ಉಡುಪಿ: ಎಬಿವಿಪಿ ವತಿಯಿಂದ ವಿವಿಧ ಕಡೆ ರಕ್ಷಾಬಂಧನ ಆಚರಣೆ

Upayuktha
0


ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ರಕ್ಷಾ ಬಂಧನದ ವಿಶೇಷ ದಿನವನ್ನು ವಿವಿಧ ಕಡೆಗಳಲ್ಲಿ ರಾಷ್ಟ್ರಾಭಿಮಾನದ ಸಂಕೇತವಾದ ರಕ್ಷೆಯನ್ನು ಕಟ್ಟುವ ಮೂಲಕ ಆಚರಿಸಲಾಯಿತು.


ನಗರದ ವಿವಿಧ ಭಾಗದಲ್ಲಿ ದೇಶ ಸೇವೆ ಗೈಯುತ್ತಿರುವ ಪೊಲೀಸ್ ಅಧಿಕಾರಿಗಳು, ಅಂಚೆ ಕಛೇರಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಗೌರವಪೂರ್ವಕವಾಗಿ ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾಬಂಧನ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.


ವಿವಿಧ ಕಡೆ ನಡೆದ ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಸಂಚಾಲಕರಾದ ಶ್ರೇಯಸ್, ನಗರ ಕಾರ್ಯದರ್ಶಿ ಮಾಣಿಕ್ಯ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ, ನಗರ ಸಂಪರ್ಕ ಪ್ರಮುಖ್ ಮನೀಶ್, ಹಾಗೂ ಪ್ರಮುಖರಾದ ವಿನೀತ್, ಸಂಜನಾ, ವಾಗ್ದೇವಿ, ಭಾರ್ಗವ್, ಪ್ರಶ್ಮ, ರಂಜಿತ್, ಪುಷ್ಪ ಮತ್ತು ಅಮೃತ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Advt Slider:
To Top