ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ನಿಂದ ಶ್ರಾವಣ ಸಂಭ್ರಮ

Upayuktha
0


ರಾಣೆಬೆನ್ನೂರು: ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಸಂಭ್ರಮದಲ್ಲಿ ಮೈತ್ರೇಯಿ ಸದಸ್ಯರು ಹಾಗೂ ಶ್ರೀ ರಮಾ ತ್ರಿವಿಕ್ರಮ ಭಜನಾ ಮಂಡಳಿ ಜೆ ಪಿ ನಗರ ಬೆಂಗಳೂರು ಇವರ ಸಹಯೋಗದಲ್ಲಿ ಶ್ರಾವಣ ಒಂದು ತಿಂಗಳ ಪೂರ್ತಿ ಮನೆಮನೆಗಳಲ್ಲಿ ಭಜನೆ, ಲಕ್ಷ್ಮಿ ಶೋಭಾನೆ ಪಾರಾಯಣ ಹಾಗೂ ಆಧ್ಯಾತ್ಮ ಚಿಂತನೆಗಳು ನಡೆಸಲಾಯಿತು. 


ನಾಗಪಂಚಮಿಯಂದು, ಹೆಳವನಕಟ್ಟೆ ಗಿರಿಯಮ್ಮನವರ ಆರಾಧನೆಯನ್ನು, ಗಿರಿಯಮ್ಮನವರ ಜನ್ಮ ಸ್ಥಳವಾದ ರಾಣೆಬೆನ್ನೂರಿನಲ್ಲಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ ಹಾಗೂ ಹೆಳವನಕಟ್ಟೆ ಭಕ್ತವೃಂದ ಮತ್ತು ರಾಣೆಬೆನ್ನೂರಿನ ಭಕ್ತ ವೃಂದ, ಭಜನಾ ಮಂಡಳಿಯ ಸಹಯೋಗದಲ್ಲಿ ಆಚರಿಸಲಾಯಿತು.


ನಗರ ಸಂಕೀರ್ತನೆ, ಹೆಳವನಕಟ್ಟೆ ಗಿರಿಯಮ್ಮನವರ ಸ್ಮರಣೆ, ಕೃತಿ ಚಿಂತನೆ ಮತ್ತು ಡಾ. ಶಾಂತಾ ರಘೂತ್ತಮ ಇವರು ಸಂಪಾದಿಸಿದ, ಗಿರಿಯಮ್ಮನವರ ದೀರ್ಘಕೃತಿ – ಉದ್ದಾಳಿಕನ ಕಥೆ, ಹಾಗೂ ಹರಿಭಕ್ತೆ ಕಮಲಾಕ್ಷಿಬಾಯಿಯವರ ಕೃತಿಗಳ ಪುಸ್ತಕಗಳನ್ನು ಬಿಡಗಡೆ ಮಾಡಲಾಯಿತು. ಡಾ. ವಿದ್ಯಾಶ್ರೀ ಕುಲ್ಕರ್ಣಿ ಇವರಿಗೆ ಗಿರಿಯಮ್ಮನವರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಮಹಿಳಾ ಹರಿದಾಸರಾದ ಕಮಲಾಕ್ಷಿಬಾಯಿಯವರಿಗೆ, ಮೈತ್ರೇಯಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಮೈತ್ರೇಯಿ ಟ್ರಸ್ಟ್‌ ನ ಸದಸ್ಯರಾದ ಶ್ರೀಮತಿ ಚಂಪಾ ಪಾಗಾ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು. 


ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಗೋಪಾಲ ದಾಸರ ರಚಿಸಿದ ರಾಯರ ಸುಳಾದಿ ಮತ್ತು ರಾಘವೇಂದ್ರ ಸ್ವಾಮಿಗಳ ಸರ್ವ ಸಮರ್ಪಣ ಗದ್ಯದ ಪಾರಾಯಣ ಹಾಗೂ ಅರ್ಥ ಚಿಂತನೆಯನ್ನು ಅಧ್ಯಕ್ಷರಾದ ಡಾ. ಸುಧಾ ದೇಶಪಾಂಡೆ ಅವರು ನಡೆಸಿಕೊಟ್ಟರು.


ಗೋಕುಲಾಷ್ಟಮಿಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸುಧಾ ದೇಶಪಾಂಡೆಯವರ ಮನೆಯಲ್ಲಿ ಶ್ರೀ ಕೃಷ್ಣನ ಕುರಿತಾಗಿ ಕೃತಿಗಳ ಗಾಯನ ಹಾಗೂ ಅರ್ಥ ಚಿಂತನೆಯ ಮೂಲಕ ಆಚರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top