ಶಿವಮೊಗ್ಗ: ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಇಂಗ್ಲಿಷ್ ವಿಭಾಗದ ಸಾಹಿತ್ಯ ವೇದಿಕೆ, ಐ, ಕ್ಯೂ, ಎ, ಸಿ, ಸಹಯೋಗದೊಂದಿಗೆ ಶನಿವಾರ (ಆ.9) ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿಗಳ ಭಿತ್ತಿ ಬರಹವಾದ "INKSPIRE" ಅನ್ನು ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ರಾಜೇಂದ್ರ ಚೆನ್ನಿಯವರು ಬಿಡುಗಡೆಗೊಳಿಸಿದರು.
ಬಿಡುಗಡೆಗೊಳಿಸಿ ಮಾತನಾಡಿದ ಪ್ರೊ. ಚೆನ್ನಿಯವರು ಸಾಹಿತ್ಯದ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸಲು ಮೊದಲು ಅವಕಾಶ ಸಿಗುವುದೇ ಇಂತಹ ಭಿತ್ತಿ ಬರಹಗಳ ಮೂಲಕ ಆದ್ದರಿಂದ ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ತಮ್ಮಲ್ಲಿರುವ ಬರಹ ಕೌಶಲ್ಯವನ್ನು ಪ್ರಬುದ್ಧಗೊಳಿಸಿಕೊಳ್ಳಲು ಸೂಚಿಸಿದರು.
ಇಂದಿನ ಪೀಳಿಗೆಯ ಯುವಜನತೆಗೆ ಬರಹದ ಮೂಲಕ ವಿಚಾರಗಳನ್ನು ಭಾವನೆಗಳನ್ನು ಅವಕಾಶ ಸಿಗುವುದೇ ತೀರ ವಿರಳವಾಗಿದೆ. ಏಕೆಂದರೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ರೀಲ್ಸ್‌ಗಳು ಇವುಗಳ ಮೂಲಕ ಅಭಿವ್ಯಕ್ತಿಸಲು ಅವಕಾಶಗಳಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ತಾವು ಕೂಡ ತಮ್ಮ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಧಾರವಾಡದಲ್ಲಿ ಈ ರೀತಿಯ ಭಿತ್ತಿ ಬರಹಗಳ ಮೂಲಕವೇ ಕವನ, ಕಥೆಗಳನ್ನು ಬರೆಯುವುದು ಸಾಧ್ಯವಾಯಿತು ಎಂದು ಹೇಳಿದರು.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿವರ್ಷ ರ‍್ಯಾಂಕ್ ಪಡೆಯುವುದರ ಜೊತೆಗೆ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಷಯ ಜೊತೆಗೆ ಭಿತ್ತಿಬರಹ, ಅಂಕಣಬರಹ, ಚಿತ್ತಾರ (E-magazine)ಗಳನ್ನು ವಿದ್ಯಾರ್ಥಿಗಳೆ ಸಂಪಾದಿಸಿ ಹೊರತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇಂಗ್ಲಿಷ್ ವಿಭಾಗದ ಈ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಯವರು ಮಾತನಾಡಿ, ಮನಶಾಸ್ತ್ರಿಯ ಹಿನ್ನಲೆಯಿಂದಲೂ ಸಾಹಿತ್ಯ ಬಹಳ ಮುಖ್ಯವಾಗುತ್ತದೆ, ಈ ನೆಲೆಯಿಂದ ವಿದ್ಯಾರ್ಥಿಗಳು ತಮ್ಮನ್ನು ತಾವು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಪ್ಪು ಸರಿಗಳ ವಿವೇಚನೆಯನ್ನು ಬಿಟ್ಟು ಸಕ್ರಿಯವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
2025/26 ಶೈಕ್ಷಣಿಕ ವರ್ಷ ಪೂರ್ತಿ ಕಾಲೇಜಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ತೊದಗಿಸಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಅವಕಾಶಗಳನ್ನ ಒದಗಿಸಿಕೊಡುತ್ತಿದೆ, ಅವುಗಳ ಉಪಯೋಗವನ್ನು ಪಡೆದುಕೊಂಡು ಮುಂದಿನ ಜೀವನ ರೂಪಿಸಿಕೊಳ್ಳಬೇಕು. ಇಂಗ್ಲಿಷ್ ಸಾಹಿತ್ಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಮನಶಾಸ್ತ್ರ ಮತ್ತು ಸಾಹಿತ್ಯ ಒಟ್ಟಿಗೆ ಓದುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರೇಷ್ಮಾ, ಉಪನ್ಯಾಸಕರಾದ ಗಣೇಶ್ ಪ್ರಸಾದ್, ಕು.ಯೋಷಿತಾ.ಎಸ್.ಸೊನಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಬಿಎ ವಿದ್ಯಾರ್ಥಿನಿ ಕು. ಅಪೂರ್ವ ನಿರೂಪಿಸಿದರು, ತೃತೀಯ ಬಿಎ ವಿದ್ಯಾರ್ಥಿನಿ ಆಯೇಷ ಸಿದ್ಧಿಕ ಸ್ವಾಗತಿಸಿದರು, ಪ್ರಥಮ ಬಿಎ ವಿದ್ಯಾರ್ಥಿನಿ ಕು. ದೀಪ್ತಿ ವೈ ಸಿ ವಂದನಾರ್ಪಣೆಯನ್ನು ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)





