ಈಶ್ವರಮಂಗಲ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲದ ಆಗಸ್ಟ್ ತಿಂಗಳ ಸಭೆಯು ಶನಿವಾರ (ಆ.23) ಈಶ್ವರಮಂಗಲ ವಲಯದ ಅಧ್ಯಕ್ಷರಾದ ಈಶ್ವರಿ ಪೆರುಂಬಾರು ಅವರ ಕೃಷ್ಣನಿಲಯದಲ್ಲಿ ನಡೆಯಿತು.
ಬೆಳಗ್ಗೆ ಪಟ್ಲಮೂಲೆ ಕೃಷ್ಣಕುಮಾರ ಉಪಾಧ್ಯಾಯರ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ಶಿವಪೂಜೆ ಜರಗಿದವು. ಧ್ವಜಾರೋಹಣ, ಶಂಖನಾದ, ಗೋವಂದನೆ, ಗುರುಪಾದುಕಾ ಸ್ತೋತ್ರ ಪಠನದೊಂದಿಗೆ ಸಭೆ ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ವಹಿಸಿದ್ದರು.
ನೂತನವಾಗಿ ನಿಯುಕ್ತಿಗೊಂಡ ಮಂಡಲ ಪದಾಧಿಕಾರಿಗಳನ್ನು ಪರಿಚಯಿಸಲಾಯಿತು. ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಗತ ಸಭೆಯ ವರದಿಯನ್ನು ನೀಡಿದರು. ಕೋಶಾಧಿಕಾರಿ ಸೀತಾರಮ ಭಟ್ ಅಡಿಕೆಹಿತ್ಲು ಲೆಕ್ಕಪತ್ರ ಮಂಡಿಸಿ ತಮ್ಮ ಜವಾಬ್ದಾರಿಯನ್ನು ಮುಂದಿನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ವಲಯದ ನಿಯುಕ್ತ ಪದಾಧಿಕಾರಿಗಳ ಪಟ್ಟಿ ಮಹಾಮಂಡಲದಿಂದ ಅಂಗೀಕಾರಗೊಂಡ ವಿಷಯ ತಿಳಿಸಲಾಯಿತು ಹಾಗೂ ಪಟ್ಟಿಯನ್ನು ಓದಲಾಯಿತು.
ಇದೇ 28 ನೇ ತಾರೀಕಿನಂದು ನಿಯುಕ್ತ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರವನ್ನು ಶ್ರೀಸಂಸ್ಥಾನದವರು ನೀಡಿ ಆಶೀರ್ವದಿಸುವ ವಿಷಯವನ್ನೂ ತಿಳಿಸಲಾಯಿತು ಹಾಗೂ ಅದೇ ದಿನ ಅಶೋಕೆಯಲ್ಲಿ ನಡೆಯುವ ಲಕ್ಷ ತುಳಸಿ ಅರ್ಚನೆಯಲ್ಲಿ ವಲಯಗಳಿಂದ ಭಾಗವಹಿಸುವಂತೆ ತಿಳಿಸಲಾಯಿತು.
ನಂತರ ಮಂಡಲದ ವಿವಿಧ ವಲಯಗಳ ಪ್ರತಿನಿಧಿಗಳು ವಲಯ ವರದಿಯನ್ನು ವಾಚಿಸಿದರು.
ಮಹಾಮಂಡಲ ಸೇವಾ ಸಹಾಯ ವಿಭಾಗದ, ಮುಳ್ಳೇರಿಯಾ ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾಡಾವು ಮಾಹಿತಿ ನೀಡಿದರು.
ಮಂಡಲ ಗುರಿಕಾರರಾದ ಸತ್ಯನಾರಾಯಣ ಮೊಗ್ರ ಸಭೆಯಲ್ಲಿ ಹಾಜರಿದ್ದು ಆ.25 ರಂದು ನಡೆಯುವ ಗುರಿಕ್ಕಾರರ ಸರ್ವಸೇವೆಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಎಲ್ಲಾ ಗುರಿಕ್ಕಾರರು ಭಾಗವಹಿಸುವಂತೆ ಕೋರಿದರು.
ಸೆಪ್ಟೆಂಬರ್ 26 ನೇ ತಾರೀಕಿನಂದು ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಶ್ರೀಮಠದ ವತಿಯಿಂದ ವಿವಿಧ ಸೇವೆಗಳು ನಡೆಯಲಿದ್ದು ವಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಯಿತು.
ಈಶ್ವರಮಂಗಲ ವಲಯದ ಹಿರಿಯರಾದ ಸುಬ್ರಹ್ಮಣ್ಯ ಭಟ್ ಅಮ್ಮಂಕಲ್ಲು, ಸುಂದರೇಶ ಭಟ್ ಮರಸಂಕ, ವೈದ್ಯರಾದ ಡಾ| ಕೃಷ್ಣ ಭಟ್ ಪೊಸವಣಿಕೆ ಜಾಲ್ಸೂರು, ಲಕ್ಷಭಾಗಿನಿ ಶ್ರೀಮತಿ ವಿದ್ಯಾ ಮಾಡಾವು ಅವರಿಗೆ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಮುಳ್ಳೇರಿಯಾ ಮಂಡಲ ಮಟ್ಟದ ರಾಮಬಳ್ಳಿ ವಿತರಣೆಗೆ ಮಂಡಲಾಧ್ಯಕ್ಷರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು. ಡಾ| ವೈ.ವಿ ಕೃಷ್ಣಮೂರ್ತಿ ಏತಡ್ಕ 100 ಬಳ್ಳಿಯ ಪ್ರಾಯೋಜಕತ್ವ ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಮಾತನಾಡುತ್ತಾ ಸಾಗರ ರಾಘವೇಶ್ವರ ಸಭಾಭವನದಲ್ಲಿ ನಡೆಯುವ ನವರಾತ್ರ ನಮಸ್ಯಾ, ರಾಮಬಳ್ಳಿ ಯೋಜನೆ, ಮಧೂರಿನಲ್ಲಿ ನಡೆಯುವ ಒಂದು ದಿನಾ ಸೇವೆ, 28 ನೇ ತಾರೀಕಿನಂದು ನಡೆಯುವ ಲಕ್ಷಾರ್ಚನೆ, ಶ್ರೀ ಭಾರತೀ ವಿದ್ಯಾಪೀಠದ ಕುರಿತು ಹಾಗೂ ಕೊಂಡೆವೂರು ಮಠದಲ್ಲಿ 24 ನೇ ತಾರೀಕಿನಂದು ನಡೆಯಲಿರುವ ವಿಷ್ಣುಸಹಸ್ರನಾಮ ಪಾರಾಯಣದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ರಾಮತಾರಕ ಮಂತ್ರ, ಶಾಂತಿಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ