಹಿಲ್ ಶೆಟ್ಟಿ, ಮನೋಜ್ಞ ಅಭಿನಯದ ಮೂಲಕ ಕರುಣಾರಸ ಭರಿತ ಹರೀಶ್ಚಂದ್ರ ಹಾಗೂ ಚಂದ್ರಮತಿ ಪಾತ್ರ ಧಾರಿ ಗಳಾದ ಮೋಹನ್ ಕೊಪ್ಪಳ ಮತ್ತು ಮಂಜು ಕಾರ್ಕಳ, ಕುಶಲತೆಯ ಮುಖ ವರ್ಣಿಕೆ ಯೊಂದಿಗೆ ಮೆರೆದ ಬಾಹುಕ ತಾರಾನಾಥ್ ಉರ್ವಾ, ಭದ್ರಕಾಯದ ಅಬ್ಬರದ ಶನಿ ದೇವರಾಗಿ ನಾಟಕದ ಆರಂಭ ದಿಂದ ಮಂಗಳದ ತನಕ ಕಾಣಿಸಿಕೊಂಡ ಸುರೇಶ್ ಮೆಂಡನ್, ರೈತ ಮಂದಣ್ಣ ಹಾಗೂ ನಂದಿ ಶ್ರೇಷ್ಠಿ ಯಾಗಿ ತಿಳಿ ಹಾಸ್ಯ ಸೂಸಿದ ಪ್ರದೀಪ್ ಆಳ್ವ ಕದ್ರಿ, ಪಾತ್ರೋಚಿತ ವೇಷ ಭೂಷಣ,ನೃತ್ಯ, ಅಭಿನಯ ದೊಂದಿಗೆ ಜನ ಮನ ರಂಜಿಸಿದ ಆಲೋಲಿಕೆ ಸ್ನೇಹ ಕುಂದರ್, ರಾಜಕುಮಾರಿ ಪದ್ಮಾವತಿ ಹರ್ಷಿಣಿ ಪೂಜಾರಿ. ಈಶ್ವರ, ಕಟುಕ, ವಿಭಾಕರ ಮೂರು ಪಾತ್ರ ಗಳ ಮೂಲಕ ನವರಸ ಅಭಿವ್ಯಕ್ತಿ ಗೈದ ಪ್ರಬುದ್ಧ ರಂಗ ನಟ ಹರೀಶ್ ಪಣಂಬೂರು. ಈಶ್ವರನಾಗಿ ನವೀನ್ ಶೆಟ್ಟಿ ಅಂಬ್ಲಮೊಗರು, ನಳ ನಾಗಿ ರಾಹುಲ್ ಶ್ರೀಯಾನ್, ಅರುಣನಾಗಿ ಮನ್ವಿತ್ ಶೆಟ್ಟಿ ಪಾತ್ರೊಚಿತ ಅಭಿನಯ ನಿರ್ವಹಿಸಿ ಜನ ಮನ ಗೆದ್ದರು.
ವಿಕ್ರಮ ರಾಜನನ್ನು ಅನ್ನ ಆಹಾರ ನೀಡಿ ಉಪಚರಿಸುವ ಪುರಜನರಾಗಿ ಶಶಿ ಅಭಿಮಾನಿ ಬಳಗದ ಮಾತೆಯರು ಸಹಕರಿಸಿದರು.
ರಾಶಿ ಚಕ್ರ, ಸೂರ್ಯ ಮಂಡಲ, ಮೂರು ವಿಭಿನ್ನ ರಥಗಳು,ಕೈಲಾಸ, ಸ್ಮಶಾನ, ಅರಮನೆ, ಪಟ ಪಟನೆ ಬದಲಾಗುತ್ತಿದ್ದ ದೃಶ್ಯಾವಳಿ ನಿರ್ಮಿಸುತ್ತಿದ್ದ ಪೊರ್ಲು ಆರ್ಟ್ಸ್ ನ ಪ್ರತಾಪ್ ಸಾಲಿಯಾನ್ ಬಳಗ, ನವೀನ್ಯತೆ ಯ ಬೆಳಕಿನ ವಿನ್ಯಾಸ ನೀಡುವ ಯುತೀಶ್ ಮಂಜೇಶ್ವರ, ಸಂಗೀತ ಸಾರಥಿ ಅನಿಲ್ ಕುಮಾರ್ ಪಾಂಗಳ, ಹಿರಿಯ ಮೇಕ್ಅಪ್ ಕಲಾವಿದರಾದ ಸೋಮನಾಥ್ ಸಂಕೋಳಿಗೆ, ಮಹೇಶ್ ಮೂರೂರು.
ಶ್ರೀ ಲಲಿತೆ ತಂಡದ ಸಮಗ್ರ ನಿರ್ವಹಣೆ ಮಾಡುವ ಮೋಹನ್ ಕೊಪ್ಪಳ ಕದ್ರಿ, ಪ್ರಸರಣ ಮುಖ್ಯಸ್ಥ ಪ್ರದೀಪ್ ಆಳ್ವ ಕದ್ರಿ ಅವರನ್ನು ಅಭಿನಂದಿ ಸಲಾಯಿತು.
ದೀಪಕ ಮಾಲಾ ರಾಗದ ಹಾಡಿ ನ ಪರಿಣಾಮ ತೋರಲು ಸಭಾ ಸದಸ್ಯರೆಲ್ಲರೂ ಮೊಬೈಲ್ ಟಾರ್ಚ್ ಬೆಳಕು ಚೆಲ್ಲಿ ಹೊಸ ಅನುಭವ ಪಡೆದರು. "ಶನಿ ಮಹಾತ್ಮೆ" ಕನ್ನಡ ನಾಟಕ ಪ್ರದರ್ಶನಕ್ಕೆ ಮತ್ತೊಮ್ಮೆ ಬನ್ನಿ ಎನ್ನುವ ಪ್ರೀತಿಯ ಆಹ್ವಾನ ಈ ನಾಟಕದ ಯಶಸ್ಸಿನ ಕೈಗನ್ನಡಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ