ಉಡುಪಿ ಜಿಲ್ಲೆಯ ಎರಡನೇ ಅತೀ ಪ್ರಾಚೀನ ಗುರುರಾಯರ ವೃಂದಾವನ ಸನ್ನಿಧಿಯಾಗಿರುವ ಅಂಬಲಪಾಡಿ ಈಶಾವಾಸ್ಯಂನಲ್ಲಿ (ಡಾ ಬನ್ನಂಜೆ ಗೋವಿಂದಾಚಾರ್ಯರ ಮನೆ) ಈ ಬಾರಿಯ ರಾಯರ ಆರಾಧನೋತ್ಸವದ ಮೂರನೇ ದಿನ ಅರ್ಥಾತ್ ಉತ್ತರಾರಾಧನೆಯಂದು ಮಂಗಳರಾತಿ ವೇಳೆಗೆ ಮಂಗಲಪ್ರಸಾದ ಕರುಣಿಸಿ ನೆರೆದ ಭಕ್ತರನ್ನು ಪುನೀತರನ್ನಾಗಿಸಿದರು. ಈ ಕ್ಷಣದ ವೀಡಿಯೋ ತಡವಾಗಿ ಲಭಿಸಿದೆ. ಈಗ್ಗೆ ಎರಡು ವರ್ಷಗಳ ಹಿಂದಷ್ಟೆ ಈ ಸನ್ನಿಧಿಯನ್ನು (ವೃಂದಾವನ ಪ್ರಾಚೀನದ್ದೇ ಆಗಿದೆ) ಸಪೂರ್ಣ ನವೀಕರಸಲಾಗಿದೆ. ಶಿಲಾ ವೃಂದಾವನದ ಪಾರ್ಶ್ವ ಮುಖದಲ್ಲಿ ಶ್ರೀ ಗುರುರಾಯರ ಬಿಂಬವಿದ್ದು ಉಳಿದಂತೆ ಮೂರು ಮುಖಗಳಲ್ಲಿ ಶ್ರೀರಾಮ ಶ್ರೀಕೃಷ್ಣ ಶ್ರೀ ವೇದವ್ಯಾಸರ ಸುಂದರ ಬಿಂಬಗಳನ್ನು ಕೆತ್ತಲಾಗಿರುವ ಅಪರೂಪದ ಸನ್ನಿಧಿ ಇದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ