ಕಾರಡ್ಕ: ಕಾವ್ಯಗಳನ್ನು ತಿಳಿಯುವ ಮೂಲಕ ಜೀವನ ಮೌಲ್ಯಗಳನ್ನು ಪಡೆದುಕೊಳ್ಳಬಹುದು ಎಂದು ಶ್ರೀಮತಿ ಜ್ಯೋತಿ ಕುಮಾರಿ ಹೇಳಿದರು. ಅವರು ಜಿ ವಿ ಎಚ್ ಎಸ್ ಎಸ್ ಕಾರಡ್ಕ ಶಾಲೆಯಲ್ಲಿ ನಡೆದ ಗಮಕ ಶ್ರಾವಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಗಮಕ ಕಲಾ ಪರಿಷತ್ತು ಕಾಸರಗೋಡು ಘಟಕ, ಸಿರಿಗನ್ನಡ ವೇದಿಕೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ಗಮಕ ಶ್ರಾವಣವನ್ನು ಕಾರಡ್ಕ ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯು ಸಂಯೋಜಿಸಿತ್ತು.
ಕಾರ್ಯಕ್ರಮವನ್ನು ಪಿಟಿಎ ಅಧ್ಯಕ್ಷ ಸುರೇಶ್ ಕುಮಾರ್ ಉದ್ಘಾಟನೆ ಮಾಡಿದರು. ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿರಿಗನ್ನಡ ವೇದಿಕೆಯ ಅಧ್ಯಕ್ಷ ವಿ.ಬಿ. ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯಶಿಕ್ಷಕ ಸಂಜೀವ ಎಂ ಶುಭಹಾರೈಸಿದರು. ಸ್ಟಾಫ್ ಸೆಕ್ರೆಟರಿ ಡಾ.ಅಶೋಕ, ಯಕ್ಷಗಾನ ಅರ್ಥಧಾರಿ ಶ್ಯಾಮ ಆಳ್ವ ಕಡಾರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು| ದೇವಿಕಾ ಪ್ರಾರ್ಥಿಸಿದರು. ಕು|ಭೂಮಿಕ ಸ್ವಾಗತಿಸಿದರು. ಕು|ಅಭೀಕ್ಷ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು.
ತೊರವೆ ರಾಮಾಯಣದ ಭಾರ್ಗವ ಗರ್ವಭಂಗ ಎಂಬ ಭಾಗವನ್ನು ಮಾಧವ ಭಟ್ ಪಣಿಯೆ ವಾಚಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ಬೇಸಿ ಗೋಪಾಲಕೃಷ್ಣ ಭಟ್ ವ್ಯಾಖ್ಯಾನಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ