ಉಜಿರೆ: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಹವ್ಯಾಸಿ ಬರಹಗಾರ ಶಿವಾನಂದ ಯು.ಎಲ್. ಹೇಳಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಜು.26ರಂದು ಅವರು ಹಾಬಿ ಸರ್ಕಲ್ ಕ್ಲಬ್ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ವಿದ್ಯಾಭ್ಯಾಸ ಪಡೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಿಮ್ಮಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಎನ್ನುವ ಸುವರ್ಣ ಅವಕಾಶ ಸಿಕ್ಕಿದೆ; ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಈ ಸಂದರ್ಭದಲ್ಲಿ ಮೈಗೂಡಿಸಿಕೊಂಡ ಉತ್ತಮ ಹವ್ಯಾಸಗಳು ಬದುಕಿನಲ್ಲಿ ನೆರವಿಗೆ ಬರುತ್ತವೆ” ಎಂದರು.
“ನನಗೆ ಓದಲು ಬಹಳ ಆಸೆ ಇತ್ತು. ಬಡತನದಿಂದ ಓದಲು ಸಾಧ್ಯವಾಗಲಿಲ್ಲ. ಆದರೆ ನನ್ನಲ್ಲಿನ ಬರವಣಿಗೆ ಹವ್ಯಾಸ ನನ್ನನ್ನು ಎಲ್ಲಾ ಸಮಯದಲ್ಲೂ ಮೇಲೆತ್ತಲು ನೆರವಾಗಿದೆ. ನಾಟಕ, ಸಿನಿಮಾ ಕಥೆಗಳನ್ನು ಬರೆಯುವಾಗ ಮನಸ್ಸಿಗೆ ಖುಷಿ ಸಿಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಬರವಣಿಗೆ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಬಿ ಸರ್ಕಲ್ ಸಂಯೋಜಕಿ, ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ಅವರು, ಕಲೆ, ಸಾಹಿತ್ಯ ಸಂಗೀತಗಳ ಅರಿವಿಲ್ಲದ ಮನುಷ್ಯ ಪ್ರಾಣಿಗೆ ಸಮಾನ. ಜೀವನವನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಲು ಹವ್ಯಾಸಗಳು ಅಗತ್ಯ ಎಂದರು.
ಕೆಲವೊಂದು ಬಾರಿ ಹವ್ಯಾಸಗಳೇ ವೃತ್ತಿಯಾಗುವ ಉದಾಹರಣೆಗಳು ಹಲವಾರು ಇದೆ. ಖ್ಯಾತ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರಂತಹ ದೊಡ್ಡ ದೊಡ್ಡ ಹೆಸರುಗಳು ಸಣ್ಣ ಕಸೂತಿ ಮಾಡುವ ಹವ್ಯಾಸದಿಂದ ಉನ್ನತ ಹಂತಕ್ಕೆ ಬೆಳೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿವೆ ಎಂದು ಕಿವಿಮಾತು ಹೇಳಿದರು.
ಶಿವಾನಂದ್ ಯು.ಎಲ್. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜಕ ಮಿಥುನ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಬಿಎ ವಿದ್ಯಾರ್ಥಿ ಸನ್ನಿಧಿ ಸ್ವಾಗತಿಸಿದರು. ಸಾತ್ವಿಕ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ದ್ವಿತೀಯ ಬಿ.ಎಸ್.ಸಿ. ವಿದ್ಯಾರ್ಥಿ ಕಿರಣ್ಮಯಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕಿ, ದ್ವಿತೀಯ ಬಿಎ ವಿದ್ಯಾರ್ಥಿ ಸುಶೀರ ಯು.ಎಲ್. ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ