ಮಂಗಳೂರು: ವಿಶ್ವದಾದ್ಯಂತ ವೈರಸ್‍ಗಳಿಂದ ಬರುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿರುವ ಇನ್‍ಫ್ಲೂಯೆಂಜಾ ತಡೆಯಲು ಸಾರ್ವತ್ರಿಕ ಲಸಿಕೆ ಪಡೆಯುವುದು ಅಗತ್ಯ ಎಂದು ಜೈಡಸ್ ಲೈಫ್ ಸೈನ್ಸಸ್ ಲಿಮಿಟೆಡ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ತಜ್ಞರು ಪ್ರತಿಪಾದಿಸಿದ್ದಾರೆ.
ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‍ಸಿಡಿಸಿ) ಕೂಡ, ಇನ್‍ಫ್ಲೂಯೆಂಜಾ ತಡೆಗೆ ಸಾರ್ವತ್ರಿಕ ಲಸಿಕೆ ಪಡೆಯುವಂತೆ ವಿಶ್ವ ಆರೋಗ್ಯ ಸಂಸ್ಥೆ ಮಾಡಿದ ಶಿಫಾರಸ್ಸನ್ನು ಒಪ್ಪಿಕೊಂಡಿದೆ. ಶಿಶುಗಳು, ವೃದ್ಧರು ಮತ್ತು ದೀರ್ಘಕಾಲದ ಅಸ್ವಸ್ಥತೆ ಹೊಂದಿರುವವರ ಮೇಲೆ ಈ ರೋಗವು ಪರಿಣಾಮ ಬೀರುತ್ತಿದೆ. ಈ ಸೋಂಕು ತಗುಲದಂತೆ ಲಸಿಕೆ ಪಡೆಯುವುದೇ ತಡೆಗೆ ಇರುವ ಏಕೈಕ ಮಾರ್ಗ ಎಂದು ಜೈಡಸ್ ಲೈಫ್ ಸೈನ್ಸಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್ ಪಟೇಲ್ ಹೇಳಿದ್ದಾರೆ.
ಇನ್‍ಫ್ಲೂಯೆಂಜಾ ವೈರಸ್‍ಗಳಿಂದ ಉಂಟಾಗುವ ವ್ಯಾಪಕವಾಗಿ ಹರಡುವ ಈ ಉಸಿರಾಟದ ಕಾಯಿಲೆ ಸಾಂಕ್ರಾಮಿಕವಾಗಿದ್ದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ, ಮುಖ್ಯವಾಗಿ ಕೆಮ್ಮು ಮತ್ತು ಸೀನುವಿಕೆ ಅಥವಾ ಸೋಂಕಿತರ ಮೇಲ್ಮೈ ಅಥವಾ ವ್ಯಕ್ತಿಯೊಂದಿಗೆ ನೇರ ಸಂಪರ್ಕದಿಂದ ಇದು ಸಾಂಕ್ರಾಮಿಕವಾಗಿ ಹರಡುತ್ತದೆ ಎಂದು ಪ್ರಕಟಣೆ ಹೇಳಿದೆ.
ಇದು ಜ್ವರ, ಗಂಟಲು ನೋವು, ತೀವ್ರ ತಲೆನೋವು, ಕೆಮ್ಮು ಮತ್ತು ಅಸ್ವಸ್ಥತೆ ಉಂಟು ಮಾಡುತ್ತದೆ. ಇದು ಪ್ರತಿ ವರ್ಷ ವಿಶ್ವದಾದ್ಯಂತ ಅಂದಾಜು ನಾಲ್ಕು ಲಕ್ಷ ಉಸಿರಾಟದ ಸೋಂಕು ಮತ್ತು 3 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು (ಯುಐಪಿ) ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವ ಭಾರತವು ಈ ತಡೆಗಟ್ಟಬಹುದಾದ ರೋಗ ಎದುರಿಸಲು ಸಮರ್ಥವಾಗಿದ್ದರೂ, ಭಾರತದಲ್ಲಿ ಜ್ವರ ಲಸಿಕೆಯ ಅಗತ್ಯವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗಿಲ್ಲ. ಜನಸಂಖ್ಯೆಯ ಶೇಕಡ 1.5ಕ್ಕಿಂತ ಕಡಿಮೆ ಜನರು ಮಾತ್ರ ಈ ಲಸಿಕೆ ಪಡೆಯುತ್ತಿದ್ದಾರೆ ಎಂದು ತಜ್ಞರು ಅಂಕಿ ಅಂಶ ಪ್ರಸ್ತುತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ