ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ಗಣಿತ ವಿಭಾಗದ ವಿದ್ಯಾರ್ಥಿ ಸಂಘ ‘ಸಿಗ್ಮಾ’ ಉದ್ಘಾಟನೆ ಹಾಗೂ ‘ಕೃತಕ ಬುದ್ಧಿಮತ್ತೆ ಹಿಂದೆ ಗಣಿತ: ಸಿದ್ಧಾಂತದಿಂದ ಯಂತ್ರಚಿಂತನೆಗೆ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮ ಜು.25ರಂದು ನಡೆಯಿತು.
ಮುಖ್ಯ ಅತಿಥಿ, ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಕೃತಕ ಬುದ್ಧಿಮತ್ತೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಂತೀಶ್ ಆರ್. ಅವರು ಉದ್ಘಾಟನೆ ನೆರವೇರಿಸಿದರು. ಬಳಿಕ ಅವರು, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಗಣಿತದ ಮೂಲಭೂತ ಪಾತ್ರ ಹಾಗೂ ಯಂತ್ರಚಿಂತನೆಯ ಇತಿಹಾಸವನ್ನು ವಿವರಿಸಿದರು. ಜೀವನದ ವಿವಿಧ ಕ್ಷೇತ್ರಗಳಲ್ಲಿ ವರ್ಧಿಸುತ್ತಿರುವ ಗಣಿತದ ಪ್ರಾಮುಖ್ಯವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣಿತ ವಿಭಾಗದ ಮುಖ್ಯಸ್ಥ ಗಣೇಶ್ ನಾಯಕ್ ಬಿ. ಅವರು, ಗಣಿತ ವಿಭಾಗವು ಹೊಸಚಿಂತನೆ, ತಂಡಭಾವನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದಾ ಮುಂದಿರುತ್ತದೆ ಎಂದರು. ಸಿಗ್ಮಾ ಸಂಘದ ನೂತನ ಅಧ್ಯಕ್ಷೆ ಶೋಭಿತಾ, ಉಪಾಧ್ಯಕ್ಷ ಮಂಜುನಾಥ್ ಹೆಚ್. ಸಹಿತ ಪದಾಧಿಕಾರಿಗಳಿಗೆ ಬ್ಯಾಡ್ಜ್ ವಿತರಿಸಲಾಯಿತು.
ಗಣಿತಜ್ಞರ ಕುರಿತು ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿಪತ್ರಿಕೆ’ ಹಾಗೂ ಭಾರತೀಯ ಜ್ಞಾನ ಪರಂಪರೆ ಕುರಿತ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳು ಸಿಗ್ಮಾ ಸಂಘದ ಲಾಂಛನ ಮತ್ತು ‘ಶೂನ್ಯ ಮತ್ತು ಅನಂತದ ಕಥೆ’ ಕುರಿತ ಇ-ಮ್ಯಾಗಜಿನ್ ಪ್ರದರ್ಶಿಸಿದರು. ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಜನಾ ಸ್ವಾಗತಿಸಿ, ಸಿಂಚನಾ ವಂದಿಸಿದರು. ಆರಿಫಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ